ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೀಪಾವಳಿ ಸಂಭ್ರಮ; ಕಣ್ಣಿನ ಸುರಕ್ಷತೆ ಬಗ್ಗೆ ಗಮನ ಹರಿಸಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 28 : ದೀಪಾವಳಿ ಸಂದರ್ಭದಲ್ಲಿ ಕಣ್ಣಿನ ಸುರಕ್ಷತೆ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದು ನಾರಾಯಣ ನೇತ್ರಾಲಯ ಮನವಿ ಮಾಡಿದೆ. ಮಕ್ಕಳು ಪಟಾಕಿ ಸಿಡಿಸುವಾಗ ಹಿರಿಯರು ಜೊತೆಯಲ್ಲಿ ಇರುವಂತೆ ಸೂಚಿಸಿದೆ.

ಕಳೆದ ವರ್ಷದ ದೀಪಾವಳಿ ಹಬ್ಬದಲ್ಲಿ ನಾರಾಯಣ ನೇತ್ರಾಲಯ ಶೇ 40ರಷ್ಟು ಪಟಾಕಿಯಿಂದ ಕಣ್ಣಿಗೆ ಗಾಯಗೊಂಡ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಕಣ್ಣು ಸೂಕ್ಷ್ಮವಾದ ಅಂಗವಾಗಿದ್ದು, ಅದಕ್ಕೆ ಸಣ್ಣ ಪೆಟ್ಟು ಬಿದ್ದರೂ ಕೂಡಾ ಗಂಭೀರ ಹಾನಿಯಾಗುತ್ತದೆ ಎಂದು ಹೇಳಿದೆ.

ಮೇಲುಕೋಟೆಯಲ್ಲಿ ಇಂದಿಗೂ 'ಕತ್ತಲು ದೀಪಾವಳಿ': ಇದಾ ಕಾರಣ? ಮೇಲುಕೋಟೆಯಲ್ಲಿ ಇಂದಿಗೂ 'ಕತ್ತಲು ದೀಪಾವಳಿ': ಇದಾ ಕಾರಣ?

ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಿಮ್ಮ ಕಣ್ಣಿನ ಸುರಕ್ಷತೆ ಬಗ್ಗೆ ಎಚ್ಚರ ವಹಿಸುವುದು ಬಹುಮುಖ್ಯ ಎಂದು ತಿಳಿಸಿದೆ. ಪಟಾಕಿ ಹಚ್ಚುವ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ನೇತ್ರಾಲಯ ಪಟ್ಟಿ ಮಾಡಿದೆ.

ದೀಪಾವಳಿ; ಪಟಾಕಿ ಮಾರಾಟ ಮಾಡುವವರಿಗೆ ಖಡಕ್ ಸೂಚನೆ ದೀಪಾವಳಿ; ಪಟಾಕಿ ಮಾರಾಟ ಮಾಡುವವರಿಗೆ ಖಡಕ್ ಸೂಚನೆ

Directions To People For Bursting Crackers

ಉಡುಪಿ ಕೃಷ್ಣ ಮಠದಲ್ಲಿ ದೀಪಾವಳಿ ಸಡಗರ; ಗಂಗಾಪೂಜೆ, ತೈಲಾಭ್ಯಂಜನ ಉಡುಪಿ ಕೃಷ್ಣ ಮಠದಲ್ಲಿ ದೀಪಾವಳಿ ಸಡಗರ; ಗಂಗಾಪೂಜೆ, ತೈಲಾಭ್ಯಂಜನ

* ದೃಡಿಕರಿಸಲಾರದ ಹಾಗೂ ಐಎಸ್‌ಓದಿಂದ ಅನುಮೋದನೆ ಪಡೆಯದ ಪಟಾಕಿಗಳನ್ನು ಸಿಡಿಸಬೇಡಿ
* ಮಕ್ಕಳು ಹಿರಿಯರ ಉಸ್ತುವಾರಿ ಇಲ್ಲದೆ ಯಾವುದೇ ಬಗೆಯ ಪಟಾಕಿಯನ್ನು ಹಚ್ಚದಂತೆ ನೋಡಿಕೊಳ್ಳಿ
* ಪಟಾಕಿ ಹಚ್ಚುವ ಸಂದರ್ಭದಲ್ಲಿ ತಪ್ಪದೇ ರಕ್ಷಣಾತ್ಮಕ ಕನ್ನಡಕವನ್ನು ಬಳಸಿರಿ
* ರಾಕೆಟ್ ಹಚ್ಚುವಾಗ ಕಲ್ಲು, ಬಾಟಲಿ, ಟಿನ್ ಬಳಕೆ ಮಾಡಬೇಡಿ
* ದೀಪ ಮತ್ತು ಮೇಣದ ಬತ್ತಿಯನ್ನು ಪಟಾಕಿಗಳಿಂದ ದೂರವಿಡಿ
* ಸಿಂಥೆಟಿಕ್ ಬಟ್ಟೆ, ಶಿರೋವಸ್ತ್ರ, ದುಪಟ್ಟಾ ಮುಂತಾದ ತೆಳುವಾದ ಉಡುಪುಗಳನ್ನು ಉಪಯೋಗಿಸಬೇಡಿ
* ಅಗ್ನಿ ಆಕಸ್ಮಿಕದ ಸಮಯದಲ್ಲಿ ಬೆಂಕಿ ಹರಡುವುದನ್ನು ತಡೆಯಲು ಮರಳು, ನೀರು ತುಂಬಿದ ಬಕೆಟ್‌ಗಳನ್ನು ಪಕ್ಕದಲ್ಲಿ ಇಟ್ಟಿರಿ.

English summary
Narayana Nethralaya issued directions to people in the time of Deepavali for bursting crackers. Narayana Nethralaya requested people to take care of eyes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X