ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನ ಹೆಸರು ತಾನೇ ಪ್ರಸ್ತಾಪ ಮಾಡಲಿ ಬಿಡಿ; ಡಿಕೆ ಶಿವಕುಮಾರ್

|
Google Oneindia Kannada News

ಬೆಂಗಳೂರು, ಮಾರ್ಚ್ 28; "ನನ್ನ ಹೆಸರು ತಾನೇ ಪ್ರಸ್ತಾಪ ಮಾಡಲಿ ಬಿಡಿ. ಯಾರು ಏನು ಬೇಕಾದರೂ ಹೇಳಲಿ ಕಾನೂನು ಇದೆ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡತ್ತೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದರು.

ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಚಾರದಿಂದ ವಾಪಸ್ ಆದ ಡಿ. ಕೆ. ಶಿವಕುಮಾರ್ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದರು. ರಮೇಶ್ ಜಾರಕಿಹೊಳಿ ಆರೋಪಗಳ ಕುರಿತು ಮಾತನಾಡಿದರು.

ಡಿಕೆ ಶಿವಕುಮಾರ್ ವಿರುದ್ಧ ಬಳಸಿದ್ದ 'ಅವಾಚ್ಯ' ಪದವನ್ನು ವಾಪಸ್ ಪಡೆದ ರಮೇಶ್ ಜಾರಕಿಹೊಳಿಡಿಕೆ ಶಿವಕುಮಾರ್ ವಿರುದ್ಧ ಬಳಸಿದ್ದ 'ಅವಾಚ್ಯ' ಪದವನ್ನು ವಾಪಸ್ ಪಡೆದ ರಮೇಶ್ ಜಾರಕಿಹೊಳಿ

"ಯಾರು ಏನು ಬೇಕಾದರೂ ಹೇಳಬಹುದು. ಅದಕ್ಕೆಲ್ಲ ಪುರಾವೆಗಳು ಬೇಕು. ಅವರು ತನಿಖೆ ಮಾಡುತ್ತಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲಿ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.

ಸಿಡಿ ಕೇಸ್: ಮಹಾನಾಯಕ ರಾಜಕೀಯಕ್ಕೆ 'ನಾಲಾಯಕ್' ಎಂದ ರಮೇಶ್ ಜಾರಕಿಹೊಳಿ!ಸಿಡಿ ಕೇಸ್: ಮಹಾನಾಯಕ ರಾಜಕೀಯಕ್ಕೆ 'ನಾಲಾಯಕ್' ಎಂದ ರಮೇಶ್ ಜಾರಕಿಹೊಳಿ!

DK Shivakumar

ಯುವತಿ ಆಡಿಯೋ ಬಗ್ಗೆ ಮಾತನಾಡಿದ ಡಿ. ಕೆ. ಶಿವಕುಮಾರ್, "ಯುವತಿ ನನ್ನ ಬಳಿ ಬಂದಿಲ್ಲ. ಭೇಟಿ ಕೂಡಾ ಮಾಡಿಲ್ಲ" ಎಂದು ಸ್ಪಷ್ಟಪಡಿಸಿದರು.

ನನ್ನ ಮಗಳನ್ನು ನನಗೆ ಕೊಟ್ಟು ಬಿಡಿ: ಕೈ ಮುಗಿದು ಕೇಳಿದ 'ಸಿಡಿ ಲೇಡಿ' ತಂದೆ ನನ್ನ ಮಗಳನ್ನು ನನಗೆ ಕೊಟ್ಟು ಬಿಡಿ: ಕೈ ಮುಗಿದು ಕೇಳಿದ 'ಸಿಡಿ ಲೇಡಿ' ತಂದೆ

ಶನಿವಾರ ಸಂಜೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ರಮೇಶ್ ಜಾರಕಿಹೊಳಿ, "ಆ ಮಹಾನಾಯಕ ಯಾರೆಂದು ಯುವತಿಯ ಪೋಷಕರು ಹೇಳಿದ್ದಾರೆ. ಆ ನಾಯಕ ರಾಜಕೀಯದಲ್ಲಿ ಇರಲು ನಾಲಾಯಕ್, ಇಂಥ ಷಡ್ಯಂತ್ರ ಮಾಡಬಾರದು" ಎಂದು ಹೇಳಿದ್ದರು.

Recommended Video

DK Shivakumar ರಹಸ್ಯ ಬಯಲು ಮಾಡಿದ ಸಿಡಿ ಲೇಡಿ | ಎಲ್ಲ ಸತ್ಯ ಕೊನೆಗೂ ಬಯಲು | Oneindia Kannada

ಡಿಕೆಶಿ ಬೆಳಗಾವಿಗೆ; ರಮೇಶ್ ಜಾರಕಿಹೊಳಿ ಸಿಡಿ ವಿವಾದದ ನಡುವೆಯೇ ಇಂದು ಸಂಜೆ ಡಿ. ಕೆ. ಶಿವಕುಮಾರ್ ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಸಂಜೆ 6 ಗಂಟೆಗೆ ಬೆಳಗಾವಿಗೆ ತಲುಪಲಿರುವ ಡಿ. ಕೆ. ಶಿವಕುಮಾರ್ 7 ಗಂಟೆಗೆ ಜಿಲ್ಲಾ ಘಟಕದ ಜೊತೆ ಬೆಳಗಾವಿ ಲೋಕಸಭಾ ಉಪ ಚುನಾವಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ.

English summary
He may mention my name KPCC president D. K. Shivakumar comment on Ramesh Jarkiholi allegations in CD case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X