ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ: ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ; ಡಿಕೆಶಿ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಜುಲೈ 10: ಹೆಗಲ ಮೇಲೆ ಕೈ ಹಾಕಲು ಬಂದ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಕೈ ಮಾಡಿರುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

Recommended Video

ಸಲುಗೆ ಕೊಟ್ಟಿದ್ದು ಜಾಸ್ತಿ ಆಯ್ತಾ ಎಂದು ಅಭಿಮಾನಿ ತಲೆಗೆ ಹೊಡೆದ ಡಿಕೆಶಿ | Oneindia Kannada

"ಹೆಗಲ ಮೇಲೆ ಕೈ ಹಾಕೋದು ಅಂದ್ರೆ ಏನ್ ಅರ್ಥ? ಹೆಗಲ ಮೇಲೆ ಕೈ ಹಾಕಿದರೆ ನೋಡುವವರು ಏನಂದುಕೊಳ್ಳುತ್ತಾರೆ? ಇದಕ್ಕೆಲ್ಲಾ ಅವಕಾಶ ಕೊಡಲು ಆಗುತ್ತಾ?,'' ಎಂದು ಹೇಳುವ ಮೂಲಕ ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಕುರಿತು ಡಿಕೆಶಿ ಸ್ಪಷ್ಟನೆ ನೀಡಿದ್ದಾರೆ.

ಪಕ್ಕದಲ್ಲಿ ಬಂದು ಹೆಗಲ ಮೇಲೆ ಕೈ ಹಾಕಲು ಪ್ರಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತನಿಗೆ ಡಿ.ಕೆ. ಶಿವಕುಮಾರ್ ಹೊಡೆದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿಯಲ್ಲಿ ನಡೆದಿದೆ.

KPCC President DK Shivakumar Gives Clarification About Hit On Congress Worker In Mandya

ಕಾವೇರಿ ಹೋರಾಟಗಾರ ಜಿ.ಮಾದೇಗೌಡರ ಆರೋಗ್ಯ ವಿಚಾರಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೆ.ಎಂ. ದೊಡ್ಡಿಗೆ ಆಗಮಿಸಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತ ಹಿಂಭಾಗದಲ್ಲಿ ಬಂದು ಶಿವಕುಮಾರ್ ಹೆಗಲ ಮೇಲೆ ಕೈ ಹಾಕಲು ಪ್ರಯತ್ನಸಿದ್ದಾನೆ.

ತಕ್ಷಣವೇ ಕಾರ್ಯಕರ್ತನ ತಲೆಗೆ ಬಾರಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಅಲ್ಲಿದ್ದವರಿಗೆ ಆಶ್ಚರ್ಯವನ್ನುಂಟು ಮಾಡಿದರು. ಮೊಬೈಲ್​ನಲ್ಲಿ ವಿಡಿಯೋ ಮಾಡುತ್ತಿರುವುದನ್ನು ನೋಡಿ ಹೆಗಲ ಮೇಲೆ ಕೈ ಹಾಕ್ತಿಯಾ, ಕಾಮನ್‌ಸೆನ್ಸ್ ಇಲ್ವಾ ಎಂದು ಡಿ.ಕೆ. ಶಿವಕುಮಾರ್ ಗದರಿದರು. ಕೆಪಿಸಿಸಿ ಅಧ್ಯಕ್ಷರ ನಡೆಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಧಾನ ತಂದಿದೆ. ಈ ಹಿಂದೆ ಸೆಲ್ಫಿಗೆ ಬರುವ ಕಾರ್ಯಕರ್ತರಿಗೂ ಡಿಕೆಶಿ ಹೊಡೆದಿದ್ದರು.

ಜೂನ್ 12 ರಂದು ಚಿತ್ರದುರ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಡಿ.ಕೆ. ಶಿವಕುಮಾರ್ ಗರಂ ಆಗಿದ್ದರು. ನಾನು ಮಾತನಾಡುವಾಗ ಮಧ್ಯೆ ಮಾತಾಡಿದರೆ ಒದ್ದು ಹೊರಗೆ ಹಾಕುವೆ. ನಾನು ಕತ್ತೆ ಕಾಯೋಕೆ ಇಲ್ಲಿಗೆ ಬಂದಿಲ್ಲವೆಂದು ಡಿಕೆಶಿ ಆಕ್ರೋಶ ಹೊರಹಾಕಿದ್ದರು.

ಕಾರ್ಯಕರ್ತರಿಗೆ ಶಿಸ್ತು ಕಲಿಸಿ ಎಂದು ಜಿಲ್ಲಾಧ್ಯಕ್ಷ ತಾಜ್ ಪೀರ್ಗೆಗೆ ಸೂಚನೆ ನೀಡಿದ್ದರು. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಮಾತನಾಡುವಾಗ ಕಾಂಗ್ರೆಸ್ ಕಾರ್ಯಕರ್ತರು ಮಧ್ಯದಲ್ಲಿ ಮಾತನಾಡಿದ್ದರು. ಇದಕ್ಕೆ ಸಿಟ್ಟಾದ ಡಿಕೆಶಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧವೇ ಸಿಟ್ಟಾಗಿದ್ದರು.

English summary
KPCC president DK Shivakumar clarified has about hit on Congress worker who came to lay his hands on DK Shivakumar shoulders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X