ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಕಾಡುಗಳನ್ನು ರಕ್ಷಿಸಲು ಹೊರಗಿನವರ ಸಹಾಯ ಬೇಡ:ಅರಣ್ಯ ಇಲಾಖೆ

By ಬೆಂಗಳೂರು ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಏಪ್ರಿಲ್ 24: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಗೋಪಾಲಸ್ವಾಮಿ ಬೆಟ್ಟ ವಲಯದ ಪ್ರದೇಶಕ್ಕೆ ಇದೇ ಫೆಬ್ರವರಿಯಲ್ಲಿ ಬೆಂಕಿಬಿದ್ದು ಸುಟ್ಟಿದ್ದು, ಈ ಬಗ್ಗೆ ಪೂರ್ತಿಯಾದ ವಿವರವನ್ನು ಬೆಂಗಳೂರಿನ ಅರಣ್ಯ ಪಡೆ ಮುಖ್ಯಸ್ಥರಾದ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಗಳು ನೀಡಿದ್ದಾರೆ. ಅದರ ಸಾರಾಂಶ ಹೀಗಿದೆ.

ಅಂದು ಬಿದ್ದ ಹೆಚ್ಚಿನ ಬೆಂಕಿಯು ನೆಲಮಟ್ಟದಾಗಿದ್ದು, ಲಂಟಾನವು ಬೆಂಕಿಗೆ ಆಹುತಿಯಾಗಿರುತ್ತದೆ. ಉಳಿದಂತೆ ನೆಲಮಟ್ಟದ ಭಗ್ನಾವಶೇಷ ಒಣಗಿ ಸತ್ತ ಮತ್ತು ಬಿದ್ದ ಮರಗಳು, ಕೆಲವು ಒಣಗಿ ನಿಂತ ಹಾಗೂ ಸತ್ತ ಹುಲ್ಲುಗಳು ಸುಟ್ಟಿರುತ್ತದೆ. ಆದರೆ ನಿಂತ ಹಸಿರು ಮರಗಳು ಸುಟ್ಟಿರುವುದಿಲ್ಲ.ತೆಳುವಾದ ಸಣ್ಣ ಪುನರುತ್ಪಾದನೆಯ ಸಸ್ಯಗಳು ಸುಟ್ಟಿದ್ದು, ಇವು ಮತ್ತೆ ಚಿಗುರಿ ಬೆಳೆಯುತ್ತದೆ.

ಅರಣ್ಯ ನಾಶ:ತಂಬಾಕು ಬೆಳೆಗಾರರಿಗೆ ಸಸಿ ನೀಡಲು ಮುಂದಾದ ಅರಣ್ಯ ಇಲಾಖೆಅರಣ್ಯ ನಾಶ:ತಂಬಾಕು ಬೆಳೆಗಾರರಿಗೆ ಸಸಿ ನೀಡಲು ಮುಂದಾದ ಅರಣ್ಯ ಇಲಾಖೆ

ಬೆಂಕಿ ಅನಾಹುತದ ಪ್ರದೇಶಗಳಲ್ಲಿ ಎಲ್ಲಿಯೂ ಪ್ರಾಣಿಗಳು ಸತ್ತಿರುವ ಬಗ್ಗೆ ಕಂಡುಬಂದಿರುವುದಿಲ್ಲ. ಇದಲ್ಲದೆ ಸ್ವಯಂ ಸೇವಕರಿಗೂ ಸಹಾ ಪ್ರಾಣಿಗಳು ಸತ್ತಿರುವ ಬಗ್ಗೆ ಗಮನಕ್ಕೆ ಬಂದಿರುವುದಿಲ್ಲ.

ಆದರೆ ಕೆಲವು ದುರುಳರು ಬೆಂಕಿಯಿಂದ ಎಲ್ಲಾ ಮರಗಳು ಮತ್ತು ಪ್ರಾಣಿಗಳೆಲ್ಲಾ ಸುಟ್ಟು ಹೋಗಿದ್ದು ಬೃಹತ್ ಪ್ರಮಾಣದಲ್ಲಿ ಸದರಿ ಪ್ರದೇಶದಲ್ಲಿ ಗಿಡ ನೆಡುವ ಮೂಲಕ ಪುನರ್ ಜ್ಜೀವನಗೊಳಿಸಬೇಕು ಹಾಗೂ ಬೀಜದುಂಡೆಗಳನ್ನು ಬಿತ್ತನೆ ಮಾಡಬೇಕಿರುವುದಾಗಿ ತಪ್ಪು ಅಭಿಪ್ರಾಯ ಉಂಟು ಮಾಡುವುದರ ಜೊತೆಗೆ ಸದರಿಯವರು ಬೆಂಗಳೂರಿನಲ್ಲಿ ಬೀಜದುಂಡೆ ತಯಾರಿಸುವ ಕಾರ್ಯಕ್ರಮವನ್ನು ಸಾವರ್ಜನಿಕರಿಂದ ಹಣ ಸಂಗ್ರಹಿಸುವ ಮೂಲಕ ನಿರ್ವಹಿಸುವುದಾಗಿ ಬಿಂಬಿಸುತ್ತಿದ್ದಾರೆ.

 ಇದು ಶುದ್ಧ ವಂಚನೆ

ಇದು ಶುದ್ಧ ವಂಚನೆ

ಬಂಡೀಪುರ ಅರಣ್ಯ ಪ್ರದೇಶವನ್ನು ಪುನರುಜ್ಜೀವನಗೊಳಿಸಲು ಯಾವುದೇ ರೀತಿಯ ಹಣಕಾಸಿನ ಬೆಂಬಲ ಇಲಾಖೆಗೆ ಅಗತ್ಯವಿಲ್ಲ ಮತ್ತು ಹಣ ನೀಡುವಂತೆ ಯಾರಿಗೂ ಆಗ್ರಹಪಡಿಸುವುದಿಲ್ಲ. ಎಂದು ಈ ಮೂಲಕ ಸ್ಪಷ್ಟಿಕರಿಸಲಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಯಾರಾದರೂ ಹಣ ಸಂಗ್ರಹಣೆ ಮಾಡುತ್ತಿದ್ದರೆ ಅದು ಶುದ್ಧ ವಂಚನೆಯಾಗಿದೆ. ಬೆಂಕಿಯು ಕೇವಲ ನೆಲ ಮಟ್ಟದ ಬೆಂಕಿಯಾಗಿದೆ.

ಒಂದೆರೆಡು ಮಳೆಯಾದ ಕೂಡಲೇ ಸದರಿ ಪ್ರದೇಶವು ಪುನರುಜ್ಜೀವನಗೊಂಡು ಹಸಿರಿನಿಂದ ಕಂಗೊಳಿಸುತ್ತದೆ. ನಮ್ಮ ಪ್ರಯತ್ನ ಮೊಗ್ಗಿರುವ ಯಾವುದೇ ಲಾಂಟನವನ್ನು ಕೀಳುವುದು, ಸ್ಥಳೀಯರ ಸಹಾಯದಿಂದ ಮೆದಾರ ಬಿದಿರು, ಬೀಜದ ಉಂಡೆಗಳನ್ನು ಬಿತ್ತಿ ಆ ಪ್ರದೇಶದಲ್ಲಿ ಹೆಚ್ಚು ಮೇವನ್ನು ಬೆಳೆಯಲು ಸಹಾಯ ಮಾಡುವುದಾಗಿದೆ.

 ಸೆಲ್ಫಿ ತೆಗೆದುಕೊಳ್ಳುವಲ್ಲಿ ಆಸಕ್ತಿ

ಸೆಲ್ಫಿ ತೆಗೆದುಕೊಳ್ಳುವಲ್ಲಿ ಆಸಕ್ತಿ

ಹೊರಗಿನವರನ್ನು ಸುಟ್ಟ ಪ್ರದೇಶಕ್ಕೆ ಬರಲು ಅಥವಾ ಮಧ್ಯ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಬೇರೆ ಜಾತಿಯ ಬೀಜಗಳನ್ನು ಬಿತ್ತಲಾಗುವುದಿಲ್ಲ. ಬೆಂಕಿಯ ಸಮಯದಲ್ಲಿ ಬೆಂಕಿ ನಂದಿಸಲು ಸಹಾಯಕ್ಕೆ ಬರುವ ಸ್ವಯಂ ಸೇವಕರು ಬೆಂಕಿಯನ್ನು ನಂದಿಸುವ ಬದಲು ಸೆಲ್ಫಿ ತೆಗೆಸಿಕೊಳ್ಳುವುದರ ಮೇಲೆ ವಿಶೇಷ ಆಸಕ್ತಿ ಹೊಂದಿರುತ್ತಾರೆ. ದೊಡ್ಡ ಪ್ರಮಾಣದ ಜನರನ್ನು ನಿಯಂತ್ರಿಸುವುದು ಕಷ್ಟಕರವಾಗಿರುತ್ತದೆ ಮತ್ತು ಇಂತಹ ಸಂದರ್ಭದಲ್ಲಿ ಬೆಂಕಿ ನಂದಿಸುವ ಕೆಲಸಕ್ಕಿಂತ ಇತರ ಕಡೆ ಗಮನಹರಿಸುವುದೇ ದೊಡ್ಡ ಕೆಲಸವಾಗುವುದರ ಜೊತೆಗೆ ಬೆಂಕಿ ನಂದಿಸುವ ಕಾರ್ಯಕ್ಕೆ ತಡೆಯುಂಟಾಗುತ್ತದೆ.

 ಮಂಗಳೂರಿನಲ್ಲಿ ಬುಡಸಮೇತ ಮರ ಸ್ಥಳಾಂತರಕ್ಕೆ ಭಾರೀ ಪ್ರಶಂಸೆ ಮಂಗಳೂರಿನಲ್ಲಿ ಬುಡಸಮೇತ ಮರ ಸ್ಥಳಾಂತರಕ್ಕೆ ಭಾರೀ ಪ್ರಶಂಸೆ

 ಸ್ಥಳೀಯ ಗ್ರಾಮದ ಯುವಕರು ಬರುತ್ತಾರೆ

ಸ್ಥಳೀಯ ಗ್ರಾಮದ ಯುವಕರು ಬರುತ್ತಾರೆ

ಆದ್ದರಿಂದ ಅವಶ್ಯಕ ಇದ್ದಾಗ ಮಾತ್ರ ಅರಣ್ಯದಂಚಿನ ಸ್ಥಳೀಯ ಗ್ರಾಮದ ಸ್ವಯಂ ಸೇವಕರನ್ನು ಬೆಂಕಿ ನಂದಿಸುವ ಕಾರ್ಯಕ್ಕೆ ಬರುತ್ತಾರೆ. ಕೆಲಸ ಮುಗಿದ ನಂತರ ಹಿಂದಿರುಗುತ್ತಾರೆ. ಇಲಾಖೆಯು ಅವರನ್ನು ಅತಿಥಿಗಳು ಎಂದು ಪರಿಗಣಿಸುವುದಿಲ್ಲ ಮತ್ತು ವಸತಿ ಸೌಕರ್ಯ ಇತ್ಯಾದಿಗಳನ್ನು ಒದಗಿಸುವುದಿಲ್ಲ.

 ಹೇಗೆ ಆನೆಗಳಿಂದ ರಕ್ಷಿಸಿಕೊಳ್ಳಬೇಕು?

ಹೇಗೆ ಆನೆಗಳಿಂದ ರಕ್ಷಿಸಿಕೊಳ್ಳಬೇಕು?

ಬಂಡೀಪುರದಲ್ಲಿ ಆನೆಗಳು ಹೆಚ್ಚಾಗಿರುವುದಿಂದ ಸ್ಥಳೀಯ ಗ್ರಾಮಸ್ಥರಿಗೆ ತಮ್ಮನ್ನು ತಾವು ಹೇಗೆ ಆನೆಗಳಿಂದ ರಕ್ಷಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿದಿರುತ್ತದೆ. ಆದ್ದರಿಂದ ಇನ್ನು ಮುಂದೆ ತುರ್ತು ಪರಿಸ್ಥಿತಿಗಿಂತ ಸಮಯದಲ್ಲಿ ನಮ್ಮ ಕಾಡುಗಳನ್ನು ರಕ್ಷಿಸಲು ಹೊರಗಿನವರ ಸಹಾಯವನ್ನು ಪಡೆಯುವುದಿಲ್ಲ.

 ಬಂಡೀಪುರ ಅರಣ್ಯದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಆಕಸ್ಮಿಕವಲ್ಲ ಸೇಡು? ಬಂಡೀಪುರ ಅರಣ್ಯದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಆಕಸ್ಮಿಕವಲ್ಲ ಸೇಡು?

English summary
Forest department said do not need outside help to protect our forests.Here's a detailed information about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X