ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆಶಿ ರಕ್ಷಣೆಗೆ ಬಸವನಗುಡಿಯಲ್ಲಿ ಒಕ್ಕಲಿಗರಿಂದ ಬೃಹತ್ ಪ್ರತಿಭಟನೆ

|
Google Oneindia Kannada News

Recommended Video

DK Shivakumar : ಡಿಕೆಶಿ ರಕ್ಷಣೆಗೆ ಒಕ್ಕಲಿಗರಿಂದ ಬೃಹತ್ ಪ್ರತಿಭಟನೆ | Oneindia Kannada

ಬೆಂಗಳೂರು, ಸೆಪ್ಟೆಂಬರ್ 09: ಜಾರಿ ನಿರ್ದೇಶನಾಲಯ(ಇ.ಡಿ.)ದಿಂದ ಬಂಧನಕ್ಕೊಳಗಾದ ಕಾಂಗ್ರೆಸ್ ನಾಯಕ, ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಅವರ ರಕ್ಷಣೆಗಾಗಿ ಬೃಹತ್ ಪ್ರತಿಭಟನೆ ನಡೆಸಲು ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕೂಟ ಮುಂದಾಗಿದೆ.

ಸೆಪ್ಟೆಂಬರ್ 11 ರಂದು ಬುಧವಾರ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಿಂದ ರಾಜಭವನದವರೆಗೆ ಬೃಹತ್ ಪ್ರತಿಭಟನಾ rally ನಡೆಸಲು ಒಕ್ಕೂಟ ನಿರ್ಧರಿಸಿದೆ.

ಡಿಕೆಶಿ ಬಂಧನ ವಿರೋಧಿಸಿ ಕನಕಪುರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಐದನೇ ದಿನಕ್ಕೆಡಿಕೆಶಿ ಬಂಧನ ವಿರೋಧಿಸಿ ಕನಕಪುರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಐದನೇ ದಿನಕ್ಕೆ

ಈಗಾಗಲೇ ರಾಮನಗರ, ಮಂಡ್ಯ ಮತ್ತು ಬೆಂಗಳೂರಿನ ಹಲವೆಡೆ ಡಿಕೆಶಿ ಅವರ ಬಂಧನವನ್ನು ವಿರೋಧಿಸಿ ಹಲವು ಪ್ರತಿಭಟನೆಗಳು ನಡೆದಿವೆ. ಕನಕಪುರದಲ್ಲಿ ಕಳೆದ ಐದು ದಿನಗಳಿಂದಲೂ ಪ್ರತಿಭಟನೆ ನಡೆಯುತ್ತಲೇ ಇದೆ.

 DK Shivakumar arrest: Various Vokkaliga organisation in Karnataka has decided to protest on Sep 9

"ಇ.ಡಿ. ಮತ್ತು ಐ.ಟಿ(ಆದಾಯ ತೆರಿಗೆ) ಇಲಾಖೆಗಳ ಮೂಲಕ ಒಕ್ಕಲಿಗ ಜನಾಂಗದ ಪ್ರಭಾವಿ ನಾಯಕರಾದ ಡಿ.ಕೆ.ಶಿವಕುಮಾರ್ ಅವರ ಮೇಲೆ ರಾಜಕೀಯ ಸೇಡನ್ನು ತೀರಿಸಿಕೊಳ್ಳುತ್ತಿರುವ ಒಕ್ಕಲಿಗರ ವಿರೋಧಿ ಕೇಂದ್ರ ಸರ್ಕಾರದ ಇಬ್ಬಗೆಯ ನೀತಿ ಖಂಡಿಸಿ ಬೃಹತ್ ಪ್ರತಿಭಟನಾ rally" ನಡೆಸುವುದಾಗಿ ಒಕ್ಕೂಟದ ಮುಖಂಡರು ತಿಳಿಸಿದ್ದಾರೆ.

ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ದೆಹಲಿ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಜಾರಿ ನಿರ್ದೇಶನಾಲಯ ಸೆ.3ರಂದು ಬಂಧಿಸಿತ್ತು.

ಪತ್ನಿ, ಪುತ್ರಿ ಕಂಡು ಭಾವುಕರಾದ ಡಿಕೆ ಶಿವಕುಮಾರ್ಪತ್ನಿ, ಪುತ್ರಿ ಕಂಡು ಭಾವುಕರಾದ ಡಿಕೆ ಶಿವಕುಮಾರ್

ಅವರನ್ನು ಸೆ.13 ರವರೆಗೆ ಇ.ಡಿ. ವಶಕ್ಕೆ ಒಪ್ಪಿಸಲಾಗಿದೆ. 2017 ರಲ್ಲಿ ಡಿಕೆಶಿ ಅವರ ದೆಹಲಿ ನಿವಾಸದ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ 8.59 ಕೋಟಿ ರೂ. ನಗದು ಹಣ ದೊರಕಿತ್ತು. ಈ ಪ್ರಕರಣವೇ ಅವರಿಗೀಗ ಮುಳುವಾಗಿದ್ದು, ಅವರ ಬಂಧನಕ್ಕೂ ಕಾರಣವಾಗಿದೆ.

English summary
Various Vokkaliga organisation in Karnataka has decided to protest on Sep 9 in Bengaluru against DK Shivakumar's arrest
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X