ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಸಂಕಷ್ಟ ನಿಭಾಯಿಸಲಾಗದಿದ್ದರೆ ರಾಜೀನಾಮೆ ನೀಡಿ: ಡಿಕೆ ಶಿವಕುಮಾರ್

|
Google Oneindia Kannada News

ಬೆಂಗಳೂರು, ಏಪ್ರಿಲ್ 18: ಕೊರೊನಾ ಸಂಕಷ್ಟ ನಿಭಾಯಿಸಲಾಗದಿದ್ದರೆ ರಾಜೀನಾಮೆ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂಕಷ್ಟ ಮುಗಿಯುವವರೆಗೂ ರಾಜ್ಯದ ಎಲ್ಲ ಜನರಿಗೂ ಉಚಿತ ಆರೋಗ್ಯ ಸೇವೆ ಒದಗಿಸಬೇಕೆಂದು ಒತ್ತಾಯಿಸಿದರು.

ಧಾರ್ಮಿಕ ಕಾರ್ಯಕ್ರಮ ರದ್ದು ಮಾಡೋದು ಜನಪ್ರಿಯ ಸರ್ಕಾರದ ಲಕ್ಷಣವಲ್ಲಧಾರ್ಮಿಕ ಕಾರ್ಯಕ್ರಮ ರದ್ದು ಮಾಡೋದು ಜನಪ್ರಿಯ ಸರ್ಕಾರದ ಲಕ್ಷಣವಲ್ಲ

ಕೋವಿಡ್ ಆರಂಭದಿಂದ ಈವರೆಗೂ ಪ್ರತಿಪಕ್ಷವಾಗಿ ಕಾಂಗ್ರೆಸ್ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಿದೆ. ಜಾರಿಗೊಳಿಸಲಾದ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆ. ಗಂಟೆ ಹೊಡಿಯಿರಿ, ಚಪ್ಪಾಳೆ ತಟ್ಟಿ ಎಂದಾಗಲೂ ಜನ ಅದನ್ನು ಅನುಸರಿಸಿದ್ದಾರೆ.

ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಗಂಭೀರ ಕ್ರಮ ಕೈಗೊಳ್ಳದೆ ಜನರ ಜೀವ ಮತ್ತು ಜೀವನದ ಜೊತೆ ಆಟವಾಡುತ್ತಿಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊದಲ ಅಲೆಯ ಬಳಿಕ 2ನೇ ಅಲೆ ಕಾಡಬಹುದು ಎಂಬ ಅಂದಾಜು ಸರ್ಕಾರಕ್ಕಿತ್ತು. ಆದರೆ ಅದನ್ನು ನಿಭಾಯಿಸಲು ಯಾವುದೇ ಪೂರ್ವ ತಯಾರಿ ಮಾಡಿಕೊಂಡಿಲ್ಲ. ಅಧಿಕಾರಿಗಳು, ಸಚಿವರ ಬದಲಾವಣೆಯಲ್ಲೇ ಕಾಲಹರಣ ಮಾಡಿದ್ದಾರೆ.

ಇಂದು ಹೆಣ ಸುಡಲು ಕೂಡ ಹೆಚ್ಚು ಲಂಚ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗಳಲ್ಲಿ ಔಷ, ಬೆಡ್ ಯಾವುದೂ ಇಲ್ಲ. ಅಕಾರಿಗಳು, ಸಚಿವರು ಕಚೇರಿ ಬಿಟ್ಟು ಹೊರಗಡೆ ಹೋಗುತ್ತಿಲ್ಲ. ಜಿಲ್ಲಾ ಮಟ್ಟದಲ್ಲಿ ಕೆಟ್ಟ ಪರಿಸ್ಥಿತಿಯಿದೆ. ಸ್ಮಶಾನದಲ್ಲಿ ಇರುವ ಅವ್ಯವಸ್ಥೆಯನ್ನು ಸರಿಪಡಿಸಲು ಸರ್ಕಾರಕ್ಕೆ ಆಗುವುದಿಲ್ಲವೆಂದರೆ ಅಕಾರಿಗಳು ಸಂಬಳ ಪಡೆದು ಏನು ಕೆಲಸ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ಸಾರಿಗೆ ಸಂಸ್ಥೆ ಮುಷ್ಕರದಲ್ಲಿ ಸರ್ಕಾರ ಪ್ರತಿಷ್ಠೆ ತೋರಬಾರದು. ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ರಾಮನಗರದ ಮಾಜಿ ಶಾಸಕ ಆರ್.ರಾಜು ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಇವರ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಆನೆ ಬಲ ಬಂದಂತಾಗಿದೆ ಎಂದು ಡಿ.ಕೆ.ಶಿವಕುಮಾರ್ ವ್ಯಾಖ್ಯಾನಿಸಿದರು. ಸಂಸದ ಡಿ.ಕೆ.ಸುರೇಶ್, ಮಾಜಿ ಶಾಸಕ ಬಾಲಕೃಷ್ಣ ಮತ್ತಿತರರು ಈ ಸಂದರ್ಭದಲ್ಲಿದ್ದರು.

ವಿದ್ಯಾರ್ಥಿಗಳ ಮೇಲೆ ಪರಿಣಾಮ

ವಿದ್ಯಾರ್ಥಿಗಳ ಮೇಲೆ ಪರಿಣಾಮ

ಪರೀಕ್ಷೆಗಳಿಲ್ಲದೆ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಉದ್ಯೋಗದ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು. ಅದಕ್ಕಾಗಿ ಸ್ಪಷ್ಟವಾದ ಮಾರ್ಗಸೂಚಿಗಳನ್ನು ರೂಪಿಸಬೇಕು. 6 ತಿಂಗಳ ಕಾಲ ಬ್ಯಾಂಕ್ ಬಡ್ಡಿ ದರ ಮನ್ನಾ ಮಾಡಬೇಕು, ಕಂತು ಪಾವತಿಯಿಂದ ವಿನಾಯ್ತಿ ನೀಡಬೇಕು, ಆಸ್ತಿ ತೆರಿಗೆಗಳನ್ನು ರದ್ದುಪಡಿಸಬೇಕು, ಎಲ್ಲರಿಗೂ ಉಚಿತ ಆರೋಗ್ಯ ಸೇವೆ ನೀಡಬೇಕು ಎಂದು ಒತ್ತಾಯಿಸಿದರು.

ಆರೋಗ್ಯ, ಶಿಕ್ಷಣ, ಉದ್ಯೋಗದ ಕುರಿತು ಸ್ಪಷ್ಟ ನಿರ್ಧಾರ ಬೇಕು

ಆರೋಗ್ಯ, ಶಿಕ್ಷಣ, ಉದ್ಯೋಗದ ಕುರಿತು ಸ್ಪಷ್ಟ ನಿರ್ಧಾರ ಬೇಕು

ಸರ್ಕಾರ ಆರೋಗ್ಯ, ಶಿಕ್ಷಣ, ಉದ್ಯೋಗದಂತಹ ವಿಚಾರದಲ್ಲಿ ಸ್ಪಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ಆರ್ಥಿಕ ಚೈತನ್ಯ ನೀಡುವ ಮೂಲಕ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಗ್ರಾಮೀಣ ಭಾಗದ ಮಕ್ಕಳು ಏನು ಮಾಡಬೇಕು

ಗ್ರಾಮೀಣ ಭಾಗದ ಮಕ್ಕಳು ಏನು ಮಾಡಬೇಕು

ಶಿಕ್ಷಣ ವ್ಯವಸ್ಥೆಯಲ್ಲಿ ನಗರಪ್ರದೇಶದಲ್ಲಿ ಆನ್‍ಲೈನ್ ತರಗತಿಗಳು ನಡೆಯುತ್ತಿವೆ. ಆದರೆ ಗ್ರಾಮೀಣ ಮಕ್ಕಳ ಪರಿಸ್ಥಿತಿ ಏನು ಎಂದು ಸರ್ಕಾರ ಯೋಚನೆ ಮಾಡಿಲ್ಲ. ಉದ್ಯೋಗ ನಷ್ಟವಾಗಿದೆ. ಯಾರು ಯಾವ ಕ್ಷೇತ್ರದಲ್ಲಿ ಎಷ್ಟು ಉದ್ಯೋಗಗಳು ಹೋಗಿವೆ ಎಂಬ ಅಂಕಿ ಅಂಶಗಳೇ ಸರ್ಕಾರದ ಬಳಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Recommended Video

ಕೊರೊನಾ ವಿರುದ್ಧ ಹೋರಾಟಕ್ಕೆ ಸಾಥ್ ನೀಡಿದ ರೈಲ್ವೆ ಇಲಾಖೆ.. ಇಂದಿನಿಂದ Oxygen Express ಸಂಚಾರ | Oneindia Kannada
ಕರುಣೆಯೇ ಇಲ್ಲ

ಕರುಣೆಯೇ ಇಲ್ಲ

ಕೊರೊನಾ ಕಾಲದಲ್ಲಿ ಜನ ಸಂಕಷ್ಟದಿಂದ ಬಳಲುತ್ತಿರುವಾಗ ಸರ್ಕಾರ ಕರುಣೆ ತೋರಿಸಿಲ್ಲ. ಆಸ್ತಿ ತೆರಿಗೆ, ವಿದ್ಯುತ್ ದರ, ಪೆಟ್ರೋಲ್-ಡೀಸೆಲ್ , ರಸಗೊಬ್ಬರದ ಬೆಲೆಗಳನ್ನು ಹೆಚ್ಚಳ ಮಾಡಿದೆ. ಜಿಎಸ್‍ಟಿ ಪಾವತಿ ವಿಳಂಬಕ್ಕೂ ದಂಡ ವಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

English summary
KPCC President DK Shivakumar said that if you cannot handle coronavirus situation please give resignation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X