ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಜಿಟಲ್ ಇಂಡಿಯಾ ನಮ್ಮ ಜೀವನದ ಭಾಗವಾಗಿ ಬದಲಾಗಿದೆ, ಆಡಳಿತದ ಮಾದರಿಯಾಗಿದೆ: ನರೇಂದ್ರ ಮೋದಿ

|
Google Oneindia Kannada News

ನವದೆಹಲಿ, ನವೆಂಬರ್ 19: ಭಾರತದಲ್ಲಿ ಡಿಜಿಟಲ್ ಇಂಡಿಯಾದ ಕ್ರಾಂತಿಯಿಂದಾಗಿ ನಮ್ಮ ಜೀವನದ ಭಾಗವಾಗಿ ಬದಲಾವಣೆಯಾಗಿದ್ದು, ಭೀಮ್ ಯುಪಿಐ ಸೇರಿದಂತೆ ಪಾವತಿ ಆ್ಯಪ್‌ಗಳು ಅದಕ್ಕೆ ಒಂದು ಉದಾಹರಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

'ಬೆಂಗಳೂರು ಟೆಕ್ ಸಮ್ಮಿಟ್-2020'ನ್ನು ಡಿಜಿಟಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಇಂದು ನಾವು ಮಾಹಿತಿ ಯುಗದ ಮಧ್ಯಭಾಗದಲ್ಲಿದ್ದೇವೆ. ಈ ಯುಗದಲ್ಲಿ ಯಾರು ಮೊದಲು ಹೆಜ್ಜೆಯಿಡುತ್ತಾರೆ ಎಂಬುದು ಮುಖ್ಯವಲ್ಲ. ಯಾರು ಉತ್ತಮವಾಗಿ ಮುಂದಡಿ ಇರುತ್ತಾರೆ ಎಂಬುದು ಮುಖ್ಯ ಎಂದಿದ್ದಾರೆ.

ಮಾಹಿತಿ ಯುಗದಲ್ಲಿನ ಬದಲಾವಣೆ ಕೈಗಾರಿಕಾ ಯುಗಕ್ಕಿಂತಲೂ ಕ್ಷಿಪ್ರ: ಮೋದಿಮಾಹಿತಿ ಯುಗದಲ್ಲಿನ ಬದಲಾವಣೆ ಕೈಗಾರಿಕಾ ಯುಗಕ್ಕಿಂತಲೂ ಕ್ಷಿಪ್ರ: ಮೋದಿ

ವರ್ಕ್‌ ಫ್ರಮ್ ಹೋಮ್ ಕುರಿತು ಮಾತನಾಡಿದ ಪ್ರಧಾನಿ, ಟೆಕ್ನಾಲಜಿ ಎಷ್ಟರ ಮಟ್ಟಿಗೆ ಸಹಕಾರಿ ಎಂಬುದಕ್ಕೆ ಉದಾಹರಣೆಯಾಗಿದೆ ಎಂದಿದ್ದಾರೆ. ಕುಳಿತಲ್ಲಿಯೇ ನಾನು ವಿಶ್ವದ ಬುದ್ದಿಶಾಲಿ ಟೆಕ್‌ ಜನರನ್ನು ಭೇಟಿಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಟೆಕ್‌ ಸಲಕರಣೆಗಳು ಜನರಿಗೆ ಮತ್ತಷ್ಟು ಅನುಕೂಲವನ್ನುಂಟು ಮಾಡಲಿವೆ.

 Digital India Has Successfully Created A Market And Tech Solutions: Narendra Modi

ಕೈಗಾರಿಕಾ ಯುಗದಲ್ಲಿ ವಿಸ್ತರಣೆ ಗಡಿ ಸೀಮಿತವಾಗಿತ್ತು. ಆದರೆ ಮಾಹಿತಿ ಯುಗವು ಗಡಿಯನ್ನೂ ಮೀರಿದ್ದು, ಪ್ರತಿಯೊಬ್ಬರಿಗೂ ತಲುಪುವಂತೆ ಮಾಡುತ್ತಿದೆ. ನಾವು ಬುದ್ದಿಶಾಲಿ ಜನರನ್ನು ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ತಲುಪಲಿದ್ದೇವೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೈಬರ್ ಭದ್ರತಾ ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ದೇಶದ ಯುವಜನತೆ ಪ್ರಮುಖ ಪಾತ್ರ ವಹಿಸುತ್ತಾರೆ. ಈ ವಿಷಯದಲ್ಲಿ ಯುವಜನತೆಯ ಸಾಮರ್ಥ್ಯ, ಪ್ರತಿಭೆ, ಅವರಿಗೆ ಸಿಗುವ ಅವಕಾಶಕ್ಕೆ ಕೊನೆಯೇ ಇಲ್ಲ, ಅಸಾಧಾರಣವಾದ ಯುವಶಕ್ತಿಯನ್ನು ನಾವು ಬಳಸಿಕೊಳ್ಳಬೇಕು ಎಂದರು.

English summary
Prime Minister Narendra Modi has said that the revolution in Digital India in India has changed part of our lives and payment apps, including Bhim UPI, are an example of this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X