• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರವೇ ಹಂಪಿ ಕನ್ನಡ ವಿವಿ ಉಳಿಸಿ ಹೋರಾಟಕ್ಕೆ ವಿವಿಧ ಕ್ಷೇತ್ರಗಳ ಗಣ್ಯರ ಬೆಂಬಲ

|
Google Oneindia Kannada News

ಬೆಂಗಳೂರು, ಡಿಸೆಂಬರ್ 27: ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿರುವ ಹಂಪಿ ಕನ್ನಡ ವಿವಿ ಉಳಿಸಿ ಭಿತ್ತಿಪತ್ರ ಅಭಿಯಾನ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಉತ್ಸಾಹದಿಂದ ಅಭಿಯಾನದಲ್ಲಿ ಪಾಲ್ಗೊಂಡರು. ಮುಖ್ಯಮಂತ್ರಿಗಳೇ, ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಲು ಹಣವಿಲ್ಲವೇ?
ನಾವೇ ಭಿಕ್ಷೆ ಬೇಡಿಯಾದರೂ ವಿವಿ ಉಳಿಸಿಕೊಳ್ಳುತ್ತೇವೆ' ಎಂದು ಕೋಲಾರ ಪುಟ್ಟ ಬಾಲಕಿಯೊಬ್ಬಳ ವಿಡಿಯೋ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇಂದಿನ ವಿಶೇಷವಾಗಿತ್ತು.

ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಮಂಸೋರೆ ಹೇಳಿಕೆ ನೀಡಿದ್ದು, ನಾನು ಚಿತ್ರಕಲಾ ಕ್ಷೇತ್ರದಿಂದ ಗುರುತಿಸಿಕೊಂಡವನು.

ನಾನು ಪದವಿಗೆ ಸೇರಿದಾಗ ಸುಮಾರು 75 ಚಿತ್ರಕಲಾ ಶಾಲೆಗಳಿದ್ದವು. ಅಲ್ಲಿ ಓದಿದ ಎಲ್ಲಾ ವಿದ್ಯಾರ್ಥಿಗಳಿಗೂ ಎಸ್ ಎಸ್ ಎಲ್ ಸಿ ಬೋರ್ಡಿನಿಂದ ಪ್ರಮಾಣಪತ್ರಗಳನ್ನು ಕೊಡಲಾಗುತ್ತಿದ್ದುದರಿಂದ ಪದವಿ ಮಾನ್ಯತೆ ಒದಗಿರಲಿಲ್ಲ.

ಈ ವಿಷಯವಾಗಿ ವಿವಿಧ ವಿಶ್ವವಿದ್ಯಾಲಯಗಳನ್ನು ಸಂಪರ್ಕಿಸಿ ಹೋರಾಟ ಮಾಡಿದರೂ ನ್ಯಾಯ ದೊರೆತಿರಲಿಲ್ಲ. ಇಂಥ ಸಮಯದಲ್ಲಿ ಚಿತ್ರಕಲಾ ಶಾಲೆಗಳನ್ನು ತನ್ನ ವ್ಯಾಪ್ತಿಗೆ ತೆಗೆದುಕೊಂಡಿದ್ದು ಹಂಪಿ ಕನ್ನಡ ವಿಶ್ವವಿಯ. ದೇಸೀ ಸೊಗಡಿಗೆ ಶ್ರಮಿಸಿದ ವಿಶ್ವವಿದ್ಯಾಲಯ ಆರ್ಥಿಕವಾಗಿ ಸಂಕಷ್ಟದಲ್ಲಿದೆ, ಹೀಗಾಗಿ ಸರ್ಕಾರ ತುರ್ತಾಗಿ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕನ್ನಡ ವಿಶ್ವವಿದ್ಯಾಲಯಕ್ಕೆ ಎಂದಿಗೂ ಅನುದಾನಕ್ಕೆ ಕೊರತೆಯಾಗಬಾರದು. ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಭಿತ್ತಿಪತ್ರ ಚಳವಳಿಗೆ ನನ್ನ ಸಂಪೂರ್ಣ ಬೆಂಬಲವಿದೆ, ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರನಟ ಸಂಚಾರಿ ವಿಜಯ್ ಒತ್ತಾಯಿಸಿದರೆ, ಹೆಸರಾಂತ ಚಿತ್ರಗೀತೆಗಳ ರಚನೆಕಾರ ಹೃದಯಶಿವ ತಮ್ಮ ಹೇಳಿಕೆಯಲ್ಲಿ ಸರ್ಕಾರ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಷಯದಲ್ಲಿ ತೋರುತ್ತಿರುವ ಬೇಜವಾಬ್ದಾರಿಯನ್ನು ಖಂಡಿಸಿದ್ಧಾರಲ್ಲದೆ, ಹಂಪಿ ವಿವಿಯನ್ನು ಜಗತ್ತಿನ ಮಾದರಿ ವಿಶ್ವವಿದ್ಯಾಲಯವನ್ನಾಗಿ ರೂಪಿಸುವ ಹೊಣೆ ಸರ್ಕಾರದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.

ನಿನ್ನೊಡವೆಯೆಂಬುದು ಜ್ಞಾನರತ್ನ' ಎಂಬ ಶರಣವಾಣಿಯಂತೆ ಕನ್ನಡ ಜ್ಞಾನಭಂಡಾರ ವಿಸ್ತಾರ ಮಾಡುವ ಕಾರ್ಯ ನಡೆಸುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡದೇ ಇರುವುದು ಕನ್ನಡಿಗರಾದ ನಾವು ನಮಗೇ ಮಾಡಿಕೊಳ್ಳುವ ಅವಮಾನ ಎನ್ನುತ್ತಾರೆ ಭಾಲ್ಕಿ ಹಿರೇಮಠದ ಪೂಜ್ಯರಾದ ಡಾ.ಚನ್ನಬಸವ ಪಟ್ಟದೇವರು ಎಂದು ನೊಂದು ನುಡಿದಿದ್ದಾರೆ.

ನಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿಯ ಸಂವರ್ಧನೆಗಾಗಿ ಸರ್ಕಾರವೇ ಹುಟ್ಟುಹಾಕಿದ ವಿಶ್ವವಿದ್ಯಾಲಯಕ್ಕೆ ಇಂದು ಅನುದಾನವಾಗಿ ಹೋರಾಟ ಮಾಡುವ ಪ್ರಸಂಗ ಬಂದಿದ್ದು ನಮ್ಮ ರಾಜ್ಯದ ಸಾಂಸ್ಕೃತಿಕ ಹಿರಿತನಕ್ಕೆ ಶೋಭೆ ತರುವಂಥದ್ದಲ್ಲ. ಈ ದಿಶೆಯಲ್ಲಿ ಸರ್ಕಾರ ಆದಷ್ಟು ಬೇಗನೇ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ,

   Virat Kohli ಈ ದಶಕದ ಶ್ರೇಷ್ಠ ಕ್ರಿಕೆಟಿಗ | Oneindia Kannada
    ವಿಶ್ವವಿದ್ಯಾಲಯಕ್ಕೆ ಅನುದಾನದ ಕೊರತೆ ತಲೆತಗ್ಗಿಸುವ ವಿಚಾರ

   ವಿಶ್ವವಿದ್ಯಾಲಯಕ್ಕೆ ಅನುದಾನದ ಕೊರತೆ ತಲೆತಗ್ಗಿಸುವ ವಿಚಾರ

   ಬಳ್ಳಾರಿಯ ಸಂಡೂರಿನ ವಿರಕ್ತಮಠದ ಶ್ರೀ ಮ.ನಿ.ಪ್ರ. ಪ್ರಭುಮಹಾಸ್ವಾಮಿಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದು, ಕನ್ನಡನಾಡು, ನುಡಿ, ಕಲೆ, ಸಂಸ್ಕೃತಿಯನ್ನು ಬಿತ್ತಲು ಹುಟ್ಟಿಕೊಂಡಿರುವ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನದ ಕೊರತೆ ಕಾಡುತ್ತಿರುವುದು ನಾವೆಲ್ಲಾ ತಲೆತಗ್ಗಿಸುವ ವಿಚಾರ. ಸರ್ಕಾರ ನಿಗಮ ಮಂಡಳಿಗಳಿಗೆ 500-600 ಕೋಟಿ ಹಣ ಕೊಡುತ್ತಿದೆ. ಮಠ ಮಾನ್ಯಗಳಿಗೆ ಬೊಗಸೆ ತುಂಬಾ ಹಣ ಕೊಡುತ್ತಿದೆ. ಕನ್ನಡಿಗರ ಅಸ್ಮಿತೆ ಕಾಪಾಡುವ ವಿಶ್ವವಿದ್ಯಾಲಯಕ್ಕೆ ಅನುದಾನ ಕೊಡದಿದ್ದರೆ ಹೇಗೆ? ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಕನ್ನಡಿಗರ ಮಾನ ಕಾಪಾಡಬೇಕು. ಮಾನ್ಯ ಎಂ.ಪಿ.ಪ್ರಕಾಶ್ ಹಾಗೂ ಚಂದ್ರಶೇಖರ್ ಕಂಬಾರ ಅವರು ಬಹಳ ಮಹತ್ವಾಕಾಂಕ್ಷೆಯಿಂದ ಕಟ್ಟಿದ ಕನ್ನಡ ವಿಶ್ವವಿದ್ಯಾಲಯ ಉಳಿಸಿಕೊಳ್ಳಲು ಕನ್ನಡಿಗರು ಹೋರಾಟಕ್ಕಿಳಿಯುವ ಮುನ್ನ ಸರ್ಕಾರ ಅನುದಾನ ಬಿಡುಗಡೆ ಮಾಡಲಿ. ಕರ್ನಾಟಕ ರಕ್ಷಣಾ ವೇದಿಕೆಯ ಈ ಅಭಿಯಾನಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ.

    ಸರ್ಕಾರಕ್ಕೆ ಕನ್ನಡದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ

   ಸರ್ಕಾರಕ್ಕೆ ಕನ್ನಡದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ

   ಬಳ್ಳಾರಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ನಿಷ್ಠಿ ರುದ್ರಪ್ಪ, ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡದಿರುವ ಸರ್ಕಾರದ ಕ್ರಮ ಖಂಡನೀಯ. ಅನವಶ್ಯಕ ಜಾತಿ ನಿಗಮ ಮಂಡಳಿಗಳಿಗೆ ಹಣಹೂಡುವ ಸರ್ಕಾರಕ್ಕೆ ಕನ್ನಡ ಭಾಷೆ ಸಂಸ್ಕೃತಿಯ ಬಗ್ಗೆ ಕನಿಷ್ಟ ಕಾಳಜಿ ಇಲ್ಲದಿರುವುದು ಖೇದನೀಯ. ಅನುದಾನವಿಲ್ಲದೆ ಮತ್ತು ಅವಶ್ಯಕ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿ ಇಲ್ಲದೇ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಸೊರಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಪ್ರತಿಭಟಿಸಿ ಅನುದಾನ ಪಡೆಯುವ ಹೀನಾಯ ಸ್ಥಿತಿ

   ಪ್ರತಿಭಟಿಸಿ ಅನುದಾನ ಪಡೆಯುವ ಹೀನಾಯ ಸ್ಥಿತಿ

   ಸಾಮಾಜಿಕ ಕಾರ್ಯಕರ್ತ ಕೆ.ಆರ್.ಪ್ರಗತ್, ಇವತ್ತಿನ ದಿನದಲ್ಲಿ ಕನ್ನಡ ಭಾಷೆಗೆ ಕರ್ನಾಟಕದಲ್ಲೇ ಕಾಡಿ, ಬೇಡಿ, ಪ್ರತಿಭಟಿಸಿ ಅನುದಾನ ಪಡೆಯಬೇಕಾದ ಹೀನಾಯ ಸ್ಥಿತಿಗೆ ಸರ್ಕಾರ ಭಾಷೆಯನ್ನು ತಂದು ನಿಲ್ಲಿಸಿದೆ. ಈ ಹಿಂದೆಯೂ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಹಠಕ್ಕೆ ಬಿದ್ದ ಸರ್ಕಾರ ಕೊನೆಗೂ ಹಣ ಬಿಡುಗಡೆ ಮಾಡದೇ ಸಾಹಿತ್ಯಾಸಕ್ತರೇ ಹಣ ಹಾಕಿ ಸಮ್ಮೇಳನ ಮಾಡುವ ದುರ್ಗತಿಗೆ ಕನ್ನಡ ಭಾಷೆ ಬಂದು ನಿಂತದ್ದು ಕನ್ನಡಿಗರ ದೌರ್ಭಾಗ್ಯವಲ್ಲದೇ ಇನ್ನೇನು.? ಈಗ ಇದೇ ಹಠವನ್ನು ಹಂಪಿ ಕನ್ನಡ ವಿವಿಗೆ ಮಾಡುತ್ತಿರುವುದು ಮಾತ್ರ ಇದು ಕನ್ನಡ ನೆಲ ಹೌದೋ ಅಲ್ಲವೋ ಎಂಬಷ್ಟು ಅನುಮಾನ ಮೂಡುತ್ತಿದೆ.
   ಸ್ಕಾಲರ್ಶಿಪ್-ಫೆಲೋಶಿಪ್ ಗಳನ್ನೇ ನಂಬಿದ ಬಡ ವಿದ್ಯಾರ್ಥಿಗಳ ಶಿಕ್ಷಣದ ಹಕ್ಕನ್ನು ಸರ್ಕಾರವೇ ಕಸಿಯುತ್ತಿರುವುದು ಅಕ್ಷರಶಃ ಖಂಡನಾರ್ಹ. ಸರ್ಕಾರ ಈ ಕೂಡಲೇ ಕನ್ನಡ ವಿವಿಗೆ ತಡೆಹಿಡಿದ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

    ವಿಶ್ವವಿದ್ಯಾಲಯ ರಾಜ್ಯ, ರಾಷ್ಟ್ರದ ಸಂಪತ್ತು

   ವಿಶ್ವವಿದ್ಯಾಲಯ ರಾಜ್ಯ, ರಾಷ್ಟ್ರದ ಸಂಪತ್ತು

   ವಿಶ್ವವಿದ್ಯಾಲಯಗಳು ನಮ್ಮ ರಾಜ್ಯ-ರಾಷ್ಟ್ರದ ನಿಜಸಂಪತ್ತು, ಅವು ನಮ್ಮ ನಾಡು, ನುಡಿ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಸಮಸ್ತ ಕನ್ನಡಿಗರ ಅಸ್ಮೀಯತೆಯ ಪ್ರತೀಕವಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ ನಮ್ಮ ಹೆಮೆಮಯ ವಿಶ್ವವಿದ್ಯಾಲಯವಾಗಿದೆ. ಈ ವಿಶ್ವವಿದ್ಯಾಲಯವನ್ನು ನಾಡಿನ ಅರಿವಿನ ಪರದೆಯನ್ನು ವಿಸ್ತರಿಸುತ್ತಾ ಜಗತ್ತಿನಲ್ಲಿಯೇ ಪ್ರಸಿದ್ಧಿ ಪಡೆಯುತ್ತಿದೆ. ಇದನ್ನು ನಾವೆಲ್ಲರೂ ಸೇರಿ ಇನ್ನಷ್ಟು ಜಗದಗಲವಾಗಿ ಬೆಳೆಸಬೇಕಾಗಿದೆ ಎಂದು ಡಾ. ಬಸವಲಿಂಗ ಪಟ್ಟದೇವರು ಹೇಳಿದ್ದಾರೆ.

   ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

   English summary
   Different Sectors Elites Supported Save Hampi Kannada University Campaign, Karnataka Rakshana Vedike Started this campaign 4 days Ago.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X