ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡೈರಿ ಬಗ್ಗೆ ಗೊತ್ತಿದ್ದರೂ ಲೋಕಾಯುಕ್ತ ಸಂಸ್ಥೆ ಸುಮ್ಮನಿದೆ ಏಕೆ?

ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ದಿನನಿತ್ಯ, ಮಧ್ಯಾಹ್ನ, ರಾತ್ರಿ ಕೆಸೆರೆರಚಾಟಕ್ಕೆ ನಾಂದಿ ಹಾಡಿರುವ 'ಡೈರಿ ಹಗರಣ' ಕ್ಕೆ ಹೊಸ ತಿರುವು. ಒಂದು ವರ್ಷ ಹಳೆ ಡೈರಿ ಪುರಾಣ ಬಿಚ್ಚುತ್ತಾ ಹೋದರೆ, ಲೋಕಾಯುಕ್ತ ನಿಷ್ಕ್ರಿಯತೆ ಎದ್ದು ಕಾಣುತ್ತದೆ

By ಅನುಷಾ ರವಿ
|
Google Oneindia Kannada News

ಬೆಂಗಳೂರು, ಫೆಬ್ರವರಿ 28: ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ದಿನನಿತ್ಯ, ಮಧ್ಯಾಹ್ನ, ರಾತ್ರಿ ಕೆಸೆರೆರಚಾಟಕ್ಕೆ ನಾಂದಿ ಹಾಡಿರುವ 'ಡೈರಿ ಹಗರಣ' ಕ್ಕೆ ಹೊಸ ತಿರುವು ಸಿಕ್ಕಿದೆ. ಒಂದು ವರ್ಷ ಹಳೆ ಡೈರಿ ಪುರಾಣ ಬಿಚ್ಚುತ್ತಾ ಹೋದರೆ, ಲೋಕಾಯುಕ್ತ ಸಂಸ್ಥೆಯ ನಿಷ್ಕ್ರಿಯತೆ ಎದ್ದು ಕಾಣುತ್ತದೆ.

ಒನ್ ಇಂಡಿಯಾಕ್ಕೆ ಸಿಕ್ಕಿರುವ ದಾಖಲೆಗಳ ಪ್ರಕಾರ, ಡಿಸೆಂಬರ್ 2016ರಲ್ಲೇ ವಿವಾದಿತ ಡೈರಿಗಳನ್ನು ಕೈಗೆತ್ತಿಕೊಂಡಿದ್ದ ಲೋಕಾಯುಕ್ತ, ಸುಮ್ಮನೆ ಪಕ್ಕಕ್ಕಿಟ್ಟು, ಯಾವುದೇ ಕ್ರಮ ಜರುಗಿಸದಿರುವುದು ಅಚ್ಚರಿಯಾದರೂ ಸತ್ಯವಾಗಿದೆ.[ಡೈರಿ ನನ್ನದ್ದಲ್ಲ, ಇದೆಲ್ಲ ದಿನೇಶ್ ಗುಂಡೂರಾವ್ ಪಿತೂರಿ: ಲೆಹರ್]

ಕಾಂಗ್ರೆಸ್ ಎಂಎಲ್ಸಿ ಗೋವಿಂದರಾಜು ಅವರ ಮನೆ ಮೇಲೆ ಐಟಿ ದಾಳಿ ನಡೆದ ವೇಳೆ ಸಿಕ್ಕಿದೆ ಎನ್ನಲಾದ ಡೈರಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ಕಾಣಿಕೆ ನೀಡಿರುವ ವಿವರಗಳಿವೆ ಎಂಬ ಸುದ್ದಿ ವಾರದಿಂದ ಗಿರಕಿ ಹೊಡೆಯುತ್ತಲೇ ಇದೆ. [ಡೊನೇಷನ್ ಗೇಟ್ ಪಿತೂರಿ : ಯಾವುದು ಸತ್ಯ, ಯಾವುದು ಮಿಥ್ಯ?]

ಈ ವಿಷಯವನ್ನು ಅಸ್ತ್ರವಾಗಿ ಬಳಸಿಕೊಂಡು ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಮುಂದಾಗಿದ್ದ ಬಿಜೆಪಿ ಗೆ ತಿರುಗುಬಾಣವಾಗಿದ್ದು ಗೊತ್ತೇ ಇದೆ. ಆದರೆ, ಲೋಕಾಯುಕ್ತ ಸಂಸ್ಥೆ ಮಾಡಿದ್ದು ಎಷ್ಟು ಸರಿ? ಮುಂದೆ ಓದಿ...

ಲೋಕಾಯುಕ್ತ ಸಂಸ್ಥೆಗೆ ಡೈರಿ ಬಗ್ಗೆ ಗೊತ್ತಿದೆ

ಲೋಕಾಯುಕ್ತ ಸಂಸ್ಥೆಗೆ ಡೈರಿ ಬಗ್ಗೆ ಗೊತ್ತಿದೆ

ಆದರೆ, ಕಥೆ ಇಲ್ಲಿಗೆ ಮುಗಿಯುವುದಿಲ್ಲ, ಡಿಸೆಂಬರ್ 20, 2016ರಲ್ಲಿ ಲೋಕಾಯುಕ್ತ ಸಂಸ್ಥೆಗೆ ಡೈರಿ ಹಾಗೂ ಕಪ್ಪಕಾಣಿಕೆ ಬಗ್ಗೆ ಲೋಕಾಯುಕ್ತ ಸಂಸ್ಥೆಗೆ ಒಂದು ದೂರು ಸಲ್ಲಿಸಲಾಗಿದೆ. ಈ ದೂರಿನಲ್ಲಿ ಕಪ್ಪ ಕಾಣಿಕೆ ಬಗ್ಗೆ ವಿವರ ಅಲ್ಲದೆ, ಉಕ್ಕಿನ ಸೇತುವೆಗೆ ನೀಡಿರುವ ಕಪ್ಪ, ಬಿಡಿಎ ಇಂಜಿನಿಯರ್ ಗಳಿಗೆ ಸಂದಾಯವಾದ ಮೊತ್ತದ ವಿವರಗಳನ್ನು ನೀಡಿ, ಕೂಡಲೆ ಈ ಬಗ್ಗೆ ಕ್ರಮ ಜರುಗಿಸುವಂತೆ ಕೋರಲಾಗಿದೆ.

ಐಟಿ ಇಲಾಖೆ ಮಾಹಿತಿಯ ಕೋರಲಾಗಿದೆ

ಐಟಿ ಇಲಾಖೆ ಮಾಹಿತಿಯ ಕೋರಲಾಗಿದೆ

ಆದರೆ, ಈ ಬಗ್ಗೆ ಇಲ್ಲಿ ತನಕ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಲೋಕಾಯುಕ್ತ ಸಂಸ್ಥೆಯ ಮೂಲಗಳಿಂದ ತಿಳಿದುಬಂದಿದೆ. ಲೊಕಾಯುಕ್ತ ಸಂಸ್ಥೆಗೆ ಬಂದ ದೂರಿನ ಪ್ರತಿಯನ್ನು ಆದಾಯ ತೆರಿಗೆ ಇಲಾಖೆಗೆ ಕಳಿಸಿ ಮಾಹಿತಿಯ ಕೋರಲಾಗಿದೆ. ಫೆಬ್ರವರಿ 6, 2017 ರಂದು ಐಟಿ ಇಲಾಖೆಯಿಂದ ಉತ್ತರ ಬಂದಿದ್ದು, ಅರ್ಜಿ 46ರ ಅನ್ವಯ ಬೆಂಗಳೂರಿನ ಲೋಕಾಯುಕ್ತ ವ್ಯಾಪ್ತಿಗೆ ಸೇರುವ ಎಸ್ ಪಿ ದರ್ಜೆಯ ಪೊಲೀಸರ ಮೂಲಕ ಮಾಹಿತಿಗಾಗಿ ಕೋರಿಕೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಲೋಕಾಯುಕ್ತ ಸಂಸ್ಥೆಗೆ ಸೂಚಿಸಿದೆ

ಲೋಕಾಯುಕ್ತ ಸಂಸ್ಥೆಗೆ ಸೂಚಿಸಿದೆ

ಈ ಮೂಲಕ ಡೈರಿ ಇರುವುದು ಸತ್ಯ, ದಾಳಿ ವೇಳೆ ಡೈರಿ ಸಿಕ್ಕಿದ್ದು ಸತ್ಯ ಎಂಬುದನ್ನು ಐಟಿ ಇಲಾಖೆ ಸ್ಪಷ್ಟಪಡಿಸಿದೆ. ಸರಿಯಾದ ಕ್ರಮದಲ್ಲಿ ಮಾಹಿತಿ ಕೋರುವಂತೆ ಮಾತ್ರ ಲೋಕಾಯುಕ್ತ ಸಂಸ್ಥೆಗೆ ಸೂಚಿಸಿದೆ. ಆದರೆ, ಇದನ್ನೇ ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡೋ, ನಿರ್ಲಕ್ಷ್ಯದಿಂದಲೋ ಲೋಕಾಯುಕ್ತ ಸಂಸ್ಥೆ ಸುಮ್ಮನೆ ಕುಳಿತು ಬಿಟ್ಟಿದೆ.

ಲೋಕಾಯುಕ್ತ ಸಂಸ್ಥೆ ಈಗ ಹಲ್ಲು ಕಿತ್ತ ಹಾವು

ಲೋಕಾಯುಕ್ತ ಸಂಸ್ಥೆ ಈಗ ಹಲ್ಲು ಕಿತ್ತ ಹಾವು

ದೂರು ಬಂದ ತಕ್ಷಣವೇ ಪ್ರಕರಣ ದಾಖಲಿಸಿಕೊಳ್ಳಲು ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಎಲ್ಲಾ ಆಯ್ಕೆಗಳಿದ್ದರೂ ಉಪಲೋಕಾಯುಕ್ತರು ಸುಮ್ಮನಿದ್ದದ್ದು ಏಕೆ? ಐ ಟಿ ಇಲಾಖೆ ಸೂಚನೆಯನ್ನು ಧಿಕ್ಕರಿಸಿ, ಸುಮ್ಮನಿದ್ದದ್ದು ಏಕೆ? ಎಂಎಲ್ಸಿ ವಿರುದ್ಧ ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿರುವುದೇಕೆ? ಲೋಕಾಯುಕ್ತ ಸಂಸ್ಥೆ ಈಗ ಹಲ್ಲು ಕಿತ್ತ ಹಾವು ಎಂದು ಸಾರ್ವಜನಿಕರ ಬಾಯಲ್ಲಿ ಮಾತುಗಳು ಕೇಳಿ ಬರುತ್ತಿರುವುದು ಸತ್ಯವಾಗುತ್ತಿದೆ ಏಕೆ?

English summary
Donation gate: OneIndia has accessed documents that prove that the Lokayukta knew of a certain diary and its contents way back in December 2016. While the anti-corruption body acknowledged the information about the diary, no concrete action has been initiated so far
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X