ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳಾ ಡಿಜೆ ಜತೆ ಡೆಲಿವರಿ ಬಾಯ್ ಅಸಭ್ಯ ವರ್ತನೆ

|
Google Oneindia Kannada News

ಬೆಂಗಳೂರು, ಜನವರಿ 23 : ಆನ್ ಲೈನ್ ಮೂಲಕ ಆರ್ಡರ್ ಪಡೆದ ಫುಡ್ ಸಪ್ಲೈ ಕಂಪನಿಯೊಂದರ ಡೆಲಿವರಿ ಬಾಯ್ ಮಹಿಳಾ ಡಿಜೆ ಜತೆ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಹಿಳೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಮಧ್ಯಾಹ್ನ ಸ್ವಿಗ್ಗಿ ಡಾಟ್ ಕಾಮ್ ನಿಂದ ಫುಡ್ ಆರ್ಡರ್ ಮಾಡಿದ್ದರು. ವಿಗ್ನೇಶ್ ಹೆಸರಿನ ಡೆಲಿವರಿ ಬಾಯ್ ತನ್ನ ಮೊಬೈಲ್ ಫೋನ್ ನಿಂದ ಕರೆ ಮಾಡಿ ಸಂಪರ್ಕಿಸಿದ್ದ. ಎಲ್ಲಿಗೆ ತಲುಪಿಸ ಬೇಕು ಎಂದು ಕೇಳಿದ್ದ. ಮಹಿಳೆಯು ತಾನು ಇರುವ ವಿಳಾಸ ತಿಳಿಸಿ ಮೊದಲನೇ ಮಹಡಿಯಲ್ಲಿ ತಾನು ಇರುವುದಾಗಿ ತಿಳಿಸಿದ್ದರು.

ಉಬರ್ ಈಟ್ಸ್ ಗೆ ಸೆಡ್ಡು ಹೊಡೆಯಲು ಫುಡ್ ಪಾಂಡಾವನ್ನು ಖರೀದಿಸಿದ ಓಲಾಉಬರ್ ಈಟ್ಸ್ ಗೆ ಸೆಡ್ಡು ಹೊಡೆಯಲು ಫುಡ್ ಪಾಂಡಾವನ್ನು ಖರೀದಿಸಿದ ಓಲಾ

ಡೆಲಿವರಿ ಬಾಯ್ ಮತ್ತೊಮ್ಮೆ ಕರೆ ಮಾಡದೆ ನೇರವಾಗಿ ಗೇಟ್ ತೆಗೆದು ಒಳಗೆ ಪ್ರವೇಶಿಸಿದ್ದಾನೆ. ಇದನ್ನು ಮಹಿಳೆ ಪ್ರಶ್ನಿಸದೆ ಅವರಿಗೆ ಹಣ ನೀಡಿ ಆಹಾರವನ್ನು ಪಡೆದಿದ್ದಾಳೆ. ನಂತರ ಮನೆಯಲ್ಲಿ ನೀವೊಬ್ಬರೇ ಇರುವುದಾ ಎಂದು ಪ್ರಶಸ್ನಿಸಿದ್ದಾನೆ. ಅವನ ಹಾವಭಾವ ಗಮನಿಸಿದ ಮಹಿಳೆ ಮನೆಯಿಂದ ಹೊರನಡೆದಿದ್ದಾಳೆ.

DJ accuses Delivery Boy misbehave

ಆದರೆ ಅಷ್ಟಕ್ಕೇ ಸುಮ್ಮನಿರದ ಅವನು ಮಹಿಳೆಯನ್ನು ಹಿಂಬಾಲಿಸಿದ್ದಾನೆ ಜತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಮಹಿಳೆ ಹಾಗೂ ಡೆಲಿವರಿ ಬಾಯ್ ನಡುವಿನ ಜೋರು ಮಾತುಗಳನ್ನು ಆಲಿಸಿದ ಬೀದಿ ನಾಯಿಗಳು ಬಂದು ಆತನನ್ನು ನೋಡಿ ಬೊಗಳಲು ಪ್ರಾರಂಭಿಸಿದಾಗ ಅಲ್ಲಿಂದ ಆತನ ಕಾಲ್ಕಿತ್ತಿದ್ದಾನೆ.

ಸಾಮಾನ್ಯವಾಗಿ ಮನೆ ಮಾಲೀಕರ ಸೂಚನೆ ಮೇರೆಗೆ ಡೆಲಿವರಿ ಬಾಯ್ ಗೆ ಗೇಟ್ ನಿಂದ ಆಚೆಯೇ ನಿಲ್ಲುವಂತೆ ಸೂಚಿಸಲಾಗಿತ್ತು. ಆದರೂ ಗೇಟ್ ತೆಗೆದು ಒಳಗೆ ಪ್ರವೇಶಿಸಿದ್ದ. ಈ ಕುರಿತು ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

English summary
A disc jockey(DJ) has accused the food delivery boy of an online firm of mis behaving with her on Jan 21. In a post uploaded on Facebook , the DJ said the stray dog she fed every day came to hher rescue when she raised her vioce. Fearing that the dog may attack him the accused fled the scene the woman said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X