ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಕ್ಷೇತರರು ನಮ್ಮ ವಿರುದ್ಧ ಹೇಗೆ ಮತ ಹಾಕುತ್ತಾರೋ ನೋಡೋಣ: ಡಿಕೆಶಿ

|
Google Oneindia Kannada News

ಬೆಂಗಳೂರು, ಜುಲೈ 23: ಪಕ್ಷೇತರ ಶಾಸಕರು ಇಲ್ಲೇ ವಿಧಾನಸೌಧದ ಹತ್ತರಿದಲ್ಲೇ ಇದ್ದಾರೆ. ನಾನೂ ಅವರನ್ನು ಭೇಟಿ ಮಾಡಲು ಕಾಯುತ್ತಿದ್ದೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ವಿಧಾನಸೌಧದ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಮ್ಮ ಪಕ್ಷೇತರ ಶಾಸಕರು ಇಬ್ಬರನ್ನು ಇಲ್ಲೆ ಇಟ್ಟುಕೊಂಡಿದ್ದಾರೆ. ಅವರು ಬರಲಿ ಎಂದು ನಾನು ಕಾಯುತಿದ್ದೇನೆ, ಅದು ಹೇಗೆ ನಮ್ಮ ವಿರುದ್ಧ ಕೈ ಎತ್ತುತ್ತಾರೋ ನೋಡೋಣ' ಎಂದರು.

Live Updates ಯಡಿಯೂರಪ್ಪ ಅಂದು ಸಿಎಂ ಆಗಲು ಹೋಗಬಾರದಿತ್ತು: ಸಿದ್ದರಾಮಯ್ಯLive Updates ಯಡಿಯೂರಪ್ಪ ಅಂದು ಸಿಎಂ ಆಗಲು ಹೋಗಬಾರದಿತ್ತು: ಸಿದ್ದರಾಮಯ್ಯ

ಪಕ್ಷೇತರ ಶಾಸಕರು ವಿಧಾನಸೌಧಕ್ಕೆ ಬರುವಾಗ ಅವರನ್ನು ಡಿ.ಕೆ.ಶಿವಕುಮಾರ್ ಅವರು ಎದುರುಗೊಳ್ಳುವವರಿದ್ದಾರೆ, ಅವರೊಂದಿಗೆ ಮಾತನಾಡುವವರಿದ್ದಾರೆ ಎಂಬುದು ಖಚಿತವಾಗಿದ್ದು, ಡಿ.ಕೆ.ಶಿವಕುಮಾರ್ ಅವರು ಧಮಕಿ ಹಾಕುವ ದನಿಯಲ್ಲಿ ಮಾತನಾಡಿರುವುದು ನೋಡಿದರೆ ವಿಧಾನಸೌಧದಲ್ಲಿ ಮತ್ತೆ ಹೈಡ್ರಾಮಾ ನಡೆಯುವ ಸಾಧ್ಯತೆ ಕಂಡು ಬರುತ್ತಿದೆ.

ನಾಗೇಶ್ ಅವರು ಸದನಕ್ಕೆ ಬರುವ ಸಾಧ್ಯತೆ

ನಾಗೇಶ್ ಅವರು ಸದನಕ್ಕೆ ಬರುವ ಸಾಧ್ಯತೆ

ಪಕ್ಷೇತರ ಶಾಸಕರಾದ ಆರ್.ಶಂಕರ್ ಮತ್ತು ಎಚ್.ನಾಗೇಶ್ ಅವರು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದು ಬಿಜೆಪಿ ಜೊತೆ ಸೇರಿಕೊಂಡಿದೆ. ಅದರಲ್ಲಿ ಎಚ್.ನಾಗೇಶ್ ಅವರನ್ನು ವಿಶ್ವಾಸಮತ ಸಮಯದಲ್ಲಿ ಸದನಕ್ಕೆ ಕರೆದುಕೊಂಡು ಬರುವ ಸಾಧ್ಯತೆ ಇದೆ.

ಕೆಪಿಜೆಪಿ ಕಾಂಗ್ರೆಸ್‌ನಲ್ಲಿ ವಿಲೀನ

ಕೆಪಿಜೆಪಿ ಕಾಂಗ್ರೆಸ್‌ನಲ್ಲಿ ವಿಲೀನ

ಕೆಪಿಜೆಪಿಯಿಂದ ಗೆದ್ದಿದ್ದ ಆರ್.ಶಂಕರ್ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್‌ ಜೊತೆ ವಿಲೀನ ಮಾಡಿದ್ದು, ಅವರ ಹೆಸರಿಗೂ ವ್ಹಿಪ್ ಅನ್ನು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನೀಡಿದ್ದಾರೆ. ಹಾಗಾಗಿ ಅವರು ಸದನಕ್ಕೆ ಹಾಜರಾಗುವ ಸಾಧ್ಯತೆ ಕಡಿಮೆ ಇದೆ.

"ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ": ಕಗ್ಗ ಉಲ್ಲೇಖಿಸಿದ ಡಿಕೆಶಿ

ಬಿಜೆಪಿಯು ನಮ್ಮ ಶಾಸಕರ ದಿಕ್ಕು ತಪ್ಪಿಸುತ್ತಿದ್ದಾರೆ: ಡಿ.ಕೆ.ಶಿ

ಬಿಜೆಪಿಯು ನಮ್ಮ ಶಾಸಕರ ದಿಕ್ಕು ತಪ್ಪಿಸುತ್ತಿದ್ದಾರೆ: ಡಿ.ಕೆ.ಶಿ

ಮುಂದುವರೆದು ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ವ್ಹಿಪ್ ಬಗ್ಗೆ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಅವರು ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಶಾಸಕರ ಮೇಲೆ ವ್ಹಿಪ್ ಜಾರಿ ಆಗುವುದಿಲ್ಲ ಎನ್ನುತ್ತಿದ್ದಾರೆ ಹಾಗಾದರೆ ಅವರು ಏಕೆ ತಮ್ಮ ಶಾಸಕರಿಗೆ ವ್ಹಿಪ್ ನೀಡಿದರು ಎಂದು ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದರು.

ವ್ಹಿಪ್ ಬಗ್ಗೆ ದೇಶದ ದಿಕ್ಕು ತಪ್ಪಿಸುತ್ತಿದ್ದಾರೆ: ಡಿಕೆ.ಶಿವಕುಮಾರ್‌

ವ್ಹಿಪ್ ಬಗ್ಗೆ ದೇಶದ ದಿಕ್ಕು ತಪ್ಪಿಸುತ್ತಿದ್ದಾರೆ: ಡಿಕೆ.ಶಿವಕುಮಾರ್‌

ಬಿಜೆಪಿಯವರು ನಮ್ಮ ಶಾಸಕರ ದಿಕ್ಕು ತಪ್ಪಿಸುತ್ತಿದ್ದಾರೆ ಅಷ್ಟೆ ಅಲ್ಲದೆ ಇಡೀಯ ದೇಶಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ನಾನು ಹೆಚ್ಚು ಓದಿದವನಲ್ಲ, 48 ವರ್ಷಕ್ಕೆ ಪದವಿ ಪಡೆದವನು: ಡಿಕೆ ಶಿವಕುಮಾರ್ನಾನು ಹೆಚ್ಚು ಓದಿದವನಲ್ಲ, 48 ವರ್ಷಕ್ಕೆ ಪದವಿ ಪಡೆದವನು: ಡಿಕೆ ಶಿವಕುಮಾರ್

English summary
Minister DK Shivakumar said, 'i will see how independent MLAs lift there hands against the coalition government in today's vote of confidence'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X