ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜೀನಾಮೆ ನೀಡಿದ್ದರೂ ಅಧಿವೇಶನಕ್ಕೆ ಹಾಜರಾಗುತ್ತಾರೆ ರಾಮಲಿಂಗಾ ರೆಡ್ಡಿ

|
Google Oneindia Kannada News

ಬೆಂಗಳೂರು, ಜುಲೈ 15: ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರೂ ಸಹ ಇಂದಿನ ಅಧಿವೇಶನಕ್ಕೆ ಕಾಂಗ್ರೆಸ್ ಹಿರಿಯ ಮುಖಂಡ ರಾಮಲಿಂಗಾ ರೆಡ್ಡಿ ಅವರು ಹಾಜರಾಗಲಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಾಮಲಿಂಗಾ ರೆಡ್ಡಿ ಅವರು, ರಾಜೀನಾಮೆ ಸಲ್ಲಿಸಿದ್ದೇನೆ ಆದರೆ ಅದಿನ್ನೂ ಅಂಗೀಕಾರವಾಗಿಲ್ಲ, ಹಾಗಾಗಿ ನಾನಿನ್ನೂ ವಿಧಾನಸಭೆ ಸದಸ್ಯನೇ ಹಾಗಾಗಿ ಇಂದು ಅಧಿವೇಶನಕ್ಕೆ ಹಾಜರಾಗುತ್ತೇನೆ ಎಂದಿದ್ದಾರೆ.

ಆನೇಕಲ್ : ಕಾಂಗ್ರೆಸ್ಸಿಗರ ಸಂಧಾನ ನಂತರ ರಾಮಲಿಂಗಾರೆಡ್ಡಿ ಸುದ್ದಿಗೋಷ್ಠಿ ಆನೇಕಲ್ : ಕಾಂಗ್ರೆಸ್ಸಿಗರ ಸಂಧಾನ ನಂತರ ರಾಮಲಿಂಗಾರೆಡ್ಡಿ ಸುದ್ದಿಗೋಷ್ಠಿ

ರಾಮಲಿಂಗಾ ರೆಡ್ಡಿ ಅವರು ಜುಲೈ 6 ನೇ ತಾರೀಖಿನಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಅವರ ರಾಜೀನಾಮೆ ಇನ್ನೂ ಸ್ವೀಕೃತಿಯಾಗಿಲ್ಲ. ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಸ್ಪೀಕರ್ ಅವರು ಸಮಯ ನೀಡಿದ್ದು, ಆ ವೇಳೆಗೆ ರಾಮಲಿಂಗಾ ರೆಡ್ಡಿ ಅವರು ಸ್ಪೀಕರ್ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ.

Dissident MLA Ramalinga Reddy will attend assembly session today

ಸ್ಪೀಕರ್ ಅವರು ವೈಯಕ್ತಿಕ ವಿಚಾರಣೆ ನಡೆಸಿ ರಾಜೀನಾಮೆಯು ಒತ್ತಡದಿಂದ ನೀಡಿಲ್ಲವೆಂದು ಖಾತ್ರಿಯಾದ ಮೇಲೆ ರಾಜೀನಾಮೆಯನ್ನು ಅಂಗೀಕಾರ ಮಾಡುತ್ತಾರೆ. ಅಲ್ಲಿಯವರೆಗೆ ರಾಮಲಿಂಗಾ ರೆಡ್ಡಿ ಅವರು ವಿಧಾನಸಭೆ ಸದಸ್ಯರಾಗಿಯೇ ಮುಂದುವರೆಯಲಿದ್ದಾರೆ.

ರಾಜೀನಾಮೆ ಹಿಂಪಡೆವ ಬಗ್ಗೆ ಯೋಚಿಸಬೇಕು: ರಾಮಲಿಂಗಾ ರೆಡ್ಡಿರಾಜೀನಾಮೆ ಹಿಂಪಡೆವ ಬಗ್ಗೆ ಯೋಚಿಸಬೇಕು: ರಾಮಲಿಂಗಾ ರೆಡ್ಡಿ

ನಿನ್ನೆ ರಾತ್ರಿ ರಾಮಲಿಂಗಾ ರೆಡ್ಡಿ ಅವರನ್ನು ಸಿದ್ದರಾಮಯ್ಯ, ಪರಮೇಶ್ವರ್, ಖರ್ಗೆ, ಈಶ್ವರ್ ಖಂಡ್ರೆ, ದಿನೇಶ್ ಗುಂಡೂರಾವ್ ಇನ್ನೂ ಹಲವು ಪ್ರಮುಖ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಆದರೆ ಭೇಟಿ ಫಲಪ್ರದವಾಗಲಿಲ್ಲ ಎನ್ನಲಾಗಿದೆ.

English summary
Dissident MLA Ramalinga Reddy who already resigned to MLA post will attend assembly session today. He said my resignation not yet approved so i am still assembly member.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X