ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಡಿನ ಯುವ ಜನರನ್ನು ಆಕರ್ಷಿಸುತ್ತಿದೆ ಈ ಹೊಸ ಪಿಡುಗು!

|
Google Oneindia Kannada News

ಬೆಂಗಳೂರು, ನ. 17: ರಾಜ್ಯದ ಯುವ ಜನತೆಗೆ ತಗುಲಿಕೊಳ್ಳುತ್ತಿದೆ ಹೊಸ ಪಿಡುಗು. ಈ ಪಿಡುಗಿಗೆ ಕಾನೂನಿನ ಮಾನ್ಯತೆಯೂ ಸಿಕ್ಕಿದ್ದು ಎಗ್ಗಿಲ್ಲದೆ ಈ ಆಟ ಸಾಗಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸರ್ಕಾರದ ಗಮನ ಸೆಳೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 'game of skill, not game of luck' ಎಂದ ಆಧಾರದ ಮೇಲೆ ಜೂಜಿನ ಆಟಕ್ಕೆ ಕಾನೂನಿನ ಮಾನ್ಯತೆ ಸಿಕ್ಕಿದೆ. ಆದರೆ ನಾನು ಈ ವಾದವನ್ನು ಒಪ್ಪುವುದಿಲ್ಲ. ಹಣವನ್ನು ಕಟ್ಟಿ ಬಾಜಿ ಆಡುವುದು ಜೂಜು ಎಂಬುದು ನನ್ನ ವಾದ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ರಮ್ಮಿ, ಪೋಕರ್ ಸೇರಿ ಆನ್‌ಲೈನ್ ಗೇಮಿಂಗ್ ಎಂಬ ಜೂಜಿನ ವ್ಯಸನಕ್ಕೆ ಹಲವು ಯುವಕರು ಬಲಿಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ನಾನೂ ಕೂಡ ಹಲವು ಯುವಕರು ಈ ಆನ್‌ಲೈನ್ ಜೂಜಿನಲ್ಲಿ ವ್ಯಸ್ತರಾಗಿರುವುದನ್ನು ಗಮನಿಸಿದ್ದೇನೆ. ಎಷ್ಟೋ ಕುಟುಂಬಗಳು ಇದರಿಂದ ನಾಶವಾಗಿ ಹೋಗಿದೆ. ಹಾಗಾಗಿ ಇಂತಹ ಗೇಮ್‌ಗಳ ಮೇಲೆ ಕಡಿವಾಣ ಬೀಳಬೇಕು ಎಂದು ಆಗ್ರಹಿಸಿದ್ದಾರೆ.

dinesh gundu rao demanded rummy poker and other online gambling games be banned

ದುರಂತ ಅಂದರೆ ಈ ಜೂಜಿಗೆ ನಾಡಿದ ಯುವಕರು ಹೆಚ್ಚಾಗಿ ಆಕರ್ಷಿತರಾಗುತ್ತಿದ್ದಾರೆ. ಸರ್ಕಾರ ಈ ಗೇಮ್‌ಗಳ ಮೇಲೆ ನಿಷೇಧ ಹೇರಬೇಕು. ಸರ್ಕಾರ ಈ ಮನೆಹಾಳು ಆನ್‌ಲೈನ್‌ ಗೇಮ್‌ಗಳ ಮೇಲೆ ನಿಷೇಧ ಹೇರಲಿ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ. ಈಗಾಗಲೇ ಆಂಧ್ರಪ್ರದೇಶ ರಾಜ್ಯ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ಆನ್‌ಲೈನ್‌ನಲ್ಲಿ ಆಡಬಹುದಾದ ಈ ರಮ್ಮಿ, ಪೋಕರ್‌ ಜೂಜು ಆಟಗಳನ್ನು ನಿಷೇಧಿಸಿವೆ.

Recommended Video

ಎಷ್ಟ್ ದಿನ ಮೋಸ ಮಾಡ್ತಾರೋ ಮಾಡ್ಲಿ!! | Oneindia Kannada
dinesh gundu rao demanded rummy poker and other online gambling games be banned
English summary
There are many young people are addicted to Rummy, poker and other online gambling games. So many families are devastated by these online games. KPCC Former president Dinesh Gundurao has demanded that such games to be banned. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X