ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅವರಿಗೆ ಬುದ್ದಿ ಬರೋದು ಇನ್ಯಾವಾಗ? ತೀವ್ರ ವಿಷಾದ ವ್ಯಕ್ತ ಪಡಿಸಿದ ರೋಷನ್ ಬೇಗ್

|
Google Oneindia Kannada News

ಬೆಂಗಳೂರು, ಆ 13: ಮಾಜಿ ಶಾಸಕ, ಹಾಲೀ ಬಿಜೆಪಿ ಮುಖಂಡ ರೋಷನ್ ಬೇಗ್, ಮಂಗಳವಾರ (ಆ 11) ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತ ಪಡಿಸಿದ್ದಾರೆ.

Recommended Video

DJ halli , KG Halliಯಲ್ಲಿ ಮೃತಪಟ್ಟವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ Zameer Ahmed | Oneindia Kannada

ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಬೇಗ್, "ಹಿಂದೆಯೂ ಈ ರೀತಿಯ ಘಟನೆಯು ನಡೆದಿತ್ತು. ಇಂತವರಿಂದ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು. ಇವರೆಲ್ಲಾ ಬುದ್ದಿ ಕಲಿಯೋದು ಯಾವಾಗ"ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಡಿಜೆ ಹಳ್ಳಿ ಕೋಮು ಅಟ್ಟಹಾಸಕ್ಕೆ 'ಜಾತಿಯ ತುಪ್ಪ' ಸುರಿದ ಬಿಜೆಪಿ, ಸಿದ್ದರಾಮಯ್ಯ ಡಿಜೆ ಹಳ್ಳಿ ಕೋಮು ಅಟ್ಟಹಾಸಕ್ಕೆ 'ಜಾತಿಯ ತುಪ್ಪ' ಸುರಿದ ಬಿಜೆಪಿ, ಸಿದ್ದರಾಮಯ್ಯ

"ಹಿಂದೊಮ್ಮೆ ಆಂಗ್ಲ ದೈನಿಕದಲ್ಲಿ (ಡೆಕ್ಕನ್ ಹೆರಾಲ್ಡ್) ಲೇಖನವೊಂದು ಪ್ರಕಟವಾಗಿದ್ದಕ್ಕೆ ಇದೇ ರೀತಿಯ ಗಲಭೆ ನಡೆದಿತ್ತು. ಅದಾದ ನಂತರ, ಮೊನ್ನೆಯ ಘಟನೆ ನಡೆದಿದೆ. ಇದು ಇಸ್ಲಾಂಗೆ ವಿರುದ್ದವಾದದ್ದು"ಎಂದು ರೋಷನ್ ಬೇಗ್ ಹೇಳಿದ್ದಾರೆ.

DJ Halli And KG Halli Incident Not Acceptable: Senior BJP Leader Roshan Baig Statement

"ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ್ದಾರೆ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಸಾವಿರಾರು ಜನರನ್ನು ಸೇರಿಸಿ ಗಲಾಟೆ ಮಾಡಿದ್ದಾರೆ. ಇಸ್ಲಾಂ ಧರ್ಮದಲ್ಲಿ ಇದ್ಯಾವುದಕ್ಕೂ ಸ್ಥಾನವಿಲ್ಲ"ಎಂದು ಬೇಗ್ ಹೇಳಿದ್ದಾರೆ.

"ಹಿಂಸಾಚಾರ ನಡೆದಾಗ, ಸ್ಥಳೀಯ ಮುಸ್ಲಿಮರು ಸೇರಿ, ದೇವಸ್ಥಾನವನ್ನು ರಕ್ಷಿಸಿದ್ದಾರೆ. ಅವರಿಗೆಲ್ಲಾ ನನ್ನ ಸಲಾಂ. ಈ ರೀತಿಯ ಸಾಮರಸ್ಯ ನಮ್ಮಲ್ಲಿ ಇರಬೇಕಾಗಿದೆ"ಎಂದು ರೋಷನ್ ಬೇಗ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

"ನಾವು ದೀಪ ಹಚ್ಚುವವರ ಪರವೇ ಹೊರತೂ, ಬೆಂಕಿ ಹಚ್ಚುವವರ ಪರವಲ್ಲ"

ಕೆಜಿ ಹಳ್ಳಿ, ಡಿಜೆ ಹಳ್ಳಿ ಹಾಗೂ ಕಾವಲ್ ಭೈರಸಂದ್ರದ ಗಲಭೆ ಪ್ರಕರಣದಲ್ಲಿ ಅಪಾರ ಪ್ರಮಾಣವಾದ ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಈ ಗಲಭೆಯಲ್ಲಿ ಉಂಟಾದ ನಷ್ಟವನ್ನು ಗಲಭೆಕೋರರಿಂದಲೇ ಭರಿಸಲಾಗುತ್ತದೆ. ಗಲಭೆಕೋರರ ಆಸ್ತಿ ಜಪ್ತಿ ಮಾಡಿ ನಷ್ಟ ಸರಿದೂಗಿಸಲಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಈಗಾಗಲೇ ಹೇಳಿದ್ದಾರೆ.

English summary
DJ Halli And KG Halli Incident Not Acceptable: Senior BJP Leader Roshan Baig Statement,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X