• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸರ್ಕಾರಿ ಆಸ್ಪತ್ರೆಗೆ ಹೋದವರು ಹೆಣವಾಗಿ ಬರುತ್ತಿದ್ದಾರೆ: ಡಿಕೆ ಶಿವಕುಮಾರ್

|

ಬೆಂಗಳೂರು, ಮೇ 06: ಖಾಸಗಿ ಆಸ್ಪತ್ರೆಗೆ ಹೋದವರು ಬದುಕಿ ಬರುತ್ತಿದ್ದಾರೆ, ಸರ್ಕಾರಿ ಆಸ್ಪತ್ರೆಗೆ ಹೋದವರು ಶವವಾಗಿ ಬರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.

   DK Shivakumar ಸರ್ಕಾರದ ವಿರುದ್ದ ಕಿಡಿ ಕಾರಿದ್ದು ಹೀಗೆ !! | Oneindia Kannada

   ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯವರ ಶ್ರಮದ ಬಗ್ಗೆ ಅನುಮಾನವಿಲ್ಲ ಆದರೆ ಕೊರೊನಾ ಸೋಂಕು ತಡೆಯಲು ಆಗುತ್ತಿಲ್ಲವಲ್ಲ ಎಂದು ಪ್ರಶ್ನಿಸಿದರು.

   ಬೆಡ್ ಬ್ಲಾಕಿಂಗ್ ಪ್ರಕರಣ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು ಬೆಡ್ ಬ್ಲಾಕಿಂಗ್ ಪ್ರಕರಣ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

   ನಿಮಗೆ ಕೈ ಮುಗಿದು ಕೇಳುತ್ತೇನೆ, ಬಡವರ ಜೀವ ಉಳಿಸಿಕೊಡಿ, ನಾನು ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದೆ, ರಾಜ್ಯದಲ್ಲಿ 56 ಮೆಡಿಕಲ್ ಕಾಲೇಜುಗಳಿವೆ, ಕಾಲೇಜು ವೈದ್ಯರನ್ನು ಕರೆದು ಮಾತನಾಡಿ, ಒಬ್ಬೊಬ್ಬರ ಬಳಿ 700 ಬೆಡ್‌ಗಳಿವೆ ಎಂದರು.

   ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕರು ಸೇರಿ ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆದಿದ್ದರು, ಅಲ್ಲಿ 200 ಮಂದಿ ಕೆಲಸ ಮಾಡುತ್ತಿದ್ದಾರೆ ಆದರೆ 17 ಮಂದಿ ಹೆಸರನ್ನು ಮಾತ್ರ ಹೇಳಿದ್ದಾರೆ.

   ಕೇವಲ ಮುಸ್ಲಿಮರ ಹೆಸರನ್ನು ಮಾತ್ರ ಹೇಳುತ್ತಾರೆ, ಮುಸ್ಲಿಮರು ನಾವು ಸಹೋದರರು, ಒಟ್ಟಿಗೆ ಜೀವಿಸುತ್ತೇವೆ, ಒಟ್ಟಿಗೆ ಸಾಯುತ್ತೇವೆ, ಅವರು ಮಾಂಸ ಕಡಿಯುವುದಿಲ್ಲ ಎಂದರೆ ನಾವು ಮಾಂಸ ತಿನ್ನುವುದಿಲ್ಲ, ಅವರು ಪಂಕ್ಚರ್ ಹಾಕಲ್ಲ ಎಂದರೆ ನಮ್ಮ ಗಾಡಿ ಮುಂದೆಯೇ ಹೋಗಲ್ಲ ಎಂದರು.

   ಮೊದಲು ತೇಜಸ್ವಿ ಸೂರ್ಯ ಅವರನ್ನು ಬಂಧಿಸಬೇಕು, ಕೋಮು ದ್ವೇಷ ಭಾವನೆಯನ್ನು ಜನರಲ್ಲಿ ಹುಟ್ಟಿಸುತ್ತಿದ್ದಾರೆ. ಚಾಮರಾಜನಗರ ಘಟನೆಯನ್ನು ಬೇರೆಡೆಗೆ ಸೆಳೆಯಲು ಈ ಬೆಡ್ ಬ್ಲಾಕಿಂಗ್ ವಿಚಾರ ಮುಂದಕ್ಕೆ ತಂದಿದ್ದಾರೆ. ಅದನ್ನೇ ಕುಮಾರಸ್ವಾಮಿಯವರೂ ಕೂಡ ಹೇಳಿದ್ದಾರೆ ಎಂದರು.

   English summary
   KPCC President DK Shivakumar press meet: slams BJP govt for covid 19 deaths in the state,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X