ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿ.ಜೆ ಹಳ್ಳಿ ಗಲಭೆ: ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 19: ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಸಂಬಂಧ ಕ್ಲೇಮ್ ಕಮೀಷನ್ ರಚನೆಯಾಗಿ ಆರು ತಿಂಗಳಾದರೂ ನಷ್ಠ ಪರಿಹಾರ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಕೇವಲ ಮೂರು ಮಾತ್ರ ! ಒಂದಡೆ ಮೂಲ ಸೌಲಭ್ಯ ಇಲ್ಲದೇ ಸೊರಗಿದ್ದ ನಿವೃತ್ತ ನ್ಯಾ. ಕೆಂಪಣ್ಣ ನೇತೃತ್ವದ ಕ್ಲೇಮ್ ಕಮೀಷನ್ ಗಲಭೆಯಲ್ಲಿ ಹಾನಿಯಾದ ನಷ್ಟ ಪರಿಹಾರ ಕೋರಿ ಅರ್ಜಿ ಸಲ್ಲಿಸುವ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಿದೆ.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ವಿವರ ಹಂಚಿಕೊಂಡ ನಿವೃತ್ತ ನ್ಯಾ. ಕೆಂಪಣ್ಣ ಅವರು, ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆಯಲ್ಲಿ ಸಾರ್ವಜನಿಕರು ಅಪಾರ ಪ್ರಮಾಣದ ಆಸ್ತಿ ನಷ್ಟವುಂಟಾಗಿತ್ತು. ಆಸ್ತಿ ಹಾನಿ ಮಾಡಿದ ಆರೋಪಿಗಳಿಂದಲೇ ದಂಡ ವಸೂಲಿ ಮಾಡುವ ಬಗ್ಗೆ ಹೈಕೋರ್ಟ್ ಕ್ಲೇಮ್ ಕಮೀಷನ್ ನೇಮಿಸಲು ನಿರ್ದೇಶಿಸಿತ್ತು.ಅದರಂತೆ ಕಳೆದ ವರ್ಷ ಆಗಸ್ಟ್ ನಲ್ಲಿ ಕ್ಲೇಮ್ ಕಮೀಷನ್ ರಚನೆಯಾಗಿತ್ತು. ಆರಂಭದಲ್ಲಿ ಮೂಲ ಸೌಲಭ್ಯ ಕಲ್ಪಿಸದೇ ಸರ್ಕಾರಕ್ಕೆ ಹೈಕೋರ್ಟ್ ಚೀಮಾರಿ ಹಾಕಿತ್ತು. ಇದಾದ ಬಳಿಕ ಬಾಲಬ್ರೂಹಿ ಭವನದಲ್ಲಿ ಕ್ಲೇಮ್ ಕಮೀಷನ್ ನೇಮಕವಾಗಿತ್ತು. ಆರು ತಿಂಗಳು ಕಳೆದರೂ ಮೂರು ಮಂದಿ ಮಾತ್ರ ವಾಹನ ಹಾನಿ ಕುರಿತು ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿವೃತ್ತ ನ್ಯಾ. ಕೆಂಪಣ್ಣ ಅವರು ಸುದ್ದಿಗೋಷ್ಠಿ ನಡೆಸಿ ಕ್ಲೇಮ್ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಿರುವ ವಿಷಯವನ್ನು ತಿಳಿಸಿದರು.

2020 ಆಗಸ್ಟ್ 11 ರಂದು ಡಿ.ಜೆ.ಹಳ್ಳಿ ಹಾಗೂ ಕೆ.ಜಿ. ಹಳ್ಳಿಯಲ್ಲಿ ಗಲಭೆ ನಡೆದಿತ್ತು. ಕರ್ನಾಟಕ ಹೈಕೋರ್ಟ್ ಅಧಿಸೂಚನೆ ಮೇರೆಗೆ ಕ್ಲೇಮ್ ಕಮೀಷನ್ ರಚನೆ ಮಾಡಲಾಗಿದೆ. ಕಮೀಷನ್ ಬಗ್ಗೆ ಹೆಚ್ಚಿನ ಪ್ರಚಾರದ ಅವಶ್ಯಕತೆ ಇದೆ. ಗಲಭೆಯಲ್ಲಿ ನಷ್ಟಕ್ಕೆ ಒಳಗಾದವರು ದಾಖಲೆಗಳ ಸಮೇತ ಅರ್ಜಿ ಸಲ್ಲಿಸಬಹುದು. ಫೆಬ್ರವರಿ 28 ರ ವರೆಗೂ ಗಡುವು ನೀಡಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

DJ Halli Violence: Only 3 Claims Submitted to Claim Commission for loss, damage

ಗಲಭೆಯಲ್ಲಿ ವಾಹನ ಹಾನಿ ಬಗ್ಗೆ ಮೂರು ಅರ್ಜಿ ಬಂದಿದೆ. ಇನ್ನು ಮನೆಗೆ ಬೆಂಕಿ ಬಿದ್ದ ಬಗ್ಗೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಈಗಾಗಲೇ ಅರ್ಜಿ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಅವರ ಜತೆಗೆ ಬೇರೆ ಯಾರ ಮನೆಗಳಿಗೆ ಹಾನಿಯಾಗಿರುವರಿಂದಲೂ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ. ಫೆ. 28 ಅರ್ಜಿ ಸಲ್ಲಿಸಲು ಕೊನೆ ದಿನಾಂಕವಲ್ಲ, ಪರಿಸ್ಥಿತಿ ಅವಲೋಕಿಸಿ ಕಾಲಾವಕಾಶ ನೀಡಲೂ ಬಹುದು. ಪ್ರತಿಭಟನೆ, ಜಾಥಾ, ಗಲಾಟೆ, ಹರತಾಳ, ಗಲಭೆಯಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಯನ್ನು ನಷ್ಟ ಮಾಡಿದ್ರೆ ಅಂತವರಿಂದ ನಷ್ಟ ವಸೂಲಿ ಮಾಡುವ ಉದ್ದೇಶದಿಂದ ಕ್ಲೇಮ್ ಕಮೀಷನ್ ರಚನೆ ಮಾಡಲಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿಗಳು ತಿಳಿಸಿದರು.

DJ Halli Violence: Only 3 Claims Submitted to Claim Commission for loss, damage

Recommended Video

ಸಿಲಿಕಾನ್ ಸಿಟಿಯಲ್ಲಿ ಇಂದು ವರುಣಾರ್ಭಟ-ವಾಹನ ಸವಾರರ ಪರದಾಟ | Oneindia Kannada

ಅರ್ಜಿ ಜತೆ ಏನೇನು ಸಲ್ಲಿಸಬೇಕು: ಹೆಸರು ಮತ್ತು ಅಂಚೆ ವಿಳಾಸ, ದೂರವಾಣಿ ಸಂಖ್ಯೆ ಕಡ್ಡಾಯವಾಗಿ ಸಲ್ಲಿಸಬೇಕು. ಅಡಿಯೋ ವಿಡಿಯೋ ಸಾಕ್ಷಾಧಾರಗಳಿದ್ದರೆ ಸಲ್ಲಿಸಬೇಕು. ಅಡಿಯೋ, ವಿಡಿಯೋ ನೈಜತೆ ಬಗ್ಗೆ ಸಾಕ್ಷ್ಯವನ್ನು ದಾಖಲಿಸಬೇಕು. ಹಾನಿಗೊಳಗಾದ ವಸ್ತು, ಮನೆ, ಕಟ್ಟಡ ಸ್ವರೂಪ ವಿವರಣೆ ದಾಖಲೆಗಳು, ಹಾನಿಗೊಳಗಾದ ಸ್ವತ್ತಿನ ಮೌಲ್ಯ. ಅಡಿಯೋ, ವಿಡಿಯೋ ಮೂಲ ರೆಕಾರ್ಡ್ ಮಾಡದಿದ್ದಲ್ಲಿ ಅವುಗಳ ಮೂಲವನ್ನು ಸಲ್ಲಿಸಬೇಕು.ಅರ್ಜಿದಾರರ ಲಿಖಿತ ಹೇಳಿಕೆ ಬೆಂಬಲಿಸುವ ಸಾಕ್ಷಾಧಾರಿಗಳೂ ಇದ್ದಲ್ಲಿ, ಅವರ ಹೆಸರು ಮತ್ತು ವಿಳಾಸ. ಆಸ್ತಿ ನಷ್ಟದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಲ್ಲಿ ಅದರ ವಿವರಗಳು ಸಲ್ಲಿಸಬೇಕು.

English summary
DJ Halli Violence: only 3 claims submitted to claim commission for loss and damage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X