• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯ

|
Google Oneindia Kannada News

ಬೆಂಗಳೂರು, ಜೂನ್ 23: ಬೆಂಗಳೂರಿನಲ್ಲಿ ಜೂನ್ 23,24 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಜಲ ಮಂಡಳಿ ಮಾಹಿತಿ ನೀಡಿದೆ.

ಪಿಳ್ಳಪ್ಪನಕಟ್ಟೆ ಬಳಿ ರಾಜಕಾಲುವೆಯಲ್ಲಿ 900 mm ಪೈಪ್ ಅಳವಡಿಕೆ ಇರುವ ಕಾರಣ ಎರಡು ದಿನಗಳ ಕಾಲ ಬೆಂಗಳೂರಿನ ಈ ಪ್ರದೇಶಗಳಲ್ಲಿ ನೀರು ಸರಬರಾಜಿರುವುದಿಲ್ಲ ಎಂದು ಹೇಳಲಾಗಿದೆ.

ಜಲ ಮಂಡಳಿ ನೀಡಿರುವ ಪತ್ರಿಕಾ ಹೇಳಿಕೆ ಪ್ರಕಾರ, ನಾಗಾಪುರ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಮಹಾಲಕ್ಷ್ಮೀ ಪುರಂ, ಮಂಜುನಾಥನಗರ, ಶಿವನಗರ, ಮಹಾಗಣಪತಿ ನಗರ, ಶಂಕರಮಠ, ತಿಮ್ಮಯ್ಯ ರಸ್ತೆ, ಬಸವೇಶ್ವರನಗರ, ಎಚ್‌ಬಿಸಿಎಸ್, ಶಕ್ತಿ ಗಣಪತಿ ನಗರ, ಕಮಲ ನಗರ, ಕಾಮಾಕ್ಷಿ ಪಾಳ್ಯ, ಶಾರದಾ ಕಾಲೊನಿ, ಬಿಇಎಂಎಲ್ ಲೇಔಟ್, ವೃಷಭಾವತಿ ನಗರ, ಸಣ್ಣಕ್ಕಿ ಬಯಲು, ವೈಯಾಲಿಕಾವಲ್, ಕರ್ನಾಟಕ ಲೇಔಟ್, ಕಿರ್ಲೋಸ್ಕರ್ ಕಾಲೊನಿ, ಮೀನಾಕ್ಷಿನಗರದಲ್ಲಿ ನೀರಿನ ಸರಬರಾಜು ಇರುವುದಿಲ್ಲ.

ಎಂವಿ ಮೊದಲಿನಿಂದ 9ನೇ ಬ್ಲಾಕ್ ವರೆಗೆ, ಬಿಇಎಲ್ ಮೊದಲು ಹಾಗೂ ಎರಡನೇ ಹಂತ, ಬಾಲಾಜಿ ಲೇಔಟ್, ಮಲ್ಲತ್ತಹಳ್ಳಿ, ರೈಲ್ವೆ ಲೇಔಟ್ ಎರಡನೇ ಹಂತ, ಬಿಟಿಎಸ್ ಲೇಔಟ್, ಅಂಜನನಗರ, ಕೆಇಬಿ ರಸ್ತೆ, ಅಗ್ರಹಾರ ದಾಸರಹಳ್ಳಿ, ಕೆಎಚ್‌ಬಿ ಎರಡನೇ ಹಂತ, ಸರಸ್ವತಿಪುರ, ಜೆಸಿ ನಗರ, ಗೆಳೆಯರ ಬಳಗ, ಕುರುಬರಹಳ್ಳಿ, ಸುಬ್ರಹ್ಮಣ್ಯನಗರ, ರಾಜಾಜಿನಗರ 1ರಿಂದ 6ನೇ ಹಂತ, 1 ನೇ ಎನ್‌ ಬ್ಲಾಕ್, ಜೈ ಮಾರುತಿನಗರ, ಕಂಠೀರವನಗರ, ನಂದಿನಿ ಲೇಔಟ್, ನಂಜುಂಡೇಶ್ವರ ನಗರ, ಶ್ರೀಕಂಠೇಶ್ವರನಗರ ನಗರ, ಕೃಷ್ಣಾನಂದನಗರ, ಕೆಎಚ್‌ಬಿ ಕಾಲೊನಿ, ವಿದ್ಯಾರಣ್ಯನಗರ, ಎನ್‌ಆರ್ ಗಾರ್ಡನ್, ಚೆಲುವಪ್ಪ ಗಾರ್ಡನ್, ಶಂಕರಪ್ಪ ಗಾರ್ಡನ್, ಮಾಗಡಿ ರಸ್ತೆ ಬಲಭಾಗ, ಭುವನೇಶ್ವರಿನಗರ, ಪರಿಮಳ ನಗರ, ಕೆಪಿ ಅಗ್ರಹಾರ, ರಜನಿ ನಗರ ಆರನೇ ಬ್ಲಾಕ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರಿನ ವ್ಯತ್ಯಯ ಉಂಟಾಗಲಿದೆ.

   ಎಚ್ಚರಿಕೆ! ಭಾರತದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ವೈರಸ್:ರಾಜ್ಯದಲ್ಲಿ 2 ಕೇಸ್ ಪತ್ತೆ | Oneindia Kannada
   English summary
   In views of linking of a 900 mm pipe near pillappanna katte rajakaluve on June 23 and 24, there will be disruption in water supply on these days in the following areas.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X