ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ಆಸ್ತಿಗಳಿಕೆ ಆರೋಪ; ರೋಷನ್ ಬೇಗ್ ವಿರುದ್ಧ ತನಿಖೆಗೆ ಸೂಚನೆ

|
Google Oneindia Kannada News

08:51:48ಬೆಂಗಳೂರು, ನವೆಂಬರ್ 05 : ಮಾಜಿ ಸಚಿವ ರೋಷನ್ ಬೇಗ್, ಕುಟುಂಬ ಸದಸ್ಯರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ಇದರಿಂದಾಗಿ ರೋಷನ್ ಬೇಗ್ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣದ ವಿಚಾರಣೆ ಮುಂದುವರೆಯಲಿದೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂಬ ಪ್ರಕರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ವಿಚಾರಣೆ ಮುಂದುವರೆಸದಂತೆ ಕೋರಿ ರೋಷನ್ ಬೇಗ್ ಮತ್ತು ಕುಟುಂಬ ಸದಸ್ಯರು ಹೈಕೋರ್ಟ್ ಮೊರೆ ಹೋಗಿದ್ದರು.

ಅಕ್ರಮ ಆಸ್ತಿಗಳಿಕೆ ಪ್ರಕರಣ; ಯಡಿಯೂರಪ್ಪಗೆ ನೆಮ್ಮದಿ!ಅಕ್ರಮ ಆಸ್ತಿಗಳಿಕೆ ಪ್ರಕರಣ; ಯಡಿಯೂರಪ್ಪಗೆ ನೆಮ್ಮದಿ!

ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹ ಅವರಿದ್ದ ಏಕಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿತು. ರೋಷನ್ ಬೇಗ್, ಅವರ ಪತ್ನಿ ಸಬೀಹಾ ರೋಷನ್, ಪುತ್ರ ರುಮಾನ್ ಬೇಗ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದರು.

ಈ ಅಭ್ಯರ್ಥಿಯ ಆಸ್ತಿ 5 ವರ್ಷದಲ್ಲಿ ಶೇ 144ರಷ್ಟು ಹೆಚ್ಚಳಈ ಅಭ್ಯರ್ಥಿಯ ಆಸ್ತಿ 5 ವರ್ಷದಲ್ಲಿ ಶೇ 144ರಷ್ಟು ಹೆಚ್ಚಳ

Disproportionate Assets Case Probe Against Roshan Baig

ರೋಷನ್ ಬೇಗ್ ಮಾಜಿ ಶಾಸಕರು ಆಗಿರುವ ಕಾರಣ ಅವರ ವಿರುದ್ಧದ ವಿಚಾರಣೆಯನ್ನು ಮುಂದುವರೆಸಲು ಸಕ್ಷಮ ಪ್ರಾಧಿಕಾರದಿಂದ ಅನುಮತಿಯನ್ನು ಪಡೆಯುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಇದರಿಂದಾಗಿ ವಿಚಾರಣೆ ಮುಂದುವರೆಯಲಿದೆ.

ಬೆಂಗಳೂರು; ಗಿರಿಧಾಮ ಲೇಔಟ್ ಆಸ್ತಿ ವಿವಾದ ಏನು? ಬೆಂಗಳೂರು; ಗಿರಿಧಾಮ ಲೇಔಟ್ ಆಸ್ತಿ ವಿವಾದ ಏನು?

ರೋಷನ್ ಬೇಗ್ ಮತ್ತು ಕುಟುಂಬ ಸದಸ್ಯರ ವಿರುದ್ಧ ಸಲ್ಲಿಕೆಯಾಗಿದ್ದ ಖಾಸಗಿ ದೂರಿನ ಆಧಾರದ ಮೇಲೆ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶ ನೀಡಲಾಗಿತ್ತು. 2012ರ ದೂರಿನ ಆಧಾರದ ಮೇಲೆ ತನಿಖೆ ಮಾಡಿ 2014ರಲ್ಲಿ 'ಬಿ' ರಿಪೋರ್ಟ್ ಸಲ್ಲಿಕೆ ಮಾಡಿದ್ದರು.

2018ರಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 'ಬಿ' ರಿಪೋರ್ಟ್ ತಿರಸ್ಕಾರ ಮಾಡಿತ್ತು. ಸಬೀಹಾ ರೋಷನ್, ರುಮಾನ್ ಬೇಗ್ ವಿರುದ್ಧ ತನಿಖೆ ಮುಂದುವರೆದಿತ್ತು. ಆಗ ರೋಷನ್ ಬೇಗ್ ಶಾಸಕರಾಗಿದ್ದ ಕಾರಣ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯಬೇಕಿತ್ತು.

Recommended Video

Policeರಿಗೆ Justice ಸಿಗಲ್ಲ !! ಇನ್ನು ನಿಮ್ಗೆ!! | Oneindia Kannada

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕರಣ ಮುಂದುವರೆಸಲು ಆದೇಶ ನೀಡಿರುವುದನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಈಗ ನ್ಯಾಯಾಲಯ ಅರ್ಜಿಯನ್ನು ತಿರಸ್ಕಾರ ಮಾಡಿದೆ.

English summary
Karnataka high court approved for the probe of disproportionate assets case against former minister Roshan Baig.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X