ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುತಂತ್ರದಿಂದ ನನ್ನ ಮಗನನ್ನು ಕೊಂದಿದ್ದಾರೆ: ಡಿಕೆ ರವಿ ತಾಯಿ ಗೌರಮ್ಮ

By Mahesh
|
Google Oneindia Kannada News

ಬೆಂಗಳೂರು, ನವೆಂಬರ್ 24: ದಕ್ಷ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಸಾವಿಗೆ ನ್ಯಾಯ ಸಿಕ್ಕಿಲ್ಲ. ಇದಕ್ಕಾಗಿ ಚುನಾವಣಾ ಕಣಕ್ಕಿಳಿದು ಹೋರಾಟ ನಡೆಸಲು ಅಭಿಮಾನಿಗಳು, ಬೆಂಬಲಿಗರು ಮುಂದಾಗಿರುವ ಸುದ್ದಿಯ ಬೆನ್ನಲ್ಲೇ ರವಿ ಅವರ ತಾಯಿ ಗೌರಮ್ಮ ಅವರು ನ್ಯಾಯಕ್ಕಾಗಿ ಆಗ್ರಹಿಸಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ಕೋಲಾರ ಡಿಸಿ ಆಗಿದ್ದೇ ಜೀವಕ್ಕೆ ಮುಳುವಾಯಿತೆ?ಕೋಲಾರ ಡಿಸಿ ಆಗಿದ್ದೇ ಜೀವಕ್ಕೆ ಮುಳುವಾಯಿತೆ?

"ನನ್ನ ಮಗನ ಸಾವು ಸಂಭವಿಸಿದ್ದು ಆತ್ಮಹತ್ಯೆಯಿಂದ ಅಲ್ಲ. ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವಂಥವನೇ ಅಲ್ಲ. ನನ್ನ ಮಗ ಕೊಲೆಯಾಗಿದ್ದಾನೆ. ಸಂಚು ರೂಪಿಸಿ ಹತ್ಯೆ ಮಾಡಲಾಗಿದೆ' ಎಂದು ಗೌರಮ್ಮ ಮತ್ತೊಮ್ಮೆ ನೋವು ತೋಡಿಕೊಂಡರು.

ರವಿ ಕೇಸ್: ಸಾವಿನಿಂದ ಸಿಬಿಐ ತನಿಖೆ ತನಕ ಟೈಮ್ ಲೈನ್ರವಿ ಕೇಸ್: ಸಾವಿನಿಂದ ಸಿಬಿಐ ತನಿಖೆ ತನಕ ಟೈಮ್ ಲೈನ್

ಸುದ್ದಿಗೋಷ್ಠಿಯಲ್ಲಿ ಮಗನನ್ನು ನೆನೆದು ಕಣ್ಣೀರು ಹಾಕಿದ ತಾಯಿ ಗೌರಮ್ಮ, ನನ್ನ ಮಗನನ್ನು ಕುತಂತ್ರದಿಂದ ಮುಗಿಸಿದ್ದಾರೆ. ನ್ಯಾಯಾಲಯದಲ್ಲಿ ನಾನು ಹೋರಾಡಲೇ ಬೇಕು' ಎಂದರು.

ಕೋಲಾರದಿಂದ ಚುನಾವಣೆ ಅಖಾಡಕ್ಕೆ ಡಿಕೆ ರವಿ ತಾಯಿಕೋಲಾರದಿಂದ ಚುನಾವಣೆ ಅಖಾಡಕ್ಕೆ ಡಿಕೆ ರವಿ ತಾಯಿ

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ಡಿ.ಕೆ ರವಿ ತಾಯಿ ಗೊರಮ್ಮ, ಅವರ ಪರ ವಕೀಲ ದೇವರಾಜ್ ಹಾಗೂ ಡಿ.ಕೆ ರವಿ ತಂದೆ, ಡಿಕೆ ರವಿ ಅಭಿಮಾನಿ ಗಳ ಸಂಘದ ಅಧ್ಯಕ್ಷ ಮುರಳಿ ಪಾಲ್ಗೊಂಡಿದ್ದರು.

ಸಿಬಿಐ ತನಿಖೆ ಬಗ್ಗೆ ಅಸಮಾಧಾನ

ಸಿಬಿಐ ತನಿಖೆ ಬಗ್ಗೆ ಅಸಮಾಧಾನ

ಪೂರ್ಣ ವರದಿ ಸಿಕ್ಕಿಲ್ಲ: ಸಿಬಿಐನವರು ನಡೆಸಿದ ತನಿಖೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗೌರಮ್ಮ, ನಮಗೆ ಪೂರ್ಣ ವರದಿ ಸಿಕ್ಕಿಲ್ಲ. ಹೈ ಕೋರ್ಟ್ ನಲ್ಲಿ ಅರ್ಜಿ ಹಾಕಲು ನಮಗೆ ಸರಿಯಾದ ದಾಖಲೆಗಳಿರಲಿಲ್ಲ ಎಂದರು.

ನಮ್ಮ ನಿರೀಕ್ಷೆಯಂತೆ ಯಾವುದೇ ತನಿಖೆ ನಡೆಸಿಲ್ಲ. ನಮ್ಮ ಹೇಳಿಕೆಗಳನ್ನು ಸರಿಯಾಗಿ ದಾಖಲಿಸಿಲ್ಲ.
ಕತ್ತಿನ ಭಾಗದಲ್ಲಿ ಗಾಯ ಆಗಿತ್ತು. ರವಿ ಸಾವಿಗೂ ಮುನ್ನ ಮಾಧ್ಯಮಗಳಲ್ಲಿ ತೆರಿಗೆ ವಂಚನೆ ಬಗ್ಗೆ ಟಿವಿಗಳಲ್ಲಿ ನೋಡಿದೆ.

ಪೋನ್ ಮಾಡಿ ಎಚ್ಚರಿಕೆ ನೀಡಿದ್ದೆ

ಪೋನ್ ಮಾಡಿ ಎಚ್ಚರಿಕೆ ನೀಡಿದ್ದೆ

ಆಗ ಪೋನ್ ಮಾಡಿ ಎಚ್ಚರಿಕೆ ಕೊಟ್ಟು, ಹುಷಾರಾಗಿ ಇರು ಎಂದಿದ್ದೆ. ಆದರೆ, ಕೋಲಾರದಲ್ಲಿರುವ ನನ್ನ ಮಗನನ್ನು ಅವರ ಮಾವ ಹನುಂತರಾಯಪ್ಪ ಬೆಂಗಳೂರಿಗೆ ಕರೆಸಿಕೊಂಡರು. ಮುಂದೆ ನನ್ನ ಮಗ ನಮ್ಮನ್ನು ಬಿಟ್ಟು ಹೋದ ಎಂದು ಕಣ್ಣೀರಿಟ್ಟರು.

ಡಿಕೆ ರವಿ ಹೆಂಡತಿ ಕುಸುಮಾ ಮತ್ತು ಅವರ ತಂದೆ ಹನುಮಂತರಾಯಪ್ಪ ಅವರ ವಿರುದ್ಧ ಗೌರಮ್ಮ ಆಕ್ರೋಶ ವ್ಯಕ್ತಪಡಿಸಿದರು. ನನ್ನ ಮನೆಯನ್ನು, ನನ್ನ ಮಗನನ್ನು ಅವರೇ ಹಾಳು ಮಾಡಿದರು. ರವಿ ಸತ್ತಾಗ ಬಂದಿದ್ದು, ಇದುವರೆಗೂ ಇತ್ತ ಸುಳಿದಿಲ್ಲ ಎಂದರು.
 ಷಡ್ಯಂತ್ರದಲ್ಲಿ ಎಲ್ಲರೂ ಭಾಗಿ

ಷಡ್ಯಂತ್ರದಲ್ಲಿ ಎಲ್ಲರೂ ಭಾಗಿ

ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವನನ್ನು ಕೊಲೆ ಮಾಡಲಾಗಿದೆ. ಷಡ್ಯಂತ್ರದಿಂದ ನನ್ನ ಮಗನನ್ನು ಕೊಲೆ ಮಾಡಿಸಲಾಗಿದೆ

ಸಿಎಂ ಸಿದ್ದರಾಮಯ್ಯ, ಸಚಿವರಾದ ಡಿ. ಕೆ ಶಿವಕುಮಾರ್, ಕೆ.ಜೆ ಜಾರ್ಜ್, ಶಾಸಕರಾದ ವರ್ತೂರು ಪ್ರಕಾಶ್, ನಾರಾಯಣ ಸ್ವಾಮಿ, ಹನುಮಂತ ರಾಮಪ್ಪ ಎಲ್ಲರೂ ಸೇರಿ ಹತ್ಯೆ ಮಾಡಿದ್ದಾರೆ ಎಂದು ಗೌರಮ್ಮ ಆರೋಪಿಸಿದರು.

ಚುನಾವಣಾ ಗಿಮಿಕ್ ಅಲ್ಲ

ಚುನಾವಣಾ ಗಿಮಿಕ್ ಅಲ್ಲ

ಡಿಕೆ ರವಿ ಅಭಿಮಾನಿ ಗಳ ಸಂಘದ ಅಧ್ಯಕ್ಷ ಮುರಳಿ ಮಾತನಾಡಿ, ಗೌರಮ್ಮ ಅವರನ್ನು ಅಥವಾ ಅವರು ಸೂಚಿಸೋ ಸೂಕ್ತ ವ್ಯಕ್ತಿಯನ್ನು ಚುನಾವಣೆಗೆ ನಿಲ್ಲಿಸುತ್ತೇವೆ. ಕೋಲಾರ ಜಿಲ್ಲೆಯಲ್ಲಿ ಸೂಕ್ತ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ, ಇದರಲ್ಲಿ ಯಾವುದೇ ಚುನಾವಣಾ ಗಿಮಿಕ್ ಇಲ್ಲ ಎಂದರು.

ರವಿ ಅವರ ಸಾವಿನ ಕುರಿತಾಗಿ ಕಾಂಗ್ರೆಸ್ ಸರ್ಕಾರ ಸರಿಯಾಗಿ ಸ್ಪಂದಿಸಿಲ್ಲ. ಕೋಲಾರದಲ್ಲಿ ಡಿ.ಕೆ. ರವಿ ಕೆಲಸ ಮಾಡಿದ್ದು, ಜನಾನುರಾಗಿಯಾಗಿದ್ದರು.ಕೋಲಾರದಿಂದ ಗೌರಮ್ಮ ಅವರು ಸ್ಪರ್ಧಿಸಿ, ನ್ಯಾಯಕ್ಕಾಗಿ ಹೋರಾಟ ಮುಂದುವರೆಸಲಿ ಎಂಬುದು ಅಭಿಮಾನಿಗಳ ಆಶಯ.

English summary
DK Ravi's Mother Gowramma today said her son was killed and family is not satisfied with CBI probe. Deceased IAS officer DK Ravi's fans association president Murali said Gowramma likely to contest next election to seek justice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X