• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಲ್ಲ ಶಾಸಕರಿಗೆ ಮಾದರಿಯಾದ ಮಲ್ಲೇಶ್ವರ ಶಾಸಕ ಡಾ. ಅಶ್ವಥ್ ನಾರಾಯಣ್!

|

ಬೆಂಗಳೂರು, ಅ. 18: ಕೊರೊನಾ ವೈರಸ್ ಸಂಕಷ್ಟದ ಕಾಳದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಹೆತ್ತವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಬದಲಾದ ಪರಿಸ್ಥಿತಿಯಲ್ಲಿ ಮಕ್ಕಳ ಆನ್‌ಲೈನ್ ಶಿಕ್ಷಣಕ್ಕೆ ಮನೆಯಲ್ಲಿನ ಜಾನುವಾರುಗಳನ್ನು ಮಾರಾಟ ಮಾಡಿದ್ದು ಸೇರಿದಂತೆ ಹಲವು ಕರಣಾಜನಕ ಕಥೆಗಳು ವರದಿಯಾಗಿವೆ. ಜೊತೆಗೆ ಎಷ್ಟೊ ಪಾಲಕರಿಗೆ ಮಕ್ಕಳಿಗೆ ಮೊಬೈಲ್ ಹಾಗೂ ಟ್ಯಾಬ್ ಒದಗಿಸುವುದು ಸಾಧ್ಯವಾಗದೇ ಮಕ್ಕಳ ವಿದ್ಯಾಭ್ಯಾಸ ಕುಂಟಿತಗೊಂಡಿವೆ.

ಆದರೆ ಇಂತಹ ಪ್ರಕರಣಗಳನ್ನು ಗಮನಿಸಿದ್ದ ಬೆಂಗಳೂರಿನ ಮಲ್ಲೇಶ್ವರದ ಶಾಸಕ, ಡಿಸಿಎಂ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಅವರು ಹೊಸದೊಂದು ಚಿಂತನೆ ಮಾಡಿದ್ದಾರೆ. ತಮ್ಮ ಚಿಂತನೆಯನ್ನು ಕಾರ್ಯರೂಪಕ್ಕೂ ಇಳಿಸಿದ್ದಾರೆ. ಹೆಚ್ಚಾಗಿ ಬಡವರ ಮಕ್ಕಳೇ ಸರ್ಕಾರಿ ಶಾಲೆಗೆ ಬರುತ್ತಾರೆ. ಅಂಥವರಿಗೆ ಕನಿಷ್ಟ ಶಾಲಾ ಶುಲ್ಕವನ್ನು ಭರಿಸಲಿಕ್ಕೆ ಆಗುವುದಿಲ್ಲ. ಇನ್ನು ಅಂಥ ಮಕ್ಕಳು ಮೊಬೈಲ್, ಟ್ಯಾಬ್ ಅಥವಾ ಲ್ಯಾಪ್‌ಟಾಪ್ ಖರೀದಿಸಿ ಶಿಕ್ಷಣ ಪಡೆಯುವುದು ದೂರದ ಮಾತು. ಅಂತಹ ಮಕ್ಕಳಿಗೆ ಅನುಕೂಲವಾಗಲಿ ಎಂದು ಡಾ. ಅಶ್ವಥ್ ನಾರಾಯಣ್ ಅವರು ಸ್ವಂತ ಪ್ರಯತ್ನವೊಂದನ್ನು ಶುರು ಮಾಡಿದ್ದಾರೆ. ನಿಜವಾಗಿಯೂ ಅದೊಂದು ಮಹತ್ವದ ಕೆಲಸವೇ ಸರಿ. ಅದೇನದು? ಮುಂದೆ ಓದಿ.

ಸರ್ಕಾರಿ ಶಾಲಾ ಮಕ್ಕಳಿಗೆ ಡಿಜಿಟಲ್ ಕಲಿಕೆ

ಸರ್ಕಾರಿ ಶಾಲಾ ಮಕ್ಕಳಿಗೆ ಡಿಜಿಟಲ್ ಕಲಿಕೆ

ಮಲ್ಲೇಶ್ವರ ವಿಧಾನ ಸಭಾ ವ್ಯಾಪ್ತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಡಿಸಿಎಂ ಹಾಗೂ ಸ್ಥಳೀಯ ಶಾಸಕ ಡಾ. ಅಶ್ವಥ್ ನಾರಾಯಣ್ ಅವರು ಡಿಜಿಟಲ್‌ ಕಲಿಗೆ ಸಹಾಯ ಹಸ್ತ ಚಾಚಲು ಮುಂದಾಗಿದ್ದಾರೆ. ಕ್ಷೇತ್ರದ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಡಿಜಿಟಲ್ ಕಲಿಕೆಗೆ ಸಜ್ಜುಗೊಳಿಸಲಾಗುತ್ತಿದೆ. ಪ್ರೌಢಶಾಲೆಯ ಮಕ್ಕಳಿಗೆ ಒಂದು ಸಾವಿರ ಟ್ಯಾಬ್ ಮತ್ತು ಪ್ರಾಥಮಿಕ ಶಾಲೆಯ ಐವರು ಮಕ್ಕಳಿಗೆ ಒಂದರಂತೆ ಲ್ಯಾಪ್‌ಟಾಪ್ ನೀಡಲಾಗುವುದು ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ್ ಅವರು ತಿಳಿಸಿದ್ದಾರೆ.

ಧರಣಿ ನಿರತ ಉಪನ್ಯಾಸಕರಿಗೆ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಮಹತ್ವದ ಭರವಸೆ!

ಅದಕ್ಕೆ ಪೂರ್ವಭಾವಿಯಾಗಿ ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ಈಗಾಗಲೇ 21 ಮಂದಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಟ್ಯಾಬ್‌ಗಳನ್ನು ವಿತರಿಸಿದ್ದಾರೆ. ವಿಶೇಷ ಎಂದರೆ ಆ ಟ್ಯಾಬ್‌ಗಳಲ್ಲಿ ರಾಜ್ಯಮಟ್ಟದ ಪಠ್ಯ ಇದೆ, ಅದರಲ್ಲಿ ಫೊಟೋಗಳು, ವಿಡಿಯೋಗಳು ಸೇರಿದಂತೆ ಆಧುನಿಕ ಕಾಲಘಟ್ಟದಲ್ಲಿ ಕಲಿಯಬೇಕಾದ ಎಲ್ಲ ರೀತಿಯ ಅಂಶಗಳನ್ನೂ ಮೊದಲೇ ಅಪ್‌ಲೋಡ್‌ ಮಾಡಲಾಗಿದೆ.

ಸರ್ಕಾರಿ ಶಾಲೆಗಳ ಮಕ್ಕಳಿಗೆ ಸೌಲಭ್ಯ

ಸರ್ಕಾರಿ ಶಾಲೆಗಳ ಮಕ್ಕಳಿಗೆ ಸೌಲಭ್ಯ

ಕೋವಿಡ್ ರಣದಿಂದ ಎಲ್ಲಡೆ ಡಿಜಿಟಲ್‌ ಕಲಿಕೆ ಅನಿವಾರ್ಯವಾಗಿದ್ದು, ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಸರಕಾರಿ ಶಾಲೆಗಳು ಹಿಂದೆ ಬಿದ್ದಿವೆ. ಅದರಲ್ಲೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಶಿಕ್ಷಣದಿಂದಲೇ ವಂಚಿತವಾಗುವ ಅಪಾಯವೂ ಎದುರಾಗಿತ್ತು. ಹೀಗಾಗಿ ಮಲ್ಲೇಶ್ವರ ಕ್ಷೇತ್ರದಲ್ಲಿನ 7 ಪ್ರೌಢಶಾಲೆಗಳೂ ಸೇರಿದಂತೆ ಒಟ್ಟು 21 ಸರಕಾರಿಗಳ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳ ಮಾಹಿತಿಯನ್ನು ತರಿಸಿಕೊಂಡಿದ್ದಾರೆ.

ತಮ್ಮ ಡಾ.ಸಿ.ಎನ್. ಅಶ್ವಥ್ ನಾರಾಯಣ ಟ್ರಸ್ಟ್‌, ಆರ್‌.ವಿ. ಶಿಕ್ಷಣ ತರಬೇತಿ ಸಂಸ್ಥೆ ಮತ್ತು ಶಿಕ್ಷಣ ಫೌಂಡೇಷನ್‌ ಇವುಗಳ ನೆರವಿನೊಂದಿಗೆ ಎಲ್ಲ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗಾಗಿ ಒಟ್ಟು ಸುಮಾರು 1,000 ಉತ್ತಮ ಗುಣಮಟ್ಟದ ಟ್ಯಾಬ್‌ಗಳನ್ನು ನೀಡಲು ಮುಂದಾಗಿದ್ದಾರೆ.

ಪ್ರಾಯೋಗಿಕ ಯೋಜನೆ ಶುರು

ಪ್ರಾಯೋಗಿಕ ಯೋಜನೆ ಶುರು

ಇದಕ್ಕೆ ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ 21 ವಿದ್ಯಾರ್ಥಿಗಳಿಗೆ ಟ್ಯಾಬ್‌ಗಳನ್ನು ವಿತರಿಸಲಾಗಿದ್ದು, ಉಳಿದ ಟ್ಯಾಬ್‌ಗಳಿಗೆ ಕಂಟೆಂಟ್ ಲೋಡ್‌ ಮಾಡುವ ಕೆಲಸ ನಡೆಯುತ್ತಿದೆ. ಮುಂದಿನ ತಿಂಗಳು ಈ ಕೆಲಸ ಮುಗಿಯಲಿದ್ದು ನಂತರ ತಕ್ಷಣವೇ ಮಕ್ಕಳಿಗೆ ವಿತರಿಸಲಾಗುವುದು ಎಂದು ಡಾ. ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ಶಾಲೆಗಳಲ್ಲಿ ಸ್ಮಾರ್ಟ್‌ ಮತ್ತು ಡಿಜಿಟಲ್‌ ಕಲಿಕೆಗೆ ಪ್ರೋತ್ಸಾಹ ನೀಡುವ ನಿಟ್ಟನಲ್ಲಿ ಈಗಾಗಲೇ ಮಲ್ಲೇಶ್ವರ ಕ್ಷೇತ್ರದ ಮತ್ತಿಕೆರೆಯ ಶಾಲೆಯಲ್ಲಿ ಸ್ಮಾರ್ಟ್‌ ಕಲಿಕೆ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ನಂತರ ಹಂತ ಹಂತವಾಗಿ ಇತರೆ ಶಾಲೆಗಳಲ್ಲೂ ಅನುಷ್ಠಾನಕ್ಕೆ ತರಲಾಗುತ್ತಿದೆ. ಶೇ.100ರಷ್ಟು ಡಿಜಿಟಲ್ ಕಲಿಕೆಗೆ ಶಿಕ್ಷಣವನ್ನು ಬದಲಿಸುವ ಉದ್ದೇಶದಿಂದ ಪ್ರೌಢಶಾಲೆ ಮಕ್ಕಳಿಗೆ ಟ್ಯಾಬ್‌ ಮತ್ತು ಪ್ರಾಥಮಿಕ ಶಾಲೆ ಮಕ್ಕಳಿಗೆ ಐವರಿಗೆ ಒಂದರಂತೆ ಲ್ಯಾಪ್‌ಟಾಪ್‌ ಕೊಡಲು ತೀರ್ಮಾನಿಸಿದ್ದಾರೆ.

ಸರ್ಕಾರಿ ಶಾಲಾ ಶಿಕ್ಷಕರಿಗೂ ತರಬೇತಿ

ಸರ್ಕಾರಿ ಶಾಲಾ ಶಿಕ್ಷಕರಿಗೂ ತರಬೇತಿ

ಡಿಜಿಟಲ್‌ ಮತ್ತು ಸ್ಮಾರ್ಟ್‌ ಶಿಕ್ಷಣಕ್ಕೆ ಶಿಕ್ಷಕರೂ ಹೊಂದಿಕೊಳ್ಳುವಂತೆ ಮಾಡಲು ಅವರಿಗೂ ಕೂಡ ಸೂಕ್ತ ತರಬೇತಿ ನೀಡಲಾಗುತ್ತಿದೆ. ಮಕ್ಕಳಿಂದ ಹೋಮ್‌ ವರ್ಕ್‌ ಮಾಡಿಸುವುದು, ಟೆಸ್ಟ್‌, ಪರೀಕ್ಷೆ ನಡೆಸುವುದು, ಮಕ್ಕಳ ಓದು ಸೇರಿ ಎಲ್ಲ ಅಂಶಗಳನ್ನು ಸೂಕ್ತವಾದ ರೀತಿಯಲ್ಲಿ ಪಾಲನೆ ಮಾಡಲು ಅನುಕೂಲವಾಗುವಂತೆ ಅವರನ್ನು ಸಜ್ಜುಗೊಳಿಸಲಾಗುತ್ತಿದೆ. ಇದರ ಜತೆಗೆ, ಶಾಲೆಗಳಲ್ಲಿ ಕಟ್ಟಡ, ನೀರು, ಶೌಚಾಲಯ ಇನ್ನಿತರೆ ಯಾವುದೇ ಮೂಲಭೂತ ಸಮಸ್ಯೆಗಳಿದ್ದರೆ ಅವುಗಳನ್ನು ಸರಿ ಮಾಡಿಸುವ ಕೆಲಸವನ್ನು ಕೂಡ ಮಾಡಲಾಗುತ್ತಿದೆ.

English summary
Digital education for government school children in Malleswaram. DCM and Malleswaram MLA Dr. CN Ashwath Narayan distributed free laptop and tab for government school children, Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X