ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿ.ಕೆ.ಶಿವಕುಮಾರ್ ಮೇಲೂ ಫೋನ್ ಕದ್ದಾಲಿಕೆ ಆರೋಪ

|
Google Oneindia Kannada News

ಬೆಂಗಳೂರು, ಆಗಸ್ಟ್ 19: ಕುಮಾರಸ್ವಾಮಿ ಅವರ ವಿರುದ್ಧ ಫೋನ್ ಕದ್ದಾಲಿಕೆ ಆರೋಪ ಬಂದ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಅವರ ಮೇಲೂ ಫೋನ್ ಕದ್ದಾಲಿಕೆ ಆರೋಪ ಬಂದಿದೆ.

ಬಿಜೆಪಿ ಮುಖಂಡ ಸಿಪಿ.ಯೋಗೇಶ್ವರ್ ಅವರು ಡಿ.ಕೆ.ಶಿವಕುಮಾರ್ ಅವರ ಫೋನ್ ಕದ್ದಾಲಿಕೆ ಆರೋಪ ಹೊರಿಸಿದ್ದು, ಕೋಟ್ಯಂತರ ರೂಪಾಯಿ ಹಣ ಕೊಟ್ಟು ಡಿ.ಕೆ.ಶಿವಕುಮಾರ್ ಯಂತ್ರವೊಂದನ್ನು ಖರೀದಿಸಿದ್ದಾರೆ ಅದರ ಮೂಲಕ ಅವರು ಫೋನ್ ಟ್ಯಾಪಿಂಗ್ ನಡೆಸುತ್ತಿದ್ದಾರೆ ಎಂದು ಅವರು ಆರೋಪ ಮಾಡಿದ್ದಾರೆ.

ಪ್ರವಾಹದ ಕಡೆ ಗಮನ ಕೊಡಿ, ಕದ್ದಾಲಿಕೆ ಮಹತ್ವ ಬೇಡ: ದೇವೇಗೌಡಪ್ರವಾಹದ ಕಡೆ ಗಮನ ಕೊಡಿ, ಕದ್ದಾಲಿಕೆ ಮಹತ್ವ ಬೇಡ: ದೇವೇಗೌಡ

ನನ್ನ ಫೋನ್ ಎರಡು ವರ್ಷದಿಂದ ಟ್ಯಾಪ್ ಆಗುತ್ತಲೇ ಇದೆ. ನನ್ನ ಕರೆಗಳನ್ನು ಕದ್ದು ಕೇಳಲಾಗುತ್ತಿದೆ ಎಂದ ಸಿಪಿ ಯೋಗೀಶ್ವರ್, ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ನೀಡುತ್ತೇನೆ ಎಂದರು.

DK Shivakumar also tapping pones of politicians: CP Yogeshwar

ಫೊನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವುದು ಸ್ವಾಗತಾರ್ಹ ಎಂದಿರುವ ಯೋಗೀಶ್ವರ್, ಸಿಬಿಐ ಪಾರದರ್ಶಕವಾಗಿ ತನಿಖೆ ನಡೆಸಲಿದೆ ಎಂದು ಹೇಳಿದರು.

ಅನರ್ಹ ಶಾಸಕರು ಮತ್ತು ಬಿಜೆಪಿ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಬಗ್ಗೆ ಮಾತನಾಡಿದ ಅವರು, ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅವರೆಲ್ಲರೂ ಒಗ್ಗಟ್ಟಾಗಿದ್ದಾರೆ. ನಾವೂ ಸಹ ಅವರೊಂದಿಗೆ ಸಭೆ ನಡೆಸಿದ್ದೇವೆ ಎಂದರು ಹೇಳಿದರು.

English summary
CP Yogeshwar said that DK Shivakumar using a device to tap politicians calls. He also said He is going to give police complaint about phone tapping.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X