ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಣುವಿನೊಳಗೆ ಇಣುಕುನೋಟ, ಕಣಕಣಗಳ ಮಾಯಾಲೋಕ

By Prasad
|
Google Oneindia Kannada News

ಬೆಂಗಳೂರು, ಜೂನ್ 19 : ಇಡೀ ವಿಶ್ವದಲ್ಲಿರುವ ಪ್ರತಿಯೊಂದು ವಸ್ತುವೂ ಅಣುವಿನಿಂದಲೇ ಮಾಡಲ್ಪಟ್ಟಿವೆ. ವಸ್ತುಗಳು ಮಾತ್ರವಲ್ಲ, ಈ ಎಲ್ಲ ಸಂಶೋಧನೆ ಮಾಡುತ್ತಿರುವ, ಅಸಾಧ್ಯವಾದುದನ್ನೂ ಸಾಧ್ಯವಾಗಿಸುತ್ತಿರುವ ಮಾನವನ ಕಣಕಣದಲ್ಲಿಯೂ ಅಣುವಿದೆ.

ಹಾಗಿದ್ರೆ, ಈ ಅಣುವೆಂದರೇನು? ಇದರಲ್ಲಿ ಏನೇನಿದೆ? ತಿಳಿಯಲು ನೀವು ಉತ್ಸುಕರಾಗಿದ್ದರೆ ಕನ್ನಡದಲ್ಲಿ ತಿಳಿಸಲು ಸಿದ್ಧವಾಗಿದ್ದಾರೆ ಅರಿಮೆ.ಆರ್ಗ್ ನ ಸಂಪಾದಕ ಪ್ರಶಾಂತ್ ಸೊರಟೂರ ಅವರು.

Do you want to know more about molecule in Kannada?

ಪ್ರತಿವಾರ ವಿವಿಧ ವಿಷಯಗಳೊಂದಿಗೆ ಕನ್ನಡಿಗರನ್ನು ತಲುಪುತ್ತಿರುವ, ಕನ್ನಡಿಗರ ಜ್ಞಾನವರ್ಧನೆ ಮಾಡುತ್ತಿರುವ 'ಮುನ್ನೋಟ' ಕನ್ನಡ ಪುಸ್ತಕ ಮಳಿಗೆ 'ಅಣುವಿನೊಳಗೆ ಇಣುಕುನೋಟ' ಎಂಬ ವಿಶಿಷ್ಟವಾದ ಕಾರ್ಯಕ್ರಮವನ್ನು ಇದೇ ಭಾನುವಾರ, ಜೂನ್ 25ರಂದು ಬಸವನಗುಡಿಯಲ್ಲಿರುವ ಮುನ್ನೋಟದಲ್ಲಿ ಬೆಳಿಗ್ಗೆ 11.30ಕ್ಕೆ ಆಯೋಜಿಸಿದೆ.

ಅಣುಗಳಿಂದ ಮಶೀನ್ ಗಳನ್ನು ತಯಾರಿಸುವತ್ತ ವಿಜ್ಞಾನಿಗಳು ದಾಪುಗಾಲಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಅಣುಗಳಿಂದ ಪುಟಾಣಿ ಮಾಲಿಕ್ಯುಲಾರ್ ಮಶೀನ್ ಮುನ್ನಲೆಗೆ ಬರಲಿದ್ದು, ವೈದ್ಯಕೀಯ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಬಳಕೆಯಾಗಲಿದೆ.

ಅಣುವಿನ ಬಗ್ಗೆ ಆಸಕ್ತಿಯಿದ್ದು, ಇನ್ನಷ್ಟು ತಿಳಿದುಕೊಳ್ಳಬೇಕೆಂದಿದ್ದರೆ ಈ ವಿಳಾಸಕ್ಕೆ ಭಾನುವಾರ ಖಂಡಿತ ಬನ್ನಿ. ವಿಳಾಸ : ಮುನ್ನೋಟ, ನಂ. 67, ಸೌತ್ ಅವೆನ್ಯೂ ಕಾಂಪ್ಲೆಕ್ಸ್, ಡಿವಿಜಿ ರಸ್ತೆ, ನಾಗಸಂದ್ರ ಸರ್ಕಲ್ ಬಳಿ, ಬಸವನಗುಡಿ, ಬೆಂಗಳೂರು - 560 004.

English summary
Do you want to know more about molecule and molecular structure in Kannada? Then participate in the program organized by Monnota in Bengaluru on 26th June, 2017. Arime.org editor Prashant Soratur will be talking about this interesting subject.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X