ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನರ್ಹ ಶಾಸಕ ಸುಧಾಕರ್‌ಗೆ ಮತ್ತೊಂದು ಆಘಾತ

|
Google Oneindia Kannada News

Recommended Video

ಅನರ್ಹ ಶಾಸಕ ಸುಧಾಕರ್ ಗೆ ಎಲ್ಲವೂ ಮಿಸ್ ಆಯ್ತು..? | MLA Dr Sudhakar | Oneindia Kannada

ಬೆಂಗಳೂರು, ಸೆಪ್ಟೆಂಬರ್ 07: ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾಗಿದ್ದ ಈಗ ಅನರ್ಹರಾಗಿರುವ ಸುಧಾಕರ್ ಗೆ ಮತ್ತೊಂದು ಆಘಾತ ಎದುರಾಗಿದೆ. ಅವರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಕುತ್ತು ಬಂದಿದೆ.

ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆ ಆಗಿದ್ದ ಸುಧಾಕರ್ ಆ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ಉರುಳಿಸಲು ಬಿಜೆಪಿಗೆ ನೆರವಾಗಿದ್ದರು. ಆ ನಂತರ ಸ್ಪೀಕರ್ ಆದೇಶದಂತೆ ಅನರ್ಹರೂ ಆದರು. ಆದರೆ ಮೈತ್ರಿ ಸರ್ಕಾರದ ಅವಧಿಯಲ್ಲಿ ಅವರಿಗೆ ನೀಡಲಾಗಿದ್ದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಹಾಗೆಯೇ ಮುಂದುವರೆದಿತ್ತು, ಆದರೆ ಈಗ ಅದಕ್ಕೂ ಕಂಟಕ ಎದುರಾಗಿದೆ.

ಅನರ್ಹ ಶಾಸಕರಿಗೆ ತುಸು ನೆಮ್ಮದಿ ನೀಡಿದ ಸುಪ್ರೀಂಕೋರ್ಟ್ಅನರ್ಹ ಶಾಸಕರಿಗೆ ತುಸು ನೆಮ್ಮದಿ ನೀಡಿದ ಸುಪ್ರೀಂಕೋರ್ಟ್

ಸುಧಾಕರ್ ಅವರನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಮೈತ್ರಿ ಸರ್ಕಾರದ ಅವಧಿಯಲ್ಲಿ ನೇಮಿಸಲಾಗಿತ್ತು. ಆದರೆ ಆ ನೇಮಕ ಅಕ್ರಮ, ನಿಯಮ ಉಲ್ಲಂಘನೆ ಎಂದು ಆಕ್ಷೇಪ ಎತ್ತಿದ್ದರು. ಆಕ್ಷೇಪಕ್ಕೆ ಹೈಕೋರ್ಟ್ ಸಹ ದನಿಗೂಡಿಸಿದೆ.

ನೇಮಕಕ್ಕೆ ಮೊದಲೇ ಹೈಕೋರ್ಟ್‌ನಲ್ಲಿ ಅರ್ಜಿ ಇತ್ತು

ನೇಮಕಕ್ಕೆ ಮೊದಲೇ ಹೈಕೋರ್ಟ್‌ನಲ್ಲಿ ಅರ್ಜಿ ಇತ್ತು

ಸುಧಾಕರ್ ಅವರನ್ನು ಕೆಎಸ್‌ಪಿಸಿಬಿ (ಮಾಲಿನ್ಯ ನಿಯಂತ್ರಣ ಮಂಡಳಿ) ಅಧ್ಯಕ್ಷರಾಗಿ ನೇಮಕ ಮಾಡುವ ಮೊದಲೇ ಹೈಕೋರ್ಟ್‌ನಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ಇನ್ನೂ ವಿಚಾರಣೆಯಲ್ಲಿರುವಾಗಲೇ ಸುಧಾಕರ್ ಅವರನ್ನು ನೇಮಕ ಮಾಡಲಾಗಿತ್ತು. ದಿನನ್ನು ಪ್ರಶ್ನಿಸಿ ಮತ್ತೊಂದು ಅರ್ಜಿಯನ್ನು ಹೈಕೋರ್ಟ್‌ನಲ್ಲಿ ಹೂಡಲಾಗಿತ್ತು.

ಸುಧಾಕರ್ ನೇಮಕ ನಿಯಮ ಬಾಹಿರ: ಹೈಕೋರ್ಟ್‌

ಸುಧಾಕರ್ ನೇಮಕ ನಿಯಮ ಬಾಹಿರ: ಹೈಕೋರ್ಟ್‌

ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್‌, ಸುಧಾಕರ್ ಅವರನ್ನು ಕೆಎಸ್‌ಪಿಸಿಬಿಗೆ ನೇಮಕ ಮಾಡಿರುವುದು ಅಕ್ರಮವಲ್ಲವೇ, ಈ ನೇಮಕದಲ್ಲಿ ನಿಯಮಗಳನ್ನು ಗಾಳಿ ತೂರಲಾಗಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಅಧ್ಯಕ್ಷ ಸ್ಥಾನವನ್ನು ರದ್ದು ಮಾಡಲು ಲಿಖಿತ ಆದೇಶ ಇನ್ನೂ ಹೊರಟಿಲ್ಲ, ಸನಿಹದಲ್ಲೇ ಆದೇಶ ಹೊರ ಬೀಳುವ ಸಂಭವ ಇದೆ.

ನನ್ನನ್ನು ಕೆಣಕಿದರೆ ಹುತ್ತದಲ್ಲಿರುವ ನಾಗರಹಾವನ್ನು ಕೆಣಕಿದಂತೆ, ಎಂಟಿಬಿನನ್ನನ್ನು ಕೆಣಕಿದರೆ ಹುತ್ತದಲ್ಲಿರುವ ನಾಗರಹಾವನ್ನು ಕೆಣಕಿದಂತೆ, ಎಂಟಿಬಿ

ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕಳೆದುಕೊಳ್ಳುವ ಭೀತಿ

ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕಳೆದುಕೊಳ್ಳುವ ಭೀತಿ

ಹಾಗೇನಾದರೂ ಆದಲ್ಲಿ, ಈಗಾಗಲೇ ಶಾಸಕ ಸ್ಥಾನ ಕಳೆದುಕೊಂಡಿರುವ ಸುಧಾಕರ್, ಇರುವ ಒಂದು ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನೂ ಕಳೆದುಕೊಳ್ಳಲಿದ್ದಾರೆ.

ಅನರ್ಹ ಶಾಸಕರು ಬಚಾವಾಗಲು ಹೊಸ ಪ್ಲ್ಯಾನ್ಅನರ್ಹ ಶಾಸಕರು ಬಚಾವಾಗಲು ಹೊಸ ಪ್ಲ್ಯಾನ್

ಅಧ್ಯಕ್ಷ ಸ್ಥಾನದಲ್ಲೇ ಮುಂದುವರೆದಿದ್ದ ಸುಧಾಕರ್

ಅಧ್ಯಕ್ಷ ಸ್ಥಾನದಲ್ಲೇ ಮುಂದುವರೆದಿದ್ದ ಸುಧಾಕರ್

ಸುಧಾಕರ್ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಆಯ್ಕೆ ಆಗಿದ್ದರು. ಆ ನಂತರ ಸಚಿವ ಸ್ಥಾನ ಸಿಗದ ಕಾರಣ ಅಸಮಾಧಾನಗೊಂಡಿದ್ದರು. ಕೊನೆಗೆ ಅವರಿಗೆ ನಿಗಮ ಮಂಡಳಿ ಸ್ಥಾನ ನೀಡಲಾಯಿತು. ಆದರೂ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದರು. ಸ್ಪೀಕರ್ ಅವರು, ಸುಧಾಕರ್ ಅವರನ್ನು ಅನರ್ಹಗೊಳಿಸಿದರು. ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೇಲೆ ಉಳಿದೆಲ್ಲಾ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ರದ್ದು ಮಾಡಿದರೆ, ಆದರೆ ಸುಧಾಕರ್ ಅವರ ಸ್ಥಾನ ರದ್ದು ಮಾಡಲಿಲ್ಲ.

English summary
Disqualified MLA Dr Sudhakar may loose his KSPCB board president post. High court said, appointing president to KSPCB is against the rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X