ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಕೊರೊನಾ: ನಿಮ್ಮ ಅಪಾರ್ಟ್ ಮೆಂಟ್ ಎಷ್ಟು ಸೇಫ್?

|
Google Oneindia Kannada News

ಚೀನಾದಲ್ಲಿ ಸಾವಿರಾರು ಜನರ ಪ್ರಾಣ ಕಿತ್ತುಕೊಂಡಿರುವ ಕೊರೊನಾ ವೈರಸ್ ಈಗ ಬೆಂಗಳೂರಿಗೆ ಬಂದಿದೆ. ಬೆಂಗಳೂರಿನಿಂದ ತೆಲಂಗಾಣಕ್ಕೆ ಪ್ರಯಾಣಿಸಿದ್ದ ಟೆಕ್ಕಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

ಹೀಗಿರುವಾಗಲೇ, ಬೆಂಗಳೂರಿನ ಮತ್ತೋರ್ವನಿಗೆ ಕೊರೊನಾ ವೈರಸ್ ಸೋಂಕು ತಗುಲಿಸುವ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ಸರ್ಜಾಪುರ ರಸ್ತೆಯ ಕೈಕೊಂಡಹಳ್ಳಿಯ ಜೈನ್ ಹೈಟ್ ಅಲ್ಟ್ರಾ ಅಪಾರ್ಟ್ ಮೆಂಟ್ ನಿವಾಸಿಯೊಬ್ಬರಿಗೆ ''ಕೊರೊನಾ ವೈರಸ್ ಪಾಸಿಟಿವ್'' ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ, ಜಿಲ್ಲಾ ವಿಚಕ್ಷಣ ದಳ ಅಧಿಕಾರಿ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.

ಕೊರೊನಾ ಪೀಡಿತ ಬೆಂಗಳೂರಿನ ಯಾವ ಕಂಪನಿಯಲ್ಲಿದ್ದ.? ಹೇಳಿ ಪ್ಲೀಸ್ಕೊರೊನಾ ಪೀಡಿತ ಬೆಂಗಳೂರಿನ ಯಾವ ಕಂಪನಿಯಲ್ಲಿದ್ದ.? ಹೇಳಿ ಪ್ಲೀಸ್

ಜೈನ್ ಹೈಟ್ ಅಲ್ಟ್ರಾ ಅಪಾರ್ಟ್ ಮೆಂಟ್

ಜೈನ್ ಹೈಟ್ ಅಲ್ಟ್ರಾ ಅಪಾರ್ಟ್ ಮೆಂಟ್

ಜೈನ್ ಹೈಟ್ ಅಲ್ಟ್ರಾ ಅಪಾರ್ಟ್ ಮೆಂಟ್ ನಲ್ಲಿ ವಾಸ ಮಾಡುತ್ತಿರುವ ನಿವಾಸಿಯೊಬ್ಬರಿಗೆ ಕೊರೊನಾ ಸೊಂಕು ತಗುಲಿಸುವ ಶಂಕೆ ವ್ಯಕ್ತವಾಗಿದೆ. ಅಪಾರ್ಟ್ ಮೆಂಟ್ ಫ್ಲಾಟ್ ನಂಬರ್ C 7 ನಲ್ಲಿ ವಾಸ ಮಾಡುತ್ತಿರುವ ವ್ಯಕ್ತಿಗೆ ಕೊರೊನಾ ಸೋಂಕು ಬಂದಿರುವ ಮಾಹಿತಿ ಜಿಲ್ಲಾ ವಿಚಕ್ಷಣ ದಳಕ್ಕೆ ಸಿಕ್ಕಿದೆ. ಹೀಗಾಗಿ, ಅಪಾರ್ಟ್ ಮೆಂಟ್ ಪರಿಶೀಲನೆ ನಡೆಸಲು ಜಿಲ್ಲಾ ವಿಚಕ್ಷಣ ದಳ ಅಧಿಕಾರಿಗಳು ಮುಂದಾಗಿದ್ದಾರೆ.

ಪರಿಶೀಲನೆಗಾಗಿ ಅನುಮತಿ ಬರೆದು ಪತ್ರ

ಪರಿಶೀಲನೆಗಾಗಿ ಅನುಮತಿ ಬರೆದು ಪತ್ರ

ಕೊರೊನಾ ಸೋಂಕು ಪಾಸಿಟಿವ್ ಇರುವ ಬಗ್ಗೆ ಮಾಹಿತಿ ಪಡೆದಿರುವ ಜಿಲ್ಲಾ ವಿಚಕ್ಷಣ ದಳ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ. ಜೈನ್ ಹೈಟ್ ಅಲ್ಟ್ರಾ ಅಪಾರ್ಟ್ ಮೆಂಟ್ ನಲ್ಲಿ ಪರಿಶೀಲನೆ ನಡೆಸಲು ಅನುಮತಿ ಕೋರಿ ಅಪಾರ್ಟ್ ಮೆಂಟ್ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಅಪಾರ್ಟ್ ಮೆಂಟ್ ನಲ್ಲಿ ಇರುವ ಉಳಿದ ನಿವಾಸಿಗಳಿಗೆ ಸೋಂಕು ತಗುಲದಂತೆ ಮುಂಜಾಗ್ರತೆವಹಿಸುತ್ತಿದ್ದಾರೆ.

ಕೊರೊನಾ ಪಾಸಿಟಿವ್ ಬೆಂಗಳೂರಿನಲ್ಲಿ ಮೊದಲು

ಕೊರೊನಾ ಪಾಸಿಟಿವ್ ಬೆಂಗಳೂರಿನಲ್ಲಿ ಮೊದಲು

ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ಬೆಂಗಳೂರಿನಲ್ಲಿ ಇದೇ ಮೊದಲು. ಬೆಂಗಳೂರಿನ ಖಾಸಗಿ ಕಂಪನಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಆದರೆ, ಆ ವ್ಯಕ್ತಿ ಮೂಲತಃ ತೆಲಂಗಾಣದವರಾಗಿದ್ದರು. ದುಬೈನಲ್ಲಿ ಈ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು.

ನಿಮ್ಮ ಅಪಾರ್ಟ್ ಮೆಂಟ್ ಎಷ್ಟು ಸೇಫ್?

ನಿಮ್ಮ ಅಪಾರ್ಟ್ ಮೆಂಟ್ ಎಷ್ಟು ಸೇಫ್?

ಬೆಂಗಳೂರಿನಲ್ಲಿ ಸುಮಾರು 22 ಸಾವಿರ ಅಪಾರ್ಟ್ ಮೆಂಟ್ ಗಳು ಇವೆ. ಕಡಿಮೆ ಎಂದರೂ ಒಂದು ಅಪಾರ್ಟ್ ಮೆಂಟ್ ನಲ್ಲಿ 20 ಫ್ಲಾಟ್ ಗಳು ಇರುತ್ತದೆ. ನೂರಾರೂ ಮಂದಿ ವಾಸ ಮಾಡುವ ಅಪಾರ್ಟ್ ಮೆಂಟ್ ಗಳಲ್ಲಿ ಅಪ್ಪಿ ತಪ್ಪಿ ಕೊರೊನಾ ವೈರಸ್ ಸೋಂಕು ತಗುಲಿದರೆ, ಒಮ್ಮೆಲೆ ಹೆಚ್ಚು ಮಂದಿಯ ಜೀವಕ್ಕೆ ಕುತ್ತು ಬಂದ ಹಾಗೆ. ಹೀಗಾಗಿ, ಅಪಾರ್ಟ್ ಮೆಂಟ್ ನಲ್ಲಿ ವಾಸ ಮಾಡುವವರು ಹೆಚ್ಚಿನ ಸುರಕ್ಷತ ಕ್ರಮವನ್ನು ಕೈಗೊಳ್ಳಬೇಕು.

English summary
District surveillance unit issued notice to bengaluru apartment for corona virus case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X