ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನವರಿಯಿಂದ ಬೆಂಗಳೂರು-ಟೋಕಿಯೊ ನೇರ ವಿಮಾನ

|
Google Oneindia Kannada News

ಬೆಂಗಳೂರು, ನವೆಂಬರ್ 04: ಬೆಂಗಳೂರು ನಗರ ಮತ್ತು ಜಪಾನ್‌ ರಾಜಧಾನಿ ಟೋಕಿಯೊ ನಡುವಿನ ನೇರ ವಿಮಾನದಲ್ಲಿ ಸಂಚಾರ ನಡೆಸಲು 2021ರ ಜನವರಿ ತನಕ ಕಾಯಬೇಕಿದೆ. ಈ ವರ್ಷ ನೇರ ವಿಮಾನ ಆರಂಭಿಸುವುದಾಗಿ ಹೇಳಿದ್ದ ಜೆಎಎಲ್ ಅದನ್ನು ಮುಂದೂಡಿದೆ.

2020ರಲ್ಲಿ ಬೆಂಗಳೂರು-ಟೋಕಿಯೊ ನಡುವೆ ನೇರ ವಿಮಾನ ಸೇವೆ ಆರಂಭಿಸುವುದಾಗಿ ಜಪಾನ್ ಏರ್‌ ಲೈನ್ಸ್ ಘೋಷಣೆ ಮಾಡಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಈ ಯೋಜನೆಯನ್ನು 2021ರ ಜನವರಿಗೆ ಮುಂದೂಡಲಾಗಿದೆ.

ಅರಬ್ಬಿ ಸಮುದ್ರದಲ್ಲಿ ಭಾರತ-ಜಪಾನ್ ಜಂಟಿ ಸಮರಾಭ್ಯಾಸಅರಬ್ಬಿ ಸಮುದ್ರದಲ್ಲಿ ಭಾರತ-ಜಪಾನ್ ಜಂಟಿ ಸಮರಾಭ್ಯಾಸ

ಭಾರತ ಮತ್ತು ಜಪಾನ್ ಏರ್ ಬಬಲ್ ಯೋಜನೆಯ ಅನ್ವಯ ಮಾಡಿಕೊಂಡ ಒಪ್ಪಂದದಂತೆ ನವದೆಹಲಿ ಮತ್ತು ಟೋಕಿಯೊ ನಗರಗಳ ನಡುವೆ ಮುಂದಿನ ಎರಡು ತಿಂಗಳ ಕಾಲ ವಿಶೇಷ ವಿಮಾನಗಳು ಸಂಚಾರ ನಡೆಸಲಿವೆ.

ಮಂಗಳೂರು ವಿಮಾನ ನಿಲ್ದಾಣ ಅದಾನಿ ಗ್ರೂಪ್‌ಗೆ ಹಸ್ತಾಂತರ ಮಂಗಳೂರು ವಿಮಾನ ನಿಲ್ದಾಣ ಅದಾನಿ ಗ್ರೂಪ್‌ಗೆ ಹಸ್ತಾಂತರ

Direct Flight Between Bengaluru And Tokyo In 2021 January

ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಜಪಾನ್ ಏರ್ ಲೈನ್ಸ್ ತನ್ನ ಅಂತರಾಷ್ಟ್ರೀಯ ವಿಮಾನ ಸೇವೆಗಳನ್ನು 2021ರ ಜನವರಿ ಅಂತ್ಯದ ತನಕ ಮುಂದೂಡಿದೆ. ಈ ಯೋಜನೆಯಲ್ಲಿ ಬದಲಾವಣೆಯಾದರೆ ತಕ್ಷಣ ಮಾಹಿತಿ ನೀಡುವುದಾಗಿ ಭಾರತಕ್ಕೂ ತಿಳಿಸಿದೆ.

ಕರ್ನಾಟಕಕ್ಕೆ ಮತ್ತೊಂದು ಏರ್ ಪೋರ್ಟ್; ಶೀಘ್ರದಲ್ಲೇ ಸ್ಥಳ ಅಂತಿಮ ಕರ್ನಾಟಕಕ್ಕೆ ಮತ್ತೊಂದು ಏರ್ ಪೋರ್ಟ್; ಶೀಘ್ರದಲ್ಲೇ ಸ್ಥಳ ಅಂತಿಮ

ಏರ್ ಇಂಡಿಯಾ ಈಗಾಗಲೇ ದೆಹಲಿ-ಟೋಕಿಯೊ ನಡುವೆ ನವೆಂಬರ್ 2ರಿಂದ ಡಿಸೆಂಬರ್ 28 ಮತ್ತು ಟೋಕಿಯೊ ದೆಹಲಿ ನಡುವೆ ನವೆಂಬರ್ 4ರಿಂದ ಡಿಸೆಂಬರ್ 30ರ ತನಕ ವಿಶೇಷ ವಿಮಾನಗಳ ಹಾರಾಟ ನಡೆಸುವುದಾಗಿ ಹೇಳಿದೆ.

ಬೆಂಗಳೂರು-ಟೋಕಿಯೋ ಪ್ರತಿದಿನದ ನೇರ ವಿಮಾನ ಸೇವೆ ಮಾರ್ಚ್ 29ರಂದು ಆರಂಭಿಸಲು ದಿನಾಂಕ ನಿಗದಿಯಾಗಿತ್ತು. ಆದರೆ ಕೋವಿಡ್ ಲಾಕ್ ಡೌನ್ ಘೋಷಣೆ ಮಾಡಿದ ಪರಿಣಾಮ ವಿಮಾನ ಹಾರಾಟ ಸ್ಥಗಿತವಾಯಿತು.

ಜಪಾನ್ ವಿದೇಶಾಂಗ ಇಲಾಖೆ ಮಾಹಿತಿ ಪ್ರಕಾರ ಬೆಂಗಳೂರು ನಗರದಲ್ಲಿ 1,200 ರಿಂದ 1,300 ಪ್ರಜೆಗಳಿದ್ದಾರೆ. ಈ ನೇರ ವಿಮಾನದಿಂದಾಗಿ ದಕ್ಷಿಣ ಅಮೆರಿಕಾದ ನಿವಾಸಿಗಳಿಗೆ ಸಹ ಅನುಕೂಲವಾಗಲಿದೆ.

Recommended Video

Hindu ಭಾವನೆಗಳನ್ನು ಘಾಸಿಗೊಳಿಸಿದ್ರಾ Amithabh bachan | KBC | Oneindia Kannada

ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ವಿದೇಶಗಳಿಂದ ಬರುವ ವಿಮಾನಗಳಿಗೆ ಭಾರತ ನಿರ್ಬಂಧ ವಿಧಿಸಿದೆ. ವಿದೇಶದಲ್ಲಿರುವ ಭಾರತೀಯರನ್ನು ಕರೆತರಲು ವಂದೇ ಭಾರತ್ ಮಿಷನ್ ಅಡಿ ವಿಶೇಷ ವಿಮಾನ ಓಡಿಸಲಾಗುತ್ತಿದೆ.

English summary
Japan Airlines (JAL) postponed proposed direct flight between Bengaluru and Tokyo to 2021 January. Flight service scheduled to commence on March 29. But postponed due to COVID.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X