ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಹೊಸ ಸವಾಲು ಹಾಕಿದ ಸಂಸದ ಡಿ.ಕೆ. ಸುರೇಶ್!

|
Google Oneindia Kannada News

ಬೆಂಗಳೂರು, ನ. 02: ಆರ್ ಆರ್ ನಗರ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಮೂರು ಪಕ್ಷಗಳ ಅಭ್ಯರ್ಥಿಗಳು ಇದೀಗ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿರುವ ಮುನಿರತ್ನ ಅವರ ರಾಜೀನಾಮೆಯಿಂದಲೇ ಈ ಚುನಾವಣೆ ಬಂದಿದೆ. ಉಪ ಚುನಾವಣೆ ನಡೆಯಲು ಮುನಿರತ್ನ ಅವರೇ ಕಾರಣ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಮುನಿರತ್ನ ಅವರು ಕೋಟಿ ಕೋಟಿ ರೂಪಾಯಿ ಹಣ ಪಡೆದು 'ಕೈ' ಕೊಟ್ಟು ಕಮಲ ಪಡೆ ಸೇರಿದ್ದಾರೆಂದು ಪ್ರಚಾರದಲ್ಲಿ ಕಾಂಗ್ರೆಸ್‌ ನಾಯಕರು ಮೇಲಿಂದ ಮೇಲೆ ಆರೋಪ ಮಾಡುತ್ತಲೇ ಬಂದಿದ್ದಾರೆ.

ಕಾಂಗ್ರೆಸ್ ನಾಯಕರ ಆರೋಪಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಎದುರೇ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಸ್ಪಷ್ಟನೆ ಕೊಟ್ಟಿದ್ದರು. ನನ್ನ ಬಗ್ಗೆ ಕೋಟಿ ಕೋಟಿ ರೂ. ಹಣ ಪಡೆದಿರುವ ಅಪಪ್ರಚಾರ ಮಾಡುತ್ತಿದ್ದಾರೆ. ಅಪಪ್ರಚಾರ ಮಾಡೋರು ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಬರಲಿ. ನಾನೂ ಬರ್ತೀನಿ, ಪ್ರಮಾಣ ಮಾಡ್ತೀನಿ. ನಾನು ದುಡ್ಡು ತಗೊಂಡಿದ್ದರೇ ಸರ್ವನಾಶ ಆಗಿಹೋಗಲಿ ಎಂದಿದ್ದರು.

ಇದೀಗ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರು ಮುನಿರತ್ನ ಅವರಿಗೆ ಹೊಸ ಸವಾಲು ಹಾಕಿದ್ದಾರೆ, ಏನದು ಸವಾಲು? ಇಲ್ಲಿದೆ ಮಾಹಿತಿ.

ಏನೆಲ್ಲ ಆ ನಾಟಕ ಮಾಡುತ್ತಿದ್ದೀರಿ

ಏನೆಲ್ಲ ಆ ನಾಟಕ ಮಾಡುತ್ತಿದ್ದೀರಿ

ಈ ಚುನಾವಣೆಗಾಗಿ ಏನೆಲ್ಲಾ ನಾಟಕ ಮಾಡುತ್ತಿದ್ದೀರಿ. ಏನೆಲ್ಲಾ ಅಕ್ರಮ ಮಾಡುತ್ತಿದ್ದೀರಿ? ಈ ಚುನಾವಣೆಯಿಂದ ಮೋದಿ ಅವರ ಸರ್ಕಾರಕ್ಕಾಗಲಿ, ಯಡಿಯೂರಪ್ಪನವರ ಸರ್ಕಾರಕ್ಕಾಗಲಿ ಯಾವುದೇ ಧಕ್ಕೆ ಆಗುವುದಿಲ್ಲ. ಈ ಚುನಾವಣೆ ಒಬ್ಬ ವ್ಯಕ್ತಿಯ ಹಣ, ಅಧಿಕಾರದ ಆಸೆಗೆ, ನಿಮ್ಮ ಅಕ್ರಮ ಮುಚ್ಚಿಕೊಳ್ಳಲು ಈ ನಡೆಯುತ್ತಿದೆ.

ಆರ್. ಆರ್. ನಗರ, ಶಿರಾ ಪ್ರಚಾರಕ್ಕೆ ತೆರೆ; ನ.3ಕ್ಕೆ ಮತದಾನಆರ್. ಆರ್. ನಗರ, ಶಿರಾ ಪ್ರಚಾರಕ್ಕೆ ತೆರೆ; ನ.3ಕ್ಕೆ ಮತದಾನ

ನೀವು ಜನರಿಗೆ ಮೋಸ ಮಾಡಿದ್ದು, ಅವರು 3 ನೇ ತಾರೀಖು ನಿಮಗೆ ತಕ್ಕ ಪಾಠ ಕಲಿಸುತ್ತಾರೆ. ನಿಮ್ಮ ಸಿನಿಮಾ ಅಂದು ಅಂತ್ಯವಾಗುತ್ತೆ. ಕಾರ್ಯಕರ್ತರು, ಮತದಾರರು ಹೆದರುವ ಅಗತ್ಯ ಇಲ್ಲ. ಪೊಲೀಸರು ಅಧಿಕಾರ ದುರ್ಬಳಕೆ ಮಾಡುವುದನ್ನು ನಿಲ್ಲಿಸಿದರೆ ಅಷ್ಟೇ ಸಾಕು ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.

ಧರ್ಮಸ್ಥಳದಲ್ಲಿ ಆಣೆ ಮಾಡೊದು ಬೇಡ

ಧರ್ಮಸ್ಥಳದಲ್ಲಿ ಆಣೆ ಮಾಡೊದು ಬೇಡ

ಬಿಜೆಪಿ ಅಭ್ಯರ್ಥಿ ಮುನಿರತ್ನಂ ನಾಯ್ಡು ಅವರು ಮಾತೆತ್ತಿದರೆ ಆಣೆ ಮಾಡಿ, ಆಣೆ ಮಾಡ್ತೇನೆ ಅಂತಾರೆ. ಅವರು ತಿರುಪತಿಗೆ ಹೋಗಿ ತಾವು ಮತದಾರರ ಗುರುತಿನ ಚೀಟಿ ಪ್ರಕರಣದಲ್ಲಿ ತಪ್ಪು ಮಾಡಿಲ್ಲ ಆಣೆ ಮಾಡಲಿ ಎಂದು ಡಿ.ಕೆ. ಸುರೇಶ್ ಅವರು ಸವಾಲು ಹಾಕಿದ್ದಾರೆ.

ಬೇರೆಯವರನ್ನು ಆಣೆಗೆ ಕರೆಯುವ ಮುನ್ನ ನೀವು ಹೋಗಿ ತಿರುಪತಿ ತಿಮ್ಮಪ್ಪನ ಸನ್ನಿದಿಯಲ್ಲೇ ಆಣೆ ಮಾಡಿ. ಬೇಕಾದರೆ ನಿಮ್ಮ ಜೊತೆಗೆ ಚಾನೆಲ್‌ನವರನ್ನೇ ಕರೆದುಕೊಂಡು ಹೋಗಿ ಅವರ ಎದುರಿನಲ್ಲೇ ಆಣೆ-ಪ್ರಮಾಣ ಮಾಡಿ. ಇನ್ನೊಂದು ಸಿನಿಮಾನ ಜನರಿಗೆ ತೋರಿಸಿ ಎಂದು ಲೇವಡಿ ಮಾಡಿದ್ದಾರೆ.

ಸಿದ್ದರಾಮಯ್ಯ ಇಲ್ದಿದ್ರೆ ಅಭಿವೃದ್ಧಿ ಮಾಡ್ರಿದ್ರಾ?

ಸಿದ್ದರಾಮಯ್ಯ ಇಲ್ದಿದ್ರೆ ಅಭಿವೃದ್ಧಿ ಮಾಡ್ರಿದ್ರಾ?

ಕ್ಷೇತ್ರದಲ್ಲಿ ನಾನು ಅಭಿವೃದ್ಧಿ ಮಾಡಿದ್ದೇನೆ ಅಂತಾ ಹೇಳುತ್ತಾ ಬಂದಿದ್ದೀರಿ. ಸಿದ್ದರಾಮಯ್ಯ ಅವರು ಇಲ್ಲದಿದ್ದರೆ, ಅವರು ಕೊಡದಿದ್ದರೆ ಎಲ್ಲಿ ಅಭಿವೃದ್ಧಿ ಮಾಡುತ್ತಿದ್ದಿರಿ? ನಿಮ್ಮ ವೈಯಕ್ತಿಕ ಅಭಿವೃದ್ಧಿ ಆಗಿದೆ ಅಷ್ಟೇ. ಇವತ್ತು ಕಳಪೆ ಕಾಮಗಾರಿ ಮಾಡಿದ್ದೀರಿ. ನಮ್ಮ ಸರ್ಕಾರ ಕೊಟ್ಟ ಹಣ ದುರ್ಬಳಕೆ ಮಾಡಿದ್ದೀರಿ ಹೊರತು ಸದ್ಬಳಕೆ ಮಾಡಿಲ್ಲ.

ಕನಕಪುರದವರಿಂದ ಆರ್. ಆರ್. ನಗರದಲ್ಲಿ ಹಣ ಹಂಚಿಕೆಕನಕಪುರದವರಿಂದ ಆರ್. ಆರ್. ನಗರದಲ್ಲಿ ಹಣ ಹಂಚಿಕೆ

ಹೆಣ್ಣಿನ ಬಗ್ಗೆ ಅಷ್ಟು ಕೀಳು ಮಾತು ಯಾಕೆ?

ಹೆಣ್ಣಿನ ಬಗ್ಗೆ ಅಷ್ಟು ಕೀಳು ಮಾತು ಯಾಕೆ?

ವಿನಾಕಾರಣ ಡಿ.ಕೆ ಶಿವಕುಮಾರ್ ಅವರ ಹೆಸರು ಹೇಳಿದರೆ ಏನೂ ಆಗಲ್ಲ. ನಮ್ಮ ಅಭ್ಯರ್ಥಿ ಬಗ್ಗೆ ನೀವು ಮನೆ, ಮನೆಗೆ ಹೋಗಿ ಎಷ್ಟು ತೀಕ್ಷ್ಣವಾಗಿ ಮಾತನಾಡಿದ್ದೀರಿ ಎಂಬುದರ ಬಗ್ಗೆ ನಮಗೆ ಗೊತ್ತಿದೆ. ಎಂತಹ ಪದಗಳನ್ನು ಬಳಸಿದ್ದೀರಿ ಅಂತಾ ಮಾಹಿತಿ ಇದೆ. ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಈ ಪರಿಸ್ಥಿತಿ ಬಂದಿದ್ದರೆ ಇದೇ ಮಾತನ್ನು ಹೇಳುತ್ತಿದ್ದಿರಾ? ನಮ್ಮ ಅಭ್ಯರ್ಥಿ ರಾಜಕೀಯಕ್ಕೆ ಬಂದು ಏನು ತಪ್ಪು ಮಾಡಿದ್ದಾರೆ? ನಿಮ್ಮ ಮನೆ ಹೆಣ್ಣುಮಕ್ಕಳು ಸ್ವತಂತ್ರವಾಗಿ ಬದುಕಬಾರದಾ? ಅವರನ್ನೆಲ್ಲ ನೀವು ಕಟ್ಟಿ ಹಾಕಿ, ಮನೆಯಲ್ಲೇ ಕೂರಿಸಿದ್ದೀರಾ? ನಿಮ್ಮ ಮನೆ ಹೆಣ್ಣು ಮಕ್ಕಳನ್ನೇ ಕಟ್ಟಿ ಹಾಕಿರುವ ನೀವು ಕ್ಷೇತ್ರದ ಹೆಣ್ಣು ಮಕ್ಕಳನ್ನು ಹೇಗೆ ರಕ್ಷಿಸುವಿರಿ? ಹೆಣ್ಣು ಮಕ್ಕಳ ಬಗ್ಗೆ ನಿಮಗೆ ಈ ತಾತ್ಸಾರದ ಮಾತು ಯಾಕೆ?' ಎಂದರು.

ಹಣ ಪಡೆದಿಲ್ಲ, ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲು ನಾನು ಸಿದ್ಧನಿದ್ದೇನೆ!ಹಣ ಪಡೆದಿಲ್ಲ, ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲು ನಾನು ಸಿದ್ಧನಿದ್ದೇನೆ!

Recommended Video

DK Ravi ನಾನು ತುಂಬಾ ಚನ್ನಾಗಿದ್ವಿ! | Kusuma Exclusive Interview | Part 2 | Oneindia Kannada

English summary
Congress MP DK Suresh said that BJP candidate Munirathna would go to Tirupati and swear if he had not done anything wrong in voter identity card scam. D.K. Suresh challenged BJP candidate Muniratnam Naidu to swears in Tirupati Timmappa Temple. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X