ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆ ರವಿ ಸಾವು : ಎಂ.ಎನ್.ರೆಡ್ಡಿ ವಿರುದ್ಧ ದೂರು

|
Google Oneindia Kannada News

ಬೆಂಗಳೂರು, ಮಾ. 19 : ಐಎಎಸ್ ಅಧಿಕಾರಿ ಡಿಕೆ ರವಿ ಅಸಹಜ ಸಾವಿನ ಕುರಿತು ಹೇಳಿಕೆ ನೀಡಿದ್ದ ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಮಾನವ ಹಕ್ಕು ಕಾರ್ಯಕರ್ತರೊಬ್ಬರು ಈ ದೂರು ನೀಡಿದ್ದಾರೆ.

ಗುರುವಾರ ಮಾನವ ಹಕ್ಕು ಕಾರ್ಯಕರ್ತ ಗಿರೀಶ್ ಗೌಡ ಅವರು ಲೋಕಾಯುಕ್ತಕ್ಕೆ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರ ವಿರುದ್ಧ ದೂರು ನೀಡಿದ್ದಾರೆ. ಡಿ.ಕೆ.ರವಿ ಅವರ ಸಾವಿನ ಪ್ರಕರಣದ ಬಗ್ಗೆ ತನಿಖೆ ನಡೆಯುವ ಮುನ್ನವೇ ಎಂ.ಎನ್.ರೆಡ್ಡಿ ಅವರು ಇದು ಆತ್ಮಹತ್ಯೆ ಎಂದು ಹೇಳಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. [ಈ ಸಾವು ನ್ಯಾಯವೇ ಮತ ಹಾಕಿ]

mn reddi

ಪ್ರಕರಣದ ಬಗ್ಗೆ ತನಿಖೆ ನಡೆಯುವ ಮುನ್ನವೇ ರೆಡ್ಡಿಯವರು ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಹಾಗೂ ಅಲೋಕ್ ಕುಮಾರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ. [ಡಿಕೆ ರವಿ ಸಾವು, ಗುರುವಾರದ ಪ್ರಮುಖ ಘಟನೆಗಳು]

ಎಂ.ಎನ್.ರೆಡ್ಡಿ ಏನು ಹೇಳಿದ್ದರು : ಪ್ರೆಸ್ಟೀಜ್ ಗ್ರೂಪ್‌ಗೆ ಸೇರಿದ 'ಸೇಂಟ್ ಜಾನ್ಸ್‌ವುಡ್ ಅಪಾರ್ಟ್‌ಮೆಂಟ್'ನಲ್ಲಿ ಸೋಮವಾರ ಸಂಜೆ ಡಿ.ಕೆ.ರವಿ ಅವರ ಮೃತದೇಹ ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಎಂ.ಎನ್.ರೆಡ್ಡಿ ಅವರು, ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಾಣುತ್ತದೆ. ಸಮಗ್ರ ತನಿಖೆ ಬಳಿಕ ನಿಜ ಬಯಲಾಗಲಿದೆ ಎಂದು ಹೇಳಿದ್ದರು. [ಸಿಬಿಐ ತನಿಖೆ ಸರಕಾರ ಏಕೆ ಬೇಡ ಎನ್ನುತ್ತಿದೆ?]

Lokayukta

ಡಿಕೆ ರವಿ ಅವರಿಗೆ ಬೆದರಿಕೆ ಕರೆಗಳು ಬರುತ್ತಿದ್ದ ಬಗ್ಗೆ ನಮಗೆ ಮಾಹಿತಿ ಇಲ್ಲ. ಬೆದರಿಕೆ ಕರೆಗಳ ಬಗ್ಗೆ ಅವರು ತಮ್ಮ ಹಿರಿಯ ಅಧಿಕಾರಿಗಳಿಗೂ ಯಾವುದೇ ವಿಷಯ ತಿಳಿಸಿರಲಿಲ್ಲ ಮತ್ತು ಪೊಲೀಸ್‌ ರಕ್ಷಣೆ ಸಹ ಕೋರಿರಲಿಲ್ಲ ಎಂದು ರೆಡ್ಡಿ ಸ್ಪಷ್ಟಪಡಿಸಿದ್ದರು.

English summary
Human rights activist Girish Gowda filed a private complaint to Lokayukta against Bengaluru police commissioner MN Reddi and Additional Police Commissioner Alok Kumar over there statements on DK Ravi death case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X