ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಪಿಸಿಸಿ ಮುಂದಿನ ಸಾರಥಿ ಡಿಕೆ ಶಿವಕುಮಾರ್?

|
Google Oneindia Kannada News

ಬೆಂಗಳೂರು, ಜನವರಿ 14: ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ನೇಮಕವಾಗುವುದು ಬಹುತೇಕ ಪಕ್ಕಾ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಆದರೆ ಕಾಂಗ್ರೆಸ್ ಹೈಕಮಾಂಡ್ ನಿಜಕ್ಕೂ ಯಾರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯೋ ಅಥವಾ ಅಧ್ಯಕ್ಷ ಸ್ಥಾನದಲ್ಲಿ ಇಲ್ಲದಿದ್ದರೂ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ರಾಹುಲ್ ಗಾಂಧಿಯೋ ಎನ್ನುವ ಪ್ರಶ್ನೆ ಕಾಡುತ್ತಿದೆ.

ಕನಕಪುರ ಬಂಡೆ ಬುಡಕ್ಕೆ ಬಾಂಬ್: ಡಿಕೆಶಿ ವಿರುದ್ಧ ಕಾಣದ 'ಕೈ' ತಂತ್ರ? ಕನಕಪುರ ಬಂಡೆ ಬುಡಕ್ಕೆ ಬಾಂಬ್: ಡಿಕೆಶಿ ವಿರುದ್ಧ ಕಾಣದ 'ಕೈ' ತಂತ್ರ?

ಡಿಕೆ ಶಿವಕುಮಾರ್ ಸದರಿ ಹುದ್ದೆಗೇರದಂತೆ ತಡೆಯಲು ಯತ್ನಿಸುತ್ತಿರುವ ಶಕ್ತಿಗಳು ರಾಹುಲ್ ಗಾಂಧಿ ಅವರ ಆಸರೆ ಪಡೆದಿವೆ ಎಂದು ಮೂಲಗಳು ಹೇಳುತ್ತವೆ.

ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಡಿಕೆ ಶಿವಕುಮಾರ್ ಪ್ರಯತ್ನ

ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಡಿಕೆ ಶಿವಕುಮಾರ್ ಪ್ರಯತ್ನ

ಕೆಪಿಸಿಸಿ ಅಧ್ಯಕ್ಷ ಯಾರು ಆಗುತ್ತಾರೆ ಎಂಬ ಮತ್ತೊಂದು ಪ್ರಶ್ನೆಗೆ ಸೋನಿಯಾ, ರಾಹುಲ್ ಗಾಂಧಿ ಬಣ ತಳುಕುಹಾಕಿಕೊಂಡಿದೆ. ಚ್ಯೋದ್ಯವೆನಿಸಿದರೂ ಇದು ನಿಜ. ಈ ಹುದ್ದೆಗಾಗಿ ತೀವ್ರ ಪ್ರಯತ್ನ ನಡೆಸಿರುವ ಡಿಕೆ ಶಿವಕುಮಾರ್ ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ ಅದು ನೇರವಾಗಿ ಸೋನಿಯಾ ಗಾಂಧಿ ಮತ್ತು ಎಐಸಿಸಿಯ ಹಿರಿಯ ನಾಯಕರ ಆಶೀರ್ವಾದ ಪಾರಿಣಾಮ ಎಂದೇ ನಿರ್ಧರಿಸಬೇಕಾಗುತ್ತದೆ.

ಡಿಕೆಶಿಗೆ ಹುದ್ದೆ ತಪ್ಪಿದರೆ ರಾಹುಲ್ ಗಾಂಧಿ ಕಾರಣ?

ಡಿಕೆಶಿಗೆ ಹುದ್ದೆ ತಪ್ಪಿದರೆ ರಾಹುಲ್ ಗಾಂಧಿ ಕಾರಣ?

ಒಂದು ವೇಳೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಡಿಕೆ ಶಿವಕುಮಾರ್‌ಗೆ ತಪ್ಪಿದರೆ ರಾಹುಲ್ ಗಾಂಧಿ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದ್ದು ಫಲ ನೀಡಿದೆ ಎಂದೇ ತೀರ್ಮಾನಿಸಲಾಗುತ್ತದೆ. ಈ ಮಟ್ಟಕ್ಕೆ ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಲಾಬಿ ಮುಟ್ಟಿದೆ.

ಡಿಕೆಶಿವಕುಮಾರ್‌ಗೆ ನಾಯಕರ ವಿರೋಧ

ಡಿಕೆಶಿವಕುಮಾರ್‌ಗೆ ನಾಯಕರ ವಿರೋಧ

ಸಿದ್ದರಾಮಯ್ಯ ಮಾತ್ರವಲ್ಲದೆ ಕಾಂಗ್ರೆಸ್‌ನ ಇನ್ನೂ ಕೆಲ ನಾಯಕರು ಸಹ ಶಿವಕುಮಾರ್ ಅವರಿಗೆ ಕೆಪಿಸಿಸಿ ಹುದ್ದೆಯನ್ನು ಪರಿಪೂರ್ಣವಾಗಿ ನೀಡಲು ಆಕ್ಷೇಪವೆತ್ತುತ್ತಿದ್ದಾರೆ. ಕೆಪಿಸಿಸಿಗೆ ಸಮಾನಾಂತರ ಹುದ್ದೆಗಳನ್ನು ಸೃಷ್ಟಿಸಿ ಬಳಿಕ ಅಧ್ಯಕ್ಷ ಹುದ್ದೆಯನ್ನು ಡಿಕೆ ಶಿವಕುಮಾರ್‌ ಅವರಿಗೆ ನೀಡಿದರೆ ಈ ನಾಯಕರಿಗೆ ಅಭ್ಯಂತರವಿಲ್ಲ. ಇದಾಗದೆ ಸಂಪೂರ್ಣ ಅಧಿಕಾರದೊಂದಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ತಾವು ತಟಸ್ಥರಾಗುವ ಸೂಚನೆಯನ್ನು ಈ ನಾಯಕರು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ನೀಡಿದ್ದಾರೆ.

ಕೈಗೆ ಬಂದಿದ್ದ ತುತ್ತು ಈಗ ಅಂತ್ರವಾಗಿದೆ

ಕೈಗೆ ಬಂದಿದ್ದ ತುತ್ತು ಈಗ ಅಂತ್ರವಾಗಿದೆ

ಕೆಪಿಸಿಸಿ ಅಧ್ಯಕ್ಷ ಹುದ್ದೆಗೇರಲು ಪ್ರಬಲ ಲಾಬಿ ನಡೆಸಿರುವ ಡಿಕೆ ಶಿವಕುಮಾರ್ ಅವರಿಗೆ ಇನ್ನೇನು ಅಧ್ಯಕ್ಷ ಹುದ್ದೆ ಗಿಟ್ಟಿಯೇಬಿಟ್ಟಿತು ಎಂಬ ಪರಿಸ್ಥಿತಿ ಕಾಂಗ್ರೆಸ್‌ನಲ್ಲಿತ್ತು. ಪಕ್ಷದ ಪರ ನಿಂತಿದ್ದಕ್ಕೆ ಬಿಜೆಪಿಯ ಅವಕೃಪೆಗೆ ಸಿಲುಕಿ ಕಾರಾಗೃಹ ವಾಸ ಅನುಭವಿಸಿ ಅನುಕಂಪ ಹಾಗೂ ರಾಜ್ಯ ಕಾಂಗ್ರೆಸ್ ಗೆ ಪ್ರಬಲ ಸಂಘಟಕನೊಬ್ಬನ ಅಗತ್ಯವಿದೆ ಎಂಬ ಕಾರಣಕ್ಕೆ ಈ ಸಾಮರ್ಥ್ಯವುಳ್ಳ ಶಿವಕುಮಾರ್ ಆಯ್ಕೆ ಸುಲಲಿತ ಎಂದೇ ಭಾವಿಸಲಾಗಿತ್ತು.ಆದರೆ ಈಗ ಚಿತ್ರಣ ಕೊಂಚ ಬದಲಾಗಿದೆ.

ಸಿದ್ದರಾಮಯ್ಯ ದೆಹಲಿಗೆ

ಸಿದ್ದರಾಮಯ್ಯ ದೆಹಲಿಗೆ

ಮಾಜಿ ಸಚಿವ ದಿನೇಶ್​​ ಗುಂಡೂರಾವ್​​ ರಾಜೀನಾಮೆಯಿಂದ ತೆರವಾಗಿದ್ದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನಾದರೂ ಇನ್ನೆರಡು ದಿನಗಳಲ್ಲಿ ಆಯ್ಕೆ ಮಾಡುವ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಭಾವಿ ನಾಯಕನೋರ್ವನನ್ನು ನೇಮಿಸಲು ಹೈಕಮಾಂಡ್​​ ಚಿಂತಿಸಿದೆ. ಹಾಗಾಗಿಯೇ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಬೀಡುಬಿಟ್ಟಿದ್ಧಾರೆ. ಈ ವಿಚಾರ ಸಂಬಂಧ ಮಹತ್ವದ ಮಾತುಕತೆ ನಡೆಸಲು ಸಿದ್ದರಾಮಯ್ಯರನ್ನು ಹೈಕಮಾಂಡ್​​ ದೆಹಲಿಗೆ ಕೆರಸಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕಾದ ನಾಯಕರ ಬಗ್ಗೆ ಇನ್ನೂ ಹಿರಿಯರಲ್ಲಿ ಒಮ್ಮತ ಮೂಡಿಲ್ಲ.

English summary
It is reported that DK Sivakumar's appointment as KPCC president is almost Final.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X