ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಧ್ಯಪ್ರದೇಶದ ಶಾಸಕರಿರುವ ರೆಸಾರ್ಟ್‌ ಎದುರು ದಿಗ್ವಿಜಯ್ ಸಿಂಗ್ ಧರಣಿ: ಬಂಧನ

|
Google Oneindia Kannada News

ಬೆಂಗಳೂರು, ಮಾರ್ಚ್ 18: ಮಧ್ಯಪ್ರದೇಶ ಸರ್ಕಾರದ ಹೈಡ್ರಾಮಾ ಕರ್ನಾಟಕದಲ್ಲಿ ಮುಂದುವರೆದಿದೆ.

ಬೆಂಗಳೂರಿನ ರೆಸಾರ್ಟ್‌ನಲ್ಲಿರುವ ಮಧ್ಯಪ್ರದೇಶದ ಕಾಂಗ್ರೆಸ್ ಶಾಕರನ್ನು ಕರೆತರಲು ಕಾಂಗ್ರೆಸ್ ಸಾಕಷ್ಟು ಪ್ರಯತ್ನ ಪಡುತ್ತಿದೆ. ಬೆಂಗಳೂರಿಗೆ ಆಗಮಿಸಿರುವ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ಮಧ್ಯಪ್ರದೇಶದ ಶಾಸಕರು ತಂಗಿರುವ ರೆಸಾರ್ಟ್ ಮುಂದೆ ಧರಣಿಗೆ ಕುಳಿತಿದ್ದಾರೆ. ದಿಗ್ವಿಜಯ್ ಸಿಂಗ್ ನಡೆಸುತ್ತಿರುವ ಧರಣಿಗೆ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಾಥ್ ನೀಡಿದ್ದಾರೆ.

ಅವರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಬರಮಾಡಿಕೊಂಡರು. ಅಲ್ಲಿ ಕೆಲ ಹೊತ್ತು ಮಾತುಕತೆ ನಡೆಸಿ ಇಂದು ಬೆಳಗ್ಗೆ ನೇರವಾಗಿ ಯಲಹಂಕದ ರಮಡ ರೆಸಾರ್ಟ್ ಬಳಿ ತೆರಳಿದರು.

ಮಧ್ಯಪ್ರದೇಶ ಹೈಡ್ರಾಮ; ಬೆಂಗಳೂರಲ್ಲೇ ಇರುವ ಕಾಂಗ್ರೆಸ್ ಶಾಸಕರು!ಮಧ್ಯಪ್ರದೇಶ ಹೈಡ್ರಾಮ; ಬೆಂಗಳೂರಲ್ಲೇ ಇರುವ ಕಾಂಗ್ರೆಸ್ ಶಾಸಕರು!

ಧರಣಿ ನಿರತ ಕಾಂಗ್ರೆಸ್ ನಾಯಕರನ್ನು ಅಲ್ಲಿಂದ ಕಳುಹಿಸಲು ಪೊಲೀಸರು ಶತಪ್ರಯತ್ನ ಮಾಡಿದರು. ಆದರೆ ನಾಯಕರು ಜಪ್ಪೆಂದರೂ ಸ್ಥಳ ಬಿಟ್ಟು ಕದಲಲು ಸಿದ್ಧರಿರಲಿಲ್ಲ. ಸ್ಥಳದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಜನರು ಸೇರಿ ಟ್ರಾಫಿಕ್ ಜಾಮ್ ಉಂಟಾಯಿತು.

21 ಮಂದಿ ಬಂಡಾಯ ಕಾಂಗ್ರೆಸ್ ಶಾಸಕರು

21 ಮಂದಿ ಬಂಡಾಯ ಕಾಂಗ್ರೆಸ್ ಶಾಸಕರು

ಮಧ್ಯ ಪ್ರದೇಶದ 21 ಜನ ಬಂಡಾಯ ಕಾಂಗ್ರೆಸ್ ಶಾಸಕರಲ್ಲಿ ಹಲವರು ಕಳೆದ ಹಲವು ದಿನಗಳಿಂದ ಬೆಂಗಳೂರಿನ ಯಲಹಂಕ ಬಳಿಯ ರಮಡ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದಾರೆ. ಕರ್ನಾಟಕದ ಬಿಜೆಪಿ ನಾಯಕರ ರಕ್ಷಣೆಯಲ್ಲಿ ಪೊಲೀಸ್ ಭದ್ರತೆಯೊಂದಿಗೆ ಅವರನ್ನು ಕೂಡಿಹಾಕಲಾಗಿದೆ ಎಂದು ಕಾಂಗ್ರೆಸ್ ನಾಯಕರು ಇಷ್ಟು ದಿನ ಆರೋಪಿಸುತ್ತಲೇ ಬಂದಿದ್ದರು.

ಮಧ್ಯಪ್ರದೇಶ ಸರ್ಕಾರದ ಬಿಕ್ಕಟ್ಟು ಹಾಗೆಯೇ ಇದೆ

ಮಧ್ಯಪ್ರದೇಶ ಸರ್ಕಾರದ ಬಿಕ್ಕಟ್ಟು ಹಾಗೆಯೇ ಇದೆ

ಮಧ್ಯ ಪ್ರದೇಶದ ಸರ್ಕಾರದ ಬಿಕ್ಕಟ್ಟು ಮುಂದುವರಿದೇ ಇದೆ. ಇದಕ್ಕೆ ಇತಿಶ್ರೀ ಹಾಡಿ ಬಂಡಾಯ ಶಾಸಕರ ಮನವೊಲಿಸಿ ಅಲ್ಲಿಗೆ ವಾಪಸ್ ಕರೆದುಕೊಂಡು ಹೋಗಬೇಕೆಂದು ಕಳೆದ ತಡರಾತ್ರಿ ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಬೆಂಗಳೂರಿಗೆ ಬಂದಿದ್ದಾರೆ.

ಜನರಿಗೆ ಸಂಚಾರ ದಟ್ಟಣೆ ಬಿಸಿ

ಜನರಿಗೆ ಸಂಚಾರ ದಟ್ಟಣೆ ಬಿಸಿ

ಬೆಳ್ಳಂಬೆಳಗ್ಗೆ ಆ ಹಾದಿಯಲ್ಲಿ ಓಡಾಡುವ ಜನರಿಗೆ ಸಂಚಾರ ದಟ್ಟಣೆ ಬಿಸಿ ತಟ್ಟಿತು. ಪೊಲೀಸರು ಕಾಂಗ್ರೆಸ್ ನಾಯಕರನ್ನು ಬಲವಂತವಾಗಿ ಪೊಲೀಸ್ ವಾಹನದಲ್ಲಿ ಕೂರಿಸಿ ಅಮೃತಹಳ್ಳಿ ಪೊಲೀಸ್ ಠಾಣೆಗೆ ಕರೆದೊಯ್ದರು. ಪೊಲೀಸರು ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ರಮಾಡಾ ರೆಸಾರ್ಟ್‌ ಮುಂದೆ ದಿಗ್ವಿಜಯ್ ಸಿಂಗ್ ಧರಣಿ

ರಮಾಡಾ ರೆಸಾರ್ಟ್‌ ಮುಂದೆ ದಿಗ್ವಿಜಯ್ ಸಿಂಗ್ ಧರಣಿ

ಬೆಂಗಳೂರು ಹೊರವಲಯದಲ್ಲಿರುವ ರಮಾಡ ರೆಸಾರ್ಟ್ ಮುಂದೆ ಹೈ ಡ್ರಾಮಾ ನಡೆಯುತ್ತಿದೆ. ನಮ್ಮ ಶಾಸಕರನ್ನು ಬಲವಂತವಾಗಿ ಇರಿಸಲಾಗಿದೆ.

ಅವರ ಭೇಟಿಗೆ ಅವಕಾಶ ಕಲ್ಪಿಸಬೇಕೆಂದು ದಿಗ್ವಿಜಯ್ ಸಿಂಗ್ ಪಟ್ಟು ಹಿಡಿದು ರೆಸಾರ್ಟ್ ಮುಂದಿನ ರಸ್ತೆಯಲ್ಲಿ ಕುಳಿತು ಧರಣಿಗೆ ಮುಂದಾಗಿದ್ದಾರೆ.

English summary
Madhya Pradesh Congress leader Digvijaya Singh, who resorted to a sit-in dharna in Bengaluru after the city police refused his meeting with the 21 rebel MLAs from Madhya Pradesh, has been taken into preventive custody.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X