ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಗುಡುಗಿದ ಡಿಕೆ ಶಿವಕುಮಾರ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 20: ರಾಜ್ಯದಲ್ಲಿ ಅನವಶ್ಯಕ ನಿಷೇಧಾಜ್ಞೆಗೆ, ಅಹಿತಕರ ವಾತಾವರಣಕ್ಕೆ ಅವಕಾಶ ನೀಡಿದವರು ಯಾರು ? ಮುಖ್ಯಮಂತ್ರಿ ಯಡಿಯೂರಪ್ಪ ಅವರಾ ಅಥವಾ ಗೃಹ ಸಚಿವ ಬಸವರಾಜ ಬೊಮ್ಮಾಯಿಯೇ ? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಈ ದೇಶದಲ್ಲಿ ಬ್ರಿಟಿಷರನ್ನು ಓಡಿಸಲು ಸಾವಿರಾರು ಜನ ತ್ಯಾಗ ಮಾಡಿದ್ದಾರೆ. ಅದೇ ರೀತಿ ಬಿಜೆಪಿಯನ್ನು ಓಡಿಸಲು ಜನರು ಮತ್ತೆ ದಂಗೆ ಏಳಲು ಆರಂಭಿಸಿದ್ದಾರೆ. ಇದು ಬಿಜೆಪಿಯ ಅಂತ್ಯಕ್ಕೆ ಮುನ್ನುಡಿ ಎಂದು ಹೇಳಿದರು.

ಸರ್ಕಾರವೇ ಮುಂದೆ ನಿಂತು ಕೊಂದಿದೆ: ಎಚ್ ಡಿ ಕುಮಾರಸ್ವಾಮಿ ಆರೋಪಸರ್ಕಾರವೇ ಮುಂದೆ ನಿಂತು ಕೊಂದಿದೆ: ಎಚ್ ಡಿ ಕುಮಾರಸ್ವಾಮಿ ಆರೋಪ

ರಾಜ್ಯದಲ್ಲಿ ಏನಾಗಿದೆ ಎಂದು 144 ನಿಷೇಧಾಜ್ಞೆ ಹಾಕಿದ್ದೀರಿ. ಯಾರೂ ಮನೆಯಲ್ಲಿ ಮದುವೆ ಮಾಡಬಾರದಾ? ಜನರು ತಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಹೇಳಬಾರದಾ? ಜನರ ಅಭಿಪ್ರಾಯ ಹತ್ತಿಕ್ಕುವ ಕೆಲಸ ಮಾಡುತ್ತಿದ್ದೀರಿ. ಬ್ರಿಟಿಷರಂತೆ, ಬಿಜೆಪಿ ಜನರ ಸ್ವಾತಂತ್ರ್ಯ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ.

DK Shivakumar Talks Against The Citizenship Amendment Act

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾವೆಲ್ಲರೂ ಸೇರಿ ಕೆಲಸ ಮಾಡಬೇಕಿದೆ. ಯಾವುದೇ ಪಕ್ಷ, ಮಾಧ್ಯಮ ಜನರು ತಮ್ಮದೇ ತತ್ವದಡಿ ಕೆಲಸ ಮಾಡುತ್ತಾರೆ. ಯಾವುದೇ ವ್ಯಕ್ತಿ ಯಾವುದೇ ಧರ್ಮ ಅನುಸರಿಸಲು ಅವಕಾಶವಿದೆ. ಅದೇ ಯಾವುದೇ ಸರ್ಕಾರಕ್ಕೆ ಒತ್ತಾಯ ಮಾಡಲು ಅವಕಾಶವಿಲ್ಲ. ಇಂದು ಮಂಗಳೂರು, ಬೆಂಗಳೂರು, ಕಲಬುರಗಿಯಲ್ಲಿ ಏನೆನು ನಡೆದಿವೆ ಎಂದು ಎಲ್ಲರಿಗೂ ಗೊತ್ತಿದೆ.

ತಿಭಟನಕಾರರು ತಮ್ಮ ಅಭಿಪ್ರಾಯ ಹೇಳಿ ಹೋಗುತ್ತಿದ್ದರು. ಆದರೆ ಸರ್ಕಾರವೇ ಅದಕ್ಕೆ ಅವಕಾಶ ಕಲ್ಪಿಸದೆ ಪರಿಸ್ಥಿತಿಯನ್ನು ಉದ್ವಿಗ್ನಗೊಳ್ಳುವಂತೆ ಮಾಡಿತು ಎಂದು ದೂರಿದರು.

ಜನರ ಬಳಿ ಮೂಲ ದಾಖಲಾತಿ‌ ಇಲ್ಲದೇ ಇದ್ದರೆ ಅವರನ್ನೆಲ್ಲಾ ಜೈಲಿಗೆ ಹಾಕುತ್ತಾರೆ. ಬಿಜೆಪಿ ನಾಯಕರು ಸಂವಿಧಾನ ಮುಗಿಸಲು ಈ ಮೂಲಕ ಬುನಾದಿ ಹಾಕುತ್ತಿದ್ದಾರೆ. ಮಹಾತ್ಮಾ ಗಾಂಧಿ, ನೆಹರೂ ನಾಯಕತ್ವದಲ್ಲಿ ಅಂಬೇಡ್ಕರ್ ಸಂವಿಧಾನಕ್ಕೆ ಅಡಿಪಾಯ ಹಾಕಿದ್ದಾರೆ.

ಅದನ್ನು ಮುಗಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಈಗ ಜಾರಿಗೆ ತಂದಿರುವ ಕಾಯಿದೆ ಸಂವಿಧಾನ ಬಾಹಿರ, ಇದು ನಂಬಿಕೆಯ ವಿರುದ್ಧವಾಗಿದೆ. ಅಂತಾರಾಷ್ಟ್ರೀಯ ಕಾಯಿದೆಯ ವಿರುದ್ಧ ಇದೆ. ಈ ಕಾಯಿದೆ ಆಸ್ಸಾಂ ಒಪ್ಪಂದದ ವಿರುದ್ಧ ಇದೆ. ಇಡೀ ದೇಶದ ಕಾನೂನಿನ ಮೇಲೆ ಜನರಿಗೆ ಇರುವ ನಂಬಿಕೆಯನ್ನು ಕಳೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಸರ್ಕಾರ ಜನರಿಗೆ ಉದ್ಯೋಗ ಅನ್ನ ನೀಡಬೆಕು, ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಚಿಂತಿಸಬೇಕು, ಇದು ಕೇವಲ ಅಲ್ಪ ಸಂಖ್ಯಾತರಿಗೆ ಪರಿಣಾಮ ಬೀರುವುದಿಲ್ಲ. ಇಡೀ ದೇಶದ ಮೇಲೆ ಪರಿಣಾಮ ಬೀರುತ್ತಿದೆ.

ನಿಮಗೆ ಪ್ರಮಾಣ ಪತ್ರ ನೀಡದಿದ್ದರೆ ಜೈಲಿಗೆ ಹಾಕುತ್ತೀರಾ ? ಎಷ್ಟು ಜನರನ್ನು ಜೈಲಿಗೆ ಹಾಕುತ್ತೀರಾ ? ಇಡೀ ದೇಶ ಒಗ್ಗಟ್ಟಾಗಿ ಬದುಕುತ್ತಿದೆ. ವಿಶ್ವ ಭಾರತವನ್ನು ನೋಡುತ್ತಿದೆ. ಇದು ಇಡೀ ದೇಶ ಅವಮಾನ ಪಡುವಂತೆ ಮಾಡಿದೆ. ಇದಕ್ಕೆ ಪ್ರಧಾನಿ ಅಮಿತ್ ಶಾ ಹೊಣೆಯಾಗಿದ್ದಾರೆ ಎಂದು ದೂರಿದರು.

ಮೋದಿ, ಶಾ ತಮ್ಮ ಮನಸಿಗೆ ಬಂದಂತೆ ಕಾನೂನು ತಿದ್ದುಪಡಿ ಮಾಡುತ್ತಿದ್ದಾರೆ. ಯಾವ ಕಾರಣಕ್ಕೆ ಈ ಕಾಯಿದೆ ಜಾರಿಗೆ ತರುತ್ತಿದ್ದಾರೆ ಎಂದು ಜನರಿಗೆ ಸ್ಪಷ್ಟ ಮಾಹಿತಿ ನೀಡದೆ ಒಂದು ಸಮುದಾಯವನ್ನು ಹೊರಗಿಡುವ ಪ್ರಯತ್ನ ಮಾಡುತ್ತಿದ್ದಾರೆ.

English summary
Former minister DK Shivakumar Talks Against The Citizenship Amendment Act, Who gave the state an unnecessary moratorium and an unpleasant atmosphere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X