ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಈ ಪ್ರದೇಶಗಳಲ್ಲಿ ಎರಡು ದಿನ ನೀರು ಪೂರೈಕೆಯಲ್ಲಿ ವ್ಯತ್ಯಯ

|
Google Oneindia Kannada News

ಬೆಂಗಳೂರು, ಜೂನ್ 28: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಜೂನ್ 30ರಿಂದ ಜುಲೈ 1ರವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವುದಾಗಿ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಮಾಹಿತಿ ನೀಡಿದೆ.

ಟಿಕೆ ಹಳ್ಳಿ, ಹಾರೋಹಳ್ಳಿ ಹಾಗೂ ತಾತಗುಣಿ ಪಂಪಿಂಗ್ ಸ್ಟೇಷನ್‌ಗಳಲ್ಲಿ ರಿಪೇರಿ ಕಾರ್ಯ ನಡೆಯುತ್ತಿರುವುದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವುದಾಗಿ ತಿಳಿಸಿದೆ. 5.6 ಕಿ.ಮೀ ಚೈನೇಜ್‌ನಲ್ಲಿ (1950 ಮಿಲಿ ಮೀಟರ್) ನೀರು ಸೋರಿಕೆ ರಿಪೇರಿ ಹಾಗೂ ಇತರೆ ವಿದ್ಯುತ್, ತಾಂತ್ರಿಕ ಕೆಲಸಗಳ ಕಾರಣ ನೀರು ಸರಬರಾಜಿಗೆ ತೊಡಕಾಗುವುದಾಗಿ ತಿಳಿಸಿದೆ.

 Bengaluru: Disruption In Water Supply On June 30 And July 1

ನೀರು ಸರಬರಾಜು ವ್ಯತ್ಯಯವಾಗುವ ಪ್ರದೇಶಗಳು: ಶೆಟ್ಟಿಹಳ್ಳಿ, ಕಮ್ಮಗೊಂಡನಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ, ಟಿ ದಾಸರಹಳ್ಳಿ, ಎಚ್‌ಎಂಟಿ ವಾರ್ಡ್, ಪೀಣ್ಯ 2ನೇ ಹಂತ, ಮುರನೇ ಹಂತ, ನಾಲ್ಕನೇ ಹಂತ, ರಾಜಗೋಪಾಲ ನಗರ, ಗಣಪತಿ ನಗರ, ಎಂಇಐ ಕಾಲೋನಿ, ಲಕ್ಷ್ಮೀದೇವಿ ನಗರ, ಬಿಎಚ್‌ಸಿಎಸ್ ಲೇಔಟ್, ಬಿಡಿಎ ಲೇಔಟ್‌ನ ಹ್ಯಾಪಿ ವ್ಯಾಲಿ, ಉತ್ತರಹಳ್ಳಿ, ಬೆಳ್ಳಂದೂರು, ಇಬ್ಬಲೂರು, ಕೋರಮಂಗಲ 1ನೇ ಬ್ಲಾಕ್, 4ನೇ ಬ್ಲಾಕ್, 4ನೇ ಸಿ ಬ್ಲಾಕ್, ಜೆ ಬ್ಲಾಕ್, ಮಿಲಿಟರಿ ಕ್ಯಾಂಪಸ್ ಎಎಸ್‌ಸಿ ಸೆಂಟರ್, ಸಿದ್ಧಾರ್ಥ ಕಾಲೋನಿ, ವೆಂಕಟಪುರ, ಟೀಚರ್ಸ್ ಕಾಲೋನಿ, ಜಕ್ಕಸಂದ್ರ, ಜಕ್ಕಸಂದ್ರ ಎಕ್ಸ್‌ಟೆನ್ಷನ್, ಜಯನಗರ 4ನೇ ಟಿ ಬ್ಲಾಕ್‌ನ ಎಸ್‌ಟಿ ಬೆಡ್ ಪ್ರದೇಶ, ಅರಸು ಕಾಲೋನಿ, ತಿಲಕನಗರ, ಎನ್‌ಇಐ ಲೇಔಟ್, ಈಸ್ಟ್‌ ಎಂಡ್ ಎ ಮತ್ತಿ ಬಿ ಮುಖ್ಯ ರಸ್ತೆಗಳು, ಕೃಷ್ಣಪ್ಪ ಗಾರ್ಡನ್, ಬಿಎಚ್‌ಇಎಲ್ ಲೇಔಟ್, ಬಿಟಿಎಂ 2ನೇ ಹಂತ, ಮೈಕೋ ಲೇಔಟ್, ಎನ್ಎಸ್ ಪಾಳ್ಯ, ಗುರಪ್ಪನ ಪಾಳ್ಯ, ಸದ್ದುಗುಂಟೆಪಾಳ್ಯ, ಬಿಸ್ಮಿಲ್ಲಾ ನಗರ, ಜೆಪಿ ನಗರದ 4 ರಿಂದ 8ನೇ ಹಂತದ ಪ್ರದೇಶಗಳು, ಪುಟ್ಟೇನಹಳ್ಳಿ, ಆರ್‌ಬಿಐ ಲೇಔಟ್, ಪಾಂಡುರಂಗ ನಗರ, ಅರಕೆರೆ, ದೊರೆಸಾನಿ ಪಾಳ್ಯ, ಕೊತ್ತನೂರು ದಿಣ್ಣೆ, ವೆಂಕಟಾದ್ರಿ ಲೇಔಟ್, ಚುಂಚಘಟ್ಟ, ಕೋಣನಕುಂಟೆ, ಎಸ್‌ಬಿಎಂ ಲೇಔಟ್, ಸುಪ್ರೀಂ ರಸಸಿಡೆನ್ಸಿ ಲೇಔಟ್, ಲೇಕ್ ಸಿಟಿ, ನಡಮ್ಮ ಲೇಔಟ್, ರೋಟರಿ ನಗರ, ಕೋಡಿಚಿಕ್ಕನ ಹಳ್ಳಿ ವಿಲೇಜ್‌ನಲ್ಲಿ ನೀರಿನ ವ್ಯತ್ಯಯವಾಗಲಿದೆ.

ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯ

Recommended Video

ಸಿಗಂದೂರು ಲಾಂಚಿನಿಂದ ಹಾರಿದ ಮಹಿಳೆ , ಆಮೇಲೆ ನಡೆದಿದ್ದೇನು | Oneindia Kannada

ಎಚ್‌ಎಸ್‌ಆರ್ ಲೇಔಟ್‌ನ 1-7ನೇ ವಿಭಾಗಗಳು, ಅಗರಹಳ್ಳಿ, ಮಂಗಮ್ಮನ ಪಾಳ್ಯ, ಮದೀನಾ ನಗರ, ಐಟಿಐ ಲೇಔಟ್, ಹೊಸ ಲೇಔಟ್ ಪಾಳ್ಯ, ಬಂಡೆ ಪಾಳ್ಯ, ಚಂದ್ರಾ ಲೇಔಟ್, ಬಿಇಎಂಎಲ್ ಲೇಟೌಟ್ 1-5ನೇ ಹಂತ, ನಾಗರಬಾವಿ, ಅನ್ನಪೂರ್ಣೇಶ್ವರಿ ನಗರ, ವಿಶ್ವೇಶ್ವರಯ್ಯ ಲೇಔಟ್‌ನ ಎಲ್ಲಾ ಹಂತಗಳು, ಬಿಇಎಲ್ ಲೇಔಟ್‌ನ ಎಲ್ಲಾ ಹಂತಗಳು, ಮಲ್ಲತ್ತಹಳ್ಳಿ, ಉಲ್ಲಾಳ, ಡಿ ಗ್ರೂಪ್ ಲೇಔಟ್, ರೇಲ್ವೆ ಲೇಔಟ್, ಬ್ಯಾಡರಹಳ್ಳಿ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ 6ನೇ ಬ್ಲಾಕ್, ಬಸವೇಶ್ವರ ನಗರ, ಮಂಜುನಾಥ ನಗರ, ನಂದಿನಿ ಲೇಔಟ್, ಗೊರಗುಂಟೆ ಪಾಳ್ಯ, ಶಂಕರ ನಗರ, ಪ್ರಕಾಶ್ ನಗರ, ಕುರುಬರಹಳ್ಳಿ, ಶಂಕರಮಠ, ಕಮಲಾ ನಗರ, ಕಾಮಾಕ್ಷಿ ಪಾಳ್ಯ, ಬಿಇಎಂಎಲ್ ಲೇಔಟ್, ಕೆಎಚ್‌ಬಿ ಕಾಲೋನಿ, ಶಿವನಗರ, ಅಗ್ರಹಾರ ದಾಸರಹಳ್ಳಿ, ಪಾಪಯ್ಯ ಗಾರ್ಡನ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕೂಡ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವುದಾಗಿ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ತಿಳಿಸಿದೆ.

English summary
Bengaluru will be facing disruptions in water supply on June 30 and July 1. The disruptions will be caused due to repair works at the TK Halli, Harohalli and Tataguni pumping stations
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X