• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಿನ್ನಮತೀಯರ ಬಗ್ಗೆ ಕಿಡಿಕಾರಿದ ಮಾಜಿ ಸಂಸದೆ ರಮ್ಯಾ

|

ಬೆಂಗಳೂರು, ಆ. 24: ಕಾಂಗ್ರೆಸ್ ನೂತನ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ನಿರೀಕ್ಷಿಸಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕಾರಿ ವರ್ಚ್ಯುಯಲ್ ಸಭೆ ಸದ್ಯ ಜಾರಿಯಲ್ಲಿದೆ. ಈ ನಡುವೆ ಸಭೆಯ ಗೌಪ್ಯ ಮಾಹಿತಿ ಸೋರಿಕೆ ಬಗ್ಗೆ ಮಾಜಿ ಸಂಸದೆ, ಕಾಂಗ್ರೆಸ್ಸಿನ ಸಾಮಾಜಿಕ ಮಾಧ್ಯಮ ಘಟಕದ ಮಾಜಿ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಅವರು ಕಿಡಿಕಾರಿದ್ದಾರೆ.

   ರಾಜಕೀಯ - ಸಿನಿಮಾ ಸಹವಾಸ ಸಾಕೆಂದ Ramya! | Oneindia Kannada

   ನೋ ಪಾಲಿಟಿಕ್ಸ್, ನೋ ಸಿನಿಮಾ ಎಂದು ಇತ್ತೀಚೆಗೆ ಹೇಳಿದ್ದ ದಿವ್ಯಸ್ಪಂದನ ಅವರು ವರ್ಷದ ಬಳಿಕ ಮತ್ತೆ ಇತ್ತೀಚೆಗೆ ಆನ್ ಲೈನಲ್ಲಿ ಕಾಣಿಸಿಕೊಂಡು, ಸಕ್ರಿಯರಾಗಿದ್ದಾರೆ. ರಾಜಕೀಯ ನನ್ನ ಪಾಲಿಗೆ ಮುಗಿದ ಅಧ್ಯಾಯ ಎಂಬಂತೆ ದಿ ಪ್ರಿಂಟ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಬಗ್ಗೆ ಬರುತ್ತಿರುವ ಊಹಾಪೋಹ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

   ಅಯೋಧ್ಯೆ ರಾಮ ಮಂದಿರ: ಸಂತಸ ಎನ್ನುವುದು ಮಂದಿರ, ಮಸೀದಿಯಲ್ಲಿಲ್ಲ, ನಟಿ ರಮ್ಯಾ

   ಭಿನ್ನಮತೀಯ ನಾಯಕರುಗಳು ಕಾಂಗ್ರೆಸ್ ನಾಯಕತ್ವ ಬದಲಾವಣೆ, ರಾಹುಲ್ ಗಾಂಧಿ ವಿರುದ್ಧ ಪತ್ರ ಬರೆದಿದ್ದಷ್ಟೇ ಅಲ್ಲ ಈಗ ಸಭೆಯ ಗೌಪ್ಯ ಮಾಹಿತಿಯನ್ನು ಬಹಿರಂಗಪಡಿಸುತ್ತಿದ್ದಾರೆ ಎಂದು ದಿವ್ಯಸ್ಪಂದನ ಟ್ವೀಟ್ ಮಾಡಿದ್ದಾರೆ..

   ಹಿರಿಯ ಮುಖಂಡ, ವಕ್ತಾರ ರಣದೆಪ್ ಸುರ್ಜೇವಾಲ ಕೂಡಾ ಇದೇ ರೀತಿ ಟ್ವೀಟ್ ಮಾಡಿದ್ದು, ಮಾಧ್ಯಮಗಳಿಗೆ ತಪ್ಪು ಸಂದೇಶ ನೀಡಬೇಡಿ ಎಂದು ಹಿರಿಯ ಮುಖಂಡ ಕಪಿಲ್ ಸಿಬಾಲ್ ರನ್ನು ಕೋರಿದ್ದಾರೆ.

   ಲೋಕಸಭೆ ಚುನಾವಣೆಯ ಸೋಲಿನ ನಂತರ ದಿವ್ಯಸ್ಪಂದನ ಅವರ ಫೇಸ್ಬುಕ್, ಟ್ವಿಟ್ಟರ್ ಖಾತೆ ಖಾತೆಯನ್ನು ನಿಷ್ಕ್ರಿಯ(deactivated)ವಾಗಿತ್ತು. ಎಲ್ಲಾ ಟ್ವೀಟ್ ಡಿಲೀಟ್ ಆಗಿತ್ತು. ಟ್ವಿಟ್ಟರ್ ಮತ್ತು ಇನ್ ಸ್ಟಾಗ್ರಾಂ ಮಾತ್ರವಲ್ಲದೆ ದಿವ್ಯ ಸ್ಪಂದನ ಅವರು ಕಾಂಗ್ರೆಸ್ ನ ಆಂತರಿಕ ವಾಟ್ಸಾಪ್ ಗ್ರೂಪ್ ನಿಂದಲೂ ಎಕ್ಸಿಟ್ ಆಗಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿತ್ತು.

   2019ರ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 52(543) ಸ್ಥಾನಗಳಲ್ಲಿ ಗೆದ್ದು ಹೀನಾಯ ಪ್ರದರ್ಶನ ತೋರಿತ್ತು. ಇದಾಗಿ ಕೆಲವೇ ದಿನಗಳಲ್ಲಿ ಅಂದರೆ ಮೇ 01 ರಂದು ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ತಮ್ಮ ಟ್ವಿಟ್ಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರು.

   English summary
   Former MP, Former Congress media chief Divya Spandana accused the dissident leaders of leaking not just the letter but also the discussions occurring during the ongoing CWC meet.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X