ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆಶಿ ವಿರುದ್ಧ ಷಡ್ಯಂತ್ರ: ಖುದ್ದು ಮೋದಿಗೆ ಮೊರೆ ಹೋದ ಡಿಕೆ ಸುರೇಶ್

By Nayana
|
Google Oneindia Kannada News

Recommended Video

ಡಿ.ಕೆ.ಶಿವಕುಮಾರ್ ವಿರುದ್ಧ ಷಡ್ಯಂತ್ರ: ಮೋದಿ ಮೊರೆ ಹೋದ ಡಿ.ಕೆ ಸುರೇಶ್ | Oneindia Kannada

ಬೆಂಗಳೂರು, ಸೆಪ್ಟೆಂಬರ್ 8: ತಮ್ಮ ಸಹೋದರ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ಷಡ್ಯಂತ್ರ ರೂಪಿಸಿದ್ದು, ಸಿಬಿಐ, ಇಡಿ, ಮತ್ತು ಐಟಿ ಇಲಾಖೆಗಳು ಬಿಜೆಪಿ ಸೇರುವಂತೆ ಒತ್ತಡ ಹೇರುತ್ತಿದೆ. ಹೀಗಾಗಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರನ್ನು ಖುದ್ದಾಗಿ ಭೇಟಿ ಮಾಡಿ ದೂರು ನೀಡುತ್ತೇನೆ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.

ಬೆಂಗಳೂರಿನ ಸದಾಶಿವನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ಷರ್ವದಲ್ಲಿ 9 ಕಡೆ ದಾಳಿ ನಡೆಸಿ ನಮ್ಮ ವಿರುದ್ಧ ನಾಲ್ಕು ಪ್ರಕಟಗಳನ್ನು ದಾಖಲಿಸಲಾಗಿದೆ.

ನೋಟು ಬದಲು ಪ್ರಕರಣ: ಬಂಧನದ ಭೀತಿಯಲ್ಲಿ ಡಿಕೆಶಿ ಆಪ್ತರು ನೋಟು ಬದಲು ಪ್ರಕರಣ: ಬಂಧನದ ಭೀತಿಯಲ್ಲಿ ಡಿಕೆಶಿ ಆಪ್ತರು

ಆದರೆ ಫೆಮಾ ಕಾಯ್ದೆ ಉಲ್ಲಂಘನೆಯಾಗದಿದ್ದರೂ ಕೂಡ ಸಿಬಿಐ ಮತ್ತು ಐಟಿ ಇಲಾಖೆಗಳು ಪ್ರಕಟಣವನ್ನು ಇಡಿಗೆ ಶಿಫಾರಸ್ಸು ಮಾಡಿದೆ. ಹೀಗಾಗಿ ರಾಜ್ಯ ಬಿಜೆಪಿ ಒತ್ತಡಕ್ಕೆ ಮಣಿದು ಸಿಬಿಐ ಮೋರ್ಚಾ, ಐಟಿ ಮೋರ್ಚಾ ಹಾಗೂ ಇಡಿ ಮೋರ್ಚಾದಂತೆ ಬಿಜೆಪಿ ಭಾಗವಾಗಿ ಕೇಂದ್ರದ ತನಿಖಾ ಸಂಸ್ಥೆಗಳು ಕೆಲಸ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

DKS brother accuses conspiracy by BJP and to meet PM Modi soon

ಇನ್ನೊಂದು ತಿಂಗಳಲ್ಲಿ ಡಿಕೆಶಿ ಬಂಧನವಾಗುತ್ತದೆ ಎಂದು ಬಿಜೆಪಿ ಮತ್ತು ಐಟಿ ಅಧಿಕಾರಿಗಳು ಹೇಳುತ್ತಿದ್ದಾರೆ ,ಡಿಕೆ ಶಿವಕುಮಾರ್ ಗ ಬಿಜೆಪಿ ಸೇರುವಂತೆ ಒತ್ತಡ ಹೇರಿದ್ದಾರೆ. ಸೂಕ್ತ ಸಂದರ್ಭದಲ್ಲಿ ಎಲ್ಲ ಬಹಿರಂಗ ಪಡಿಸುತ್ತೇವೆ.ಕಾಂಗ್ರೆಸ್ ನ ಏಳು ಶಾಸಕರಿಗೆ ಬಿಜೆಪಿ ಗಾಳ ಹಾಕಿದ್ದು, ಆಮಿಷ ಒಡ್ಡುತ್ತಿದೆ ಈ ಕುರಿತು ದಾಖಲೆಯನ್ನು ಶೀಘ್ರವೇ ಬಿಡುಗಡೆ ಮಾಡುತ್ತೇವೆ ಎಂದರು.

ಡಿಕೆಶಿ ಆಪ್ತರ ಮೇಲೆ ಸಿಬಿಐ ದಾಳಿ, ಕೋರ್ಟ್‌ಗೆ ವರದಿ ಸಲ್ಲಿಕೆ ಡಿಕೆಶಿ ಆಪ್ತರ ಮೇಲೆ ಸಿಬಿಐ ದಾಳಿ, ಕೋರ್ಟ್‌ಗೆ ವರದಿ ಸಲ್ಲಿಕೆ

ನಾವು ಫೆಮಾ, ಫೆರಾ ನಿಯಮ ಉಲ್ಲಂಘಿಸಿದ್ದರೆ ಇಡಿ ತನಿಖೆಗೆ ಕೊಡಬಹುದಿತ್ತು. ಆದರೆ, ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಸಿಬಿಐ, ಇಡಿ, ಐಟಿ ಇಲಾಖೆಗಳು ಮೋರ್ಚಾ ಘಟಕಗಳಾಗಿ ಕೆಲಸ ಮಾಡುತ್ತಿವೆ. ಪ್ರಧಾನಿ ಭೇಟಿಗೆ ಅವಕಾಶ ಕೋರಿದ್ದೇನೆ. ಸರ್ಕಾರಿ ಸಂಸ್ಥೆ ದುರ್ಬಳಕೆ ಬಗ್ಗೆ ಅವರ ಗಮನ ಸೆಳೆಯುತ್ತೇವೆ.

ತುರ್ತು ಸುದ್ದಿಗೋಷ್ಠಿಯಲ್ಲಿ ಸ್ಫೋಟಕ ಮಾಹಿತಿ ನೀಡಿದ ಡಿಕೆ ಬ್ರದರ್ಸ್ ! ತುರ್ತು ಸುದ್ದಿಗೋಷ್ಠಿಯಲ್ಲಿ ಸ್ಫೋಟಕ ಮಾಹಿತಿ ನೀಡಿದ ಡಿಕೆ ಬ್ರದರ್ಸ್ !

DKS brother accuses conspiracy by BJP and to meet PM Modi soon

ನಮ್ಮನ್ನು ಬಂಧಿಸಲು ಇಡಿಯವರು ಬೆಂಗಳೂರಿಗೆ ಬಂದಿದ್ದಾರೆ ಎಂಬ ಮಾಹಿತಿ ಹರಿದಾಡಿದೆ. ಬಂಧಿಸಿದರೆ ನ್ಯಾಯಾಲದ ಮೊರೆ ಹೋಗುತ್ತೇವೆ. ಸಿಬಿಐ ಹತ್ತು ದಿನದ ಹಿಂದೆ ನೋಟಿಸ್ ನೀಡಿತ್ತು. ವಿಚಾರಣೆಗೆ ಹಾಜರಾಗಿದ್ದೆವು. ಸಹಕಾರ ನೀಡಿದ್ದೇವೆ. ಬಂಧಿಸಿದ್ದರೆ ಮಾಡಿದರೆ ಎದುರಿಸುತ್ತೇವೆ. ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ, ಇಡಿಯವರು ಇದುವರೆಗೂ ನೋಟಿಸ್ ನೀಡಿಲ್ಲ ಎಂದು ತಿಳಿಸಿದರು.

English summary
MP D.K.Suresh has decided to meet prime minister Narendra Modi and will complaint against CBI, IT and ED which have allegedly targeted his minister brother D.K.Shivakumar soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X