ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಲ್‌ಗಳಲ್ಲಿ ಮೊಬೈಲ್ ನಂಬರ್ ಕೊಡಬೇಡಿ: ಪೊಲೀಸ್ ಆಯುಕ್ತ

|
Google Oneindia Kannada News

ಬೆಂಗಳೂರು, ಡಿಸೆಂಬರ್ 16: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಜನರಿಗೆ ಪ್ರಮುಖ ಸೂಚನೆಯೊಂದನ್ನು ನೀಡಿದ್ದು, ಶಾಪಿಂಗ್ ಮಾಲ್ ಮತ್ತಿತರೆಗಳೆಡೆ ಮೊಬೈಲ್ ಸಂಖ್ಯೆ ನೀಡಬೇಡಿ ಎಂದು ಹೇಳಿದ್ದಾರೆ.

ಟ್ವೀಟ್ ಮಾಡಿರುವ ಭಾಸ್ಕರ್ ರಾವ್, 'ಶಾಪಿಂಗ್ ಮಾಲ್, ಅಂಗಡಿಗಳು ಮತ್ತಿತರೆ ಕಡೆ ಮೊಬೈಲ್ ಸಂಖ್ಯೆಗಳನ್ನು ನೀಡಬೇಡಿ, ಇದು ಸೈಬರ್ ಅಪರಾಧದಿಂದ ಪಾರಾಗುವ ಮೊದಲ ಹೆಜ್ಜೆ' ಎಂದು ಹೇಳಿದ್ದಾರೆ.

ಸೈಕಲ್‌ನಲ್ಲಿ ಬೆಂಗಳೂರು ಪೊಲೀಸರ ಬೀಟ್ ಸೈಕಲ್‌ನಲ್ಲಿ ಬೆಂಗಳೂರು ಪೊಲೀಸರ ಬೀಟ್

'ನಿಮ್ಮ ಮೊಬೈಲ್ ಸಂಖ್ಯೆ ನೀಡುವುದು ಎಲ್ಲ ರೀತಿಯ ಸೈಬರ್ ಅಪರಾಧಗಳಿಗೆ ಬಾಗಿಲು ತೆರೆದಂತೆ' ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.

Do Not Share Mobile Numbers In Shopping Malls: Bengaluru Police Commissioner

'ನಿಮ್ಮ ಮೊಬೈಲ್ ಸಂಖ್ಯೆ ಪಡೆದುಕೊಳ್ಳುವ ಅವರು ಅದನ್ನು ಡಾಟಾ ಕೊಳ್ಳುವವರಿಗೆ ಮಾರಿಬಿಡುತ್ತಾರೆ, ಅವರು ಮೊಬೈಲ್ ಸಂಖ್ಯೆಯನ್ನು ಹೇಗೆ ಬೇಕಾದರೂ ಬಳಸಬಹುದಾಗಿರುತ್ತದೆ' ಎಂದು ಹೇಳಿದ್ದಾರೆ.

ಮೊಬೈಲ್ ಸಂಖ್ಯೆಗಳಿಂದಲೇ ಸಾಕಷ್ಟು ಸೈಬರ್ ಕ್ರೈಂ ಆಗುತ್ತವೆಂದು ಭಾಸ್ಕರ್ ರಾವ್ ಅವರು ಈ ಹಿಂದೆಯೂ ಹೇಳಿದ್ದರು. ಮೊಬೈಲ್ ಸಂಖ್ಯೆಗೆ ನಮ್ಮ ಆಧಾರ್ ಮಾಹಿತಿ ಲಿಂಕ್ ಆಗಿರುತ್ತದೆ. ಮೊಬೈಲ್ ಸಂಖ್ಯೆ ಪಡೆದವರು ನಮ್ಮ ಆಧಾರ್ ಮಾಹಿತಿಯನ್ನು ಹೊರತೆಗೆಯಬಹುದಾದ ಸಂಭವ ಇರುತ್ತದೆ.

ಕಮೀಷನರ್ ಅವರಿಂದ ಪೊಲೀಸರಿಗೆ ಮಹತ್ವದ ವಾಕಿ-ಟಾಕಿ ಸಂದೇಶಕಮೀಷನರ್ ಅವರಿಂದ ಪೊಲೀಸರಿಗೆ ಮಹತ್ವದ ವಾಕಿ-ಟಾಕಿ ಸಂದೇಶ

ಬೆಂಗಳೂರು ಸೈಬರ್ ಕ್ರೈಂ ಗಳ ರಾಜಧಾನಿ ಆಗಿ ಬದಲಾಗುತ್ತಿದೆ. ಸಾಮಾನ್ಯ ಅಪರಾಧ ಪ್ರಕರಣಗಳಿಗಿಂತಲೂ ಸೈಬರ್ ಅಪರಾಧಗಳು ಇತ್ತೀಚೆಗೆ ನಗರದಲ್ಲಿ ಹೆಚ್ಚಾಗಿರುವ ಬಗ್ಗೆ ಸಹ ಕೆಲವು ದಿನಗಳ ಹಿಂದಷ್ಟೆ ವರದಿ ಆಗಿತ್ತು.

English summary
Bengaluru city police commissioner Bhaskar tweeted that, do not share mobile numbers in shopping malls and shops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X