ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Video: ಬೆಂಗಳೂರಿನ ಈ ಕಳ್ಳನಿಗೆ TVS XL ಬೈಕ್‌ಗಳೇ ಟಾರ್ಗೆಟ್!

|
Google Oneindia Kannada News

ಬೆಂಗಳೂರು, ಜುಲೈ 06: ಸಿಲಿಕಾನ್ ಸಿಟಿಯಲ್ಲಿ ಚಿತ್ರ ವಿಚಿತ್ರ ಕಳ್ಳರ ಬಗ್ಗೆ ನೋಡಿರುತ್ತೀರೀ ಹಾಗೂ ಕೇಳಿರುತ್ತೀರಿ. ಬೆಂಗಳೂರಿನಲ್ಲಿ ಸರಗಳ್ಳರಿಂದ ಹಿಡಿದು ದುಬಾರಿ ಬೈಕ್ ಕಳ್ಳರವರೆಗೂ ಒಬ್ಬರಿಗಿಂತ ಒಬ್ಬರು ಚಾಲಾಕಿಗಳೇ. ಆದರೆ ಇಂಥವರ ಮಧ್ಯೆ ಈ ಕಳ್ಳನಿಗೆ ಕೇವಲ TVS XL ಬೈಕ್ ಗಳ ಮೇಲೇ ಕಣ್ಣು.

ದುಬಾರಿ ದ್ವಿಚಕ್ರ ವಾಹನಗಳು ಕಣ್ಣು ಎದುರಿಗೇ ಇದ್ದರೂ ಈ ಕಳ್ಳ ಅವುಗಳನ್ನು ಎಗರಿಸುತ್ತಿರಲಿಲ್ಲ. ದೊಡ್ಡ ದೊಡ್ಡ ಬೈಕ್ ಗಳನ್ನು ಮುಟ್ಟದ ಈ ಆಸಾಮಿಗೆ ಟಿವಿಎಸ್ ಎಕ್ಸ್ ಎಲ್ ಎಂದರೆ ಅದೇನೋ ಒಂದು ರೀತಿ ಪ್ಯಾರ್ ಅಂತೆ.

ಸರ ಅಪಹರಣ ಮಾಡಿದವರ ಬೆನ್ನಟ್ಟಿದ್ದ ಪೊಲೀಸರಿಗೆ ಸಿಕ್ಕಿದ್ದು ಎಟಿಎಂ ಕಳ್ಳರುಸರ ಅಪಹರಣ ಮಾಡಿದವರ ಬೆನ್ನಟ್ಟಿದ್ದ ಪೊಲೀಸರಿಗೆ ಸಿಕ್ಕಿದ್ದು ಎಟಿಎಂ ಕಳ್ಳರು

ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ತನ್ನ ಕೈಚಳಕ ತೋರುತ್ತಿದ್ದ ಟಿವಿಎಸ್ ಎಕ್ಸ್ ಎಲ್ ಕಳ್ಳನನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ರಾಜಣ್ಣನಿಂದ 3 ಲಕ್ಷ ಮೌಲ್ಯದ 7 ಟಿವಿಎಸ್ ಎಕ್ಸ್ ಎಲ್ ಬೈಕ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಪೊಲೀಸರು ನಡೆಸಿರುವ ವಿಚಾರಣೆ ವೇಳೆ ಆರೋಪಿ ರಾಜಣ್ಣ ನೀಡಿರುವ ಹೇಳಿಕೆಗಳು ಎಂಥವರಿಗೂ ಬೆರಗು ಮೂಡಿಸುತ್ತವೆ. ಟಿವಿಎಸ್ ಎಕ್ಸ್ ಎಲ್ ದ್ವಿಚಕ್ರ ವಾಹನಗಳನ್ನಷ್ಟೇ ಕದಿಯುತ್ತಿದ್ದ ಆರೋಪಿ ನೀಡಿರುವ ಕಾರಣಗಳು ಬಲು ರೋಚಕ ಹಾಗೂ ಅಚ್ಚರಿ ಮೂಡಿಸುವಂತಿವೆ.

1ನೇ ಕಾರಣ

1ನೇ ಕಾರಣ

ಪೊಲೀಸ್ ವಿಚಾರಣೆ ವೇಳೆ ಆರೋಪಿ ರಾಜಣ್ಣ ತಾನು ಟಿವಿಎಸ್ ಎಕ್ಸ್ ಎಲ್ ಬೈಕ್ ಅನ್ನೇ ಹೆಚ್ಚಾಗಿ ಕದಿಯುತ್ತಿರುವುದಕ್ಕೆ ವಿಚಿತ್ರ ಕಾರಣವೊಂದನ್ನು ಹೇಳಿದ್ದಾರೆ. ಈ ಪೈಕಿ ಮೊದಲ ಕಾರಣ ಆತನಿಗೆ ದುಬಾರಿ ಬೈಕ್ ಗಳನ್ನು ಚಾಲನೆ ಮಾಡುವುದಕ್ಕೆ ಬರುತ್ತಿರಲಿಲ್ಲ. ಹೀಗಾಗಿ ಚಾಲನೆ ಮಾಡುವುದಕ್ಕೆ ಬರುವ ಈ ಬೈಕ್ ಅನ್ನು ಮಾತ್ರ ಕಳ್ಳತನ ಮಾಡುತ್ತಿರುವುದಾಗಿ ಬಾಯಿ ಬಿಟ್ಟಿದ್ದಾನೆ.

2ನೇ ಕಾರಣ

2ನೇ ಕಾರಣ

ದುಬಾರಿ ಹಾಗೂ ಗೇರ್ ಯುಳ್ಳ ದ್ವಿಚಕ್ರ ವಾಹನಗಳಿಗೆ ಹೋಲಿಸಿದರೆ ಈ ಬೈಕ್ ಅನ್ನು ಕದಿಯುವುದು ತುಂಬಾ ಸುಲಭವಾಗಿರುತ್ತದೆ. ಈ ಕಾರಣದಿಂದಾಗಿಯೇ ಟಿವಿಎಸ್ ಎಕ್ಸ್ ಎಲ್ ಬೈಕ್ ಅನ್ನು ಹೆಚ್ಚಾಗಿ ಕದಿಯುತ್ತಿದ್ದೆನು ಎಂದು ಆರೋಪಿ ಹೇಳಿಕೊಂಡಿದ್ದಾನೆ.

3ನೇ ಕಾರಣ

3ನೇ ಕಾರಣ

ಟಿವಿಎಸ್ ಎಕ್ಸ್ ಎಲ್ ಕಡಿಮೆ ಬೆಲೆಯ ಬೈಕ್ ಆಗಿರುವುದರಿಂದ ಪೊಲೀಸರು ಈ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಆದ್ದರಿಂದ ಕಳ್ಳತನದ ಮಾಡಿದ ನಂತರದಲ್ಲಿ ಹೆಚ್ಚಿನ ಅಪಾಯ ಇರುವುದಿಲ್ಲ ಎನ್ನುವುದು ಕಳ್ಳನ ಲೆಕ್ಕಾಚಾರ.

4ನೇ ಕಾರಣ

4ನೇ ಕಾರಣ

ಟಿವಿಎಸ್ ಎಕ್ಸ್ ಎಲ್ ಕದಿಯುವುದಕ್ಕೆ ಈ ಮೂರು ಕಾರಣಗಳ ಜೊತೆಗೆ ಮತ್ತೊಂದು ಪ್ರಮುಖ ಕಾರಣವಿದೆ. ಅದು ಕಡಿಮೆ ಬೆಲೆಯ ಬೈಕ್ ಅನ್ನು ಕದ್ದ ನಂತರದಲ್ಲಿ ಅದನ್ನು ಕಡಿಮೆ ಬೆಲೆ ಮಾರಾಟ ಮಾಡುವುದು ಬಲು ಸುಲಭವಾಗಿರುತ್ತದೆ. ಈ ಬೈಕ್ ಮಾರಾಟ ಮಾಡುವುದು ಅಷ್ಟೇನು ಕಷ್ಟವಲ್ಲ ಎಂದು ಸ್ವತಃ ಆರೋಪಿ ರಾಜಣ್ಣ ಪೊಲೀಸ್ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.

English summary
Different Thief Only Targeting TVS XL Bikes At Silicon City: Here Read Reason For Thiefing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X