ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ಭ್ರಷ್ಟಾಚಾರ: ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಒತ್ತಾಯ

|
Google Oneindia Kannada News

ಬೆಂಗಳೂರು, ಜುಲೈ.23: ಕೊರೊನಾವೈರಸ್ ನಿರ್ವಹಣೆ ಮಾಡುವಲ್ಲಿ ರಾಜ್ಯ ಸರ್ಕಾರವು ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ಲೆಕ್ಕ ಕೊಡಿ ಅಭಿಯಾನವನ್ನು ಆರಂಭಿಸಿದೆ.

Recommended Video

Sonu Sood : ವಲಸೆ ಕಾರ್ಮಿಕರಿಗಾಗಿ ಹೊಸ ಯೋಜನೆ ರೂಪಿಸಿದ ಬಾಲಿವುಡ್ ಸ್ಟಾರ್ | Oneindia Kannada

ಗುರುವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಸರ್ಕಾರವು ವೆಂಟಿಲೇಟರ್ ಖರೀದಿಯಲ್ಲಿ ನಡೆಸಿರುವ ಅವ್ಯವಹಾರದ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿದರು.

ಕರ್ನಾಟಕದಲ್ಲಿ ಕರ್ನಾಟಕದಲ್ಲಿ "ಸೋರುತಿಹುದು ಸರ್ಕಾರದ ಮಾಳಿಗೆ, ಅಜ್ಞಾನದಿಂದ"?

ಸರ್ಕಾರವು ಕೊರೊನಾವೈರಸ್ ಸೋಂಕು ನಿರ್ವಹಣೆಗೆ ಖರೀದಿಸಿದ ಉಪಕರಣಗಳ ಒಟ್ಟು ಮೊತ್ತ 4167 ಕೋಟಿ ರೂಪಾಯಿ ಆಗಿದ್ದು, ಈ ಪೈಕಿ 2000 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವ ಬಗ್ಗೆ ಉಭಯ ನಾಯಕರು ಆರೋಪಿಸಿದ್ದಾರೆ. ಇಂದು ನಡೆದ ಕಾಂಗ್ರೆಸ್ ನಾಯಕರ ಜಂಟಿ ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು ಇಲ್ಲಿವೆ ನೋಡಿ.

DK Shivakumar, Siddaramaiah Joint Press Meet Highlights


ಸಿದ್ದರಾಮಯ್ಯ, ಡಿಕೆಶಿ ಸುದ್ದಿಗೋಷ್ಠಿಯ ಪ್ರಮುಖಾಂಶ:

- ಕೊವಿಡ್-19 ಉಪಕರಣ ಖರೀದಿಗೆ ಖರ್ಚು ಮಾಡಿದ್ದು 324 ಕೋಟಿ ಅಲ್ಲ 4167 ಕೋಟಿ ರೂ.

- ಆರೋಗ್ಯ ಇಲಾಖೆಗೆ ಮೀಸಲಿರಿಸಿದ 1527 ಕೋಟಿಗಿಂತ ಎರಡು ಪಟ್ಟು ಹಣ ಖರ್ಚು

- ಕೊವಿಡ್ ಉಪಕರಣ ಖರೀದಿಗಾಗಿ ಈವರೆಗೂ 3322 ಕೋಟಿ ರೂ. ಖರ್ಚು

'330 ರೂಪಾಯಿ ಪಿಪಿಇ ಕಿಟ್ ಖರೀದಿಸಲು 2117 ರೂಪಾಯಿ ಖರ್ಚು''330 ರೂಪಾಯಿ ಪಿಪಿಇ ಕಿಟ್ ಖರೀದಿಸಲು 2117 ರೂಪಾಯಿ ಖರ್ಚು'

- ಕರ್ನಾಟಕದಲ್ಲಿ ಮಾರ್ಚ್.22ರಂದು ಒಂದು ವೆಂಟಿಲೇಟರ್ ಗೆ 5.60ಲಕ್ಷ, ಇನ್ನೊಂದು ಬಾರಿ ಒಂದು ವೆಂಟಿಲೇಟರ್ 12.36 ಲಕ್ಷ, ಮೂರನೇ ಬಾರಿ ಒಂದು ವೆಂಟಿಲೇಟರ್ ಖರೀದಿಗೆ 18.23 ಲಕ್ಷ ರೂಪಾಯಿ ನೀಡಿರುವ ಬಗ್ಗೆ ಆರೋಪ

- 331 ರೂಪಾಯಿ ಮೌಲ್ಯದ ಪಿಪಿಇ ಕಿಟ್ ಗಳಿಗೆ 2317 ರೂಪಾಯಿ ನೀಡಿ ಖರೀದಿ

- ಮೇಕ್ ಇನ್ ಇಂಡಿಯಾ ಭಾಷಣ ಮಾಡುವವರೇ ಚೀನಾದಿಂದ 3 ಲಕ್ಷ ಪಿಪಿಇ ಕಿಟ್ ಖರೀದಿಸಿದ್ದಾರೆ

- ಚೀನಾದಿಂದ 3 ಲಕ್ಷ ಪಿಪಿಇ ಕಿಟ್ ಖರೀದಿಸಲು 94.22 ಕೋಟಿ ರೂಪಾಯಿ ಪಾವತಿ

ಕೊವಿಡ್-19 ನಿರ್ವಹಣೆಗೆ ಯಾವ ಇಲಾಖೆಯಲ್ಲಿ ಎಷ್ಟು ಖರ್ಚು?ಕೊವಿಡ್-19 ನಿರ್ವಹಣೆಗೆ ಯಾವ ಇಲಾಖೆಯಲ್ಲಿ ಎಷ್ಟು ಖರ್ಚು?

- 60 ರೂಪಾಯಿ ಮಾಸ್ಕ್ ಗೆ 150 ರೂಪಾಯಿ ಪಾವತಿಸಿ ಖರೀದಿ

- 1 ರಿಂದ 2 ಸಾವಿರ ರೂಪಾಯಿ ಮೌಲ್ಯದ ಸ್ಕ್ಯಾನರ್ ಗಳ ಖರೀದಿಗೆ 5945 ರೂಪಾಯಿ ಖರ್ಚು

- 80 ರಿಂದ 100 ರೂಪಾಯಿ ಮೌಲ್ಯದ 500 ಎಂಎಲ್ ಸ್ಯಾನಿಟೈಸರ್ ಗೆ 250 ರಿಂದ 600 ರೂಪಾಯಿ ಪಾವತಿ

'4 ಲಕ್ಷದ ವೆಂಟಿಲೇಟರ್ ಖರೀದಿಗೆ 18 ಲಕ್ಷ ನೀಡಿದ ರಾಜ್ಯ ಸರ್ಕಾರ''4 ಲಕ್ಷದ ವೆಂಟಿಲೇಟರ್ ಖರೀದಿಗೆ 18 ಲಕ್ಷ ನೀಡಿದ ರಾಜ್ಯ ಸರ್ಕಾರ'

- ಕೇರಳ ಪಾವತಿಸಿದ ಹಣಕ್ಕಿಂತ 2 ಲಕ್ಷ ರೂಪಾಯಿ ಹೆಚ್ಚಿನ ಹಣಕ್ಕೆ 300 ಆಕ್ಸಿಮೀಟರ್ ಡಿವೈಸ್ ಖರೀದಿ. ಒಂದು ಆಕ್ಸಿಮೀಟರ್ ಗೆ 4.30 ಲಕ್ಷ ರೂಪಾಯಿ ಪಾವತಿ.

- 2000 ಕೋಟಿ ರೂಪಾಯಿ ಅವ್ಯವಹಾರದ ಬಗ್ಗೆ ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಒತ್ತಾಯ

- ಫುಡ್ ಕಿಟ್ ವಿತರಣೆಯಲ್ಲೂ ಬಿಜೆಪಿ ಸರ್ಕಾರದಿಂದ ಅವ್ಯವಹಾರ

- ಹೆಣದ ಮೇಲೆ ಹಣ ಮಾಡಲು ಹೊರಟಿದ್ದೀರಿ ಎಂದು ಡಿಕೆಶಿ ಕೆಂಡಾಮಂಡಲ.

English summary
DK Shivakumar, Siddaramaiah Joint Press Meet Highlights. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X