• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಪುಂಸಕತ್ವ ಮುಚ್ಚಿಟ್ಟು ವಿಚ್ಛೇದನ ಕೇಳಿದ ವೈದ್ಯ ಪತಿ!

|

ಬೆಂಗಳೂರು, ಡಿ. 15: ನಪುಂಸಕತ್ವ ಮುಚ್ಚಿಟ್ಟು ಹೆಂಡತಿಯ ಮೇಲೆ ಸಲ್ಲದ ಆರೋಪ ಹೊರಿಸಿ ವಿಚ್ಛೇದನ ಪಡೆಯಲೆತ್ನಿಸಿದ ವೈದ್ಯನೊಬ್ಬನ ಅರ್ಜಿಯನ್ನು ಕುಟುಂಬ ನ್ಯಾಯಾಲಯ ತಿರಸ್ಕರಿಸಿದೆ.

ಹೆಂಡತಿ ಮಧ್ಯರಾತ್ರಿ ಎದ್ದು ದೊಡ್ಡದಾಗಿ ಧರ್ಮಗ್ರಂಥ ಓದುತ್ತಾಳೆ. ಆಕೆಗೆ ಆಸ್ತಮಾ ಇದೆ ಎಂದು ಮುಂತಾಗಿ ಅನೇಕ ಅರ್ಥವಿಲ್ಲದ ಆರೋಪ ಮಾಡಿದ್ದ. ವಿಚಾರಣೆ ನಡೆಸಿದ ನ್ಯಾಯಾಲಯ ಈತ ಏನನ್ನೋ ಮುಚ್ಚಿಡಲು ಯತ್ನಿಸುತ್ತಿದ್ದಾನೆ ಎಂಬುದನ್ನು ಮನಗಂಡಿದೆ. ಹೆಂಡತಿಗೆ ಪರಿಹಾರಾರ್ಥವಾಗಿ 1 ಲಕ್ಷ ರೂ. ನೀಡುವಂತೆಯೂ ತಿಳಿಸಿದೆ.[ದುಬೈನಲ್ಲಿ ಸಂಸಾರ ಮುರಿದ ವಾಟ್ಸಾಪ್ ಸಂದೇಶ]

2011ರ ಸಪ್ಟಂಬರ್ ನಲ್ಲಿ ವೈದ್ಯ ಕೇರಳದಲ್ಲಿ ಮದುವೆಯಾಗಿದ್ದ. ಬೆಂಗಳೂರಿನಲ್ಲಿ ವಾಸವಿದ್ದ ವೈದ್ಯ ತನ್ನ ತಂದೆ ತಾಯಿ ನಡೆಸುತ್ತಿದ್ದ ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಿದ್ದ. ಹೆಂಡತಿ ಯಾವುದೇ ಕಾರಣವಿಲ್ಲದೇ ಕುಟುಂಬದವರ ಎದುರೇ ನನ್ನ ಮೇಲೆ ಹಲ್ಲೆ ಮಾಡಿದ್ದಾಳೆ. ಮನೆಯ ಬಾಗಿಲು ಕಿಟಕಿಗಳನ್ನು ಗಂಟೆಗಟ್ಟಲೇ ಹಾಕಿರುತ್ತಾಳೆ. ಸುಮ್ಮನೆ ಸಲ್ಲದ ಆರೋಪ ಮಾಡುತ್ತ ಕೂಗಾಡುತ್ತಿರುತ್ತಾಳೆ. ಹಾಗಾಗಿ ನನಗೆ ಡೈವೋರ್ಸ್ ನೀಡಿ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ.

ಆದರೆ ಅಲ್ಲಿ ನಡೆದ ಘಟನಾವಳಿಗಳು ಸಂಪೂರ್ಣ ಭಿನ್ನವಾಗಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ. ಮದುವೆಯಾದ ನಂತರ ವೈದ್ಯ ಒಂದೇ ಒಂದು ದಿನ ಸರಿಯಾದ ದಾಂಪತ್ಯ ಜೀವನ ನಡೆಸಿಲ್ಲ. ಗಂಡ ಹೆಂಡತಿ ನಡುವೆ ಯಾವುದೇ ರೀತಿಯ ದೈಹಿಕ ಸಂಪರ್ಕ ನಡೆದಿಲ್ಲ.[ಪತ್ನಿ ಊಟ ಬಚ್ಚಿಟ್ಳು ಪತಿ ವಿಚ್ಛೇದನ ಪಡೆದ]

ಹೆಂಡತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಸಮಯವನ್ನೆಲ್ಲ ತನ್ನ ಪಾಲಕರು ಮತ್ತು ಸ್ನೇಹಿತರೊಂದಿಗೆ ಕಳೆದಿದ್ದಾನೆ. 2012 ರ ಫೆಬ್ರವರಿ ನಂತರ ಇಬ್ಬರು ಬೇರೆ ಬೇರೆಯಾಗಿ ಮಲಗಲು ಆರಂಭಿಸಿದ್ದಾರೆ ಈ ಎಲ್ಲ ಸಂಗತಿಗಳು ಕ್ರಾಸ್ ಎಕ್ಸಾಮಿನೆಶನ್ ಸಮಯದಲ್ಲಿ ಬೆಳಕಿಗೆ ಬಂದಿದೆ.

ಇದನ್ನೆಲ್ಲ ವಿಚಾರಣೆ ನಡೆಸಿದ ಕುಟುಂಬ ನ್ಯಾಯಾಲಯದ ನ್ಯಾಯಾಧೀಶರು, ಮದುವೆಗೆ ಮುನ್ನ ಎಂಗೇಜ್ ಮೆಂಟ್ ನಡೆದು 7 ತಿಂಗಳ ಕಾಲಾವಕಾಶವಿತ್ತು. ಈ ಸಮಯದಲ್ಲಿ ವೈದ್ಯ ವರನ ಬಗ್ಗೆ ಸರಿಯಾದ ಮಾಹಿತಿ ಕಲೆ ಹಾಕದಿರುವುದು ತಪ್ಪಾಗಿ ಪರಿಣಮಿಸಿದೆ. ನ್ಯಾಯಾಲಯ ಹೇಳಿ ಕಳಿಸಿದಾಗ ವೈದ್ಯ ವಿಚಾರಣೆಗೆ ಹಾಜರಿರಬೇಕು ಎಂದು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A family court has called the bluff of a doctor after he sought to seek divorce from his dentist-wife citing false grounds, including accusing her of reciting from scriptures during midnight. The court found that the man was only trying to hide his impotency, dismissed his petition and directed him to pay his wife Rs 1 lakh compensation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more