ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೆರೆದ ಸೇಂಟ್ ಮೇರಿ ಚರ್ಚ್: ಸಾಮಾಜಿಕ ಅಂತರದೊಂದಿಗೆ ಪ್ರಾರ್ಥನೆ

|
Google Oneindia Kannada News

ಬೆಂಗಳೂರು, ಜೂನ್ 8: ಮಹಾಮಾರಿ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ದೇಶದಾದ್ಯಂತ ಲಾಕ್ ಡೌನ್ ಘೋಷಿಸಲಾಗಿತ್ತು. ಆದ್ರೀಗ, ಕಂಟೇನ್ಮೆಂಟ್ ಝೋನ್ ಗಳಲ್ಲಿ ಮಾತ್ರ ಲಾಕ್ ಡೌನ್ ಮುಂದುವರೆಯಲಿದ್ದು, ಉಳಿದ ಪ್ರದೇಶಗಳನ್ನು 'ಅನ್ ಲಾಕ್' ಮಾಡಲಾಗುತ್ತಿದೆ. ಪರಿಣಾಮ, ಇಂದಿನಿಂದ ಧಾರ್ಮಿಕ ಕೇಂದ್ರಗಳು, ಪೂಜಾ ಮಂದಿರ, ಮಸೀದಿ, ಚರ್ಚ್ ಗಳನ್ನು ಭಕ್ತರಿಗೆ ತೆರೆಯಲಾಗಿದೆ.

Recommended Video

Chiranjeevi Sarja : ಕನಕಪುರ ಬಳಿಯ ಬೃಂದಾವನ ಫಾರ್ಮ್ ಹೌಸ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ |

ದೇಶದ ಪ್ರಖ್ಯಾತ ದೇಗುಲಗಳಾದ ಧರ್ಮಸ್ಥಳ, ತಿರುಪತಿ ಇಂದಿನಿಂದ ಭಕ್ತರಿಗೆ ಮುಕ್ತವಾಗಿರಲಿದೆ. ಹಾಗೇ, ಬೆಂಗಳೂರಿನ ಪ್ರಸಿದ್ಧ ಚರ್ಚ್.. ಸೇಂಟ್ ಮೇರಿ ಚರ್ಚ್ ಕೂಡ ಇಂದು ತೆರೆದಿದೆ.

ದೇವಸ್ಥಾನ, ಮಸೀದಿಗಳಲ್ಲಿ ಮಾಸ್ಕ್ ತೊಟ್ಟ ಭಕ್ತರಿಂದ ಪ್ರಾರ್ಥನೆ ಶುರು! ದೇವಸ್ಥಾನ, ಮಸೀದಿಗಳಲ್ಲಿ ಮಾಸ್ಕ್ ತೊಟ್ಟ ಭಕ್ತರಿಂದ ಪ್ರಾರ್ಥನೆ ಶುರು!

ಬೆಂಗಳೂರಿನ ಶಿವಾಜಿನಗರದಲ್ಲಿ ಹಲವು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಹೀಗಿದ್ದರೂ, ಕಂಟೇನ್ಮೆಂಟ್ ಝೋನ್ ವ್ಯಾಪ್ತಿಗೆ ಒಳಪಡದ ಪ್ರಖ್ಯಾತ ಸೇಂಟ್ ಮೇರಿ ಚರ್ಚ್ ಅನ್ನು ಇವತ್ತು ಓಪನ್ ಮಾಡಲಾಗಿದೆ.

ಸಾಮಾಜಿಕ ಅಂತರದೊಂದಿಗೆ ಪ್ರಾರ್ಥನೆ

ಸಾಮಾಜಿಕ ಅಂತರದೊಂದಿಗೆ ಪ್ರಾರ್ಥನೆ

ಸುಮಾರು ಎರಡು ತಿಂಗಳ ನಂತರ ಸೇಂಟ್ ಮೇರಿ ಚರ್ಚ್ ಅನ್ನು ತೆರೆಯಲಾಗಿದ್ದು, ಬೆಳ್ಳಂಬೆಳಗ್ಗೆಯೇ ಚರ್ಚ್ ಗೆ ಆಗಮಿಸಿದ ಹಲವರು ಪ್ರಾರ್ಥನೆ ಸಲ್ಲಿಸಿದರು.

ಚರ್ಚ್ ನಲ್ಲಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಪ್ರಾರ್ಥನೆ ಸಲ್ಲಿಸುವ ವೇಳೆ ಎಲ್ಲರೂ ಸೋಷಿಯಲ್ ಡಿಸ್ಟೆನ್ಸ್ ಮೇನ್ಟೇನ್ ಮಾಡಿದ್ದರು.

ಸೇಂಟ್ ಮೇರಿ ಚರ್ಚ್ ಕುರಿತು:

ಸೇಂಟ್ ಮೇರಿ ಚರ್ಚ್ ಕುರಿತು:

ಕರ್ನಾಟಕದಲ್ಲಿರುವ ಅತ್ಯಂತ ಪುರಾತನ ಚರ್ಚ್ ಗಳ ಪೈಕಿ ಶಿವಾಜಿನಗರದ ಸೇಂಟ್ ಮೇರಿ ಚರ್ಚ್ ಕೂಡ ಒಂದು. 17ನೇ ಶತಮಾನದಲ್ಲಿ ಸೇಂಟ್ ಮೇರಿ ಚರ್ಚ್ ಅನ್ನು ನಿರ್ಮಾಣ ಮಾಡಿರುವ ಬಗ್ಗೆ ಉಲ್ಲೇಖವಿದೆ. ಕರ್ನಾಟಕದಲ್ಲಿ ಮೈನರ್ ಬೆಸಿಲಿಕಾ ಸ್ಟೇಟಸ್ ಪಡೆದ ಮೊದಲ ಚರ್ಚ್ ಇದೇ.{ಚಿತ್ರಕೃಪೆ: ಎ.ಎನ್.ಐ}

ಅದ್ದೂರಿಯಾಗಿ ಆಚರಿಸಲಾಗುವ ಸೇಂಟ್ ಮೇರಿ ಫೀಸ್ಟ್

ಅದ್ದೂರಿಯಾಗಿ ಆಚರಿಸಲಾಗುವ ಸೇಂಟ್ ಮೇರಿ ಫೀಸ್ಟ್

ಮದರ್ ಮೇರಿ ಹುಟ್ಟಿದ ದಿನ.. 'ಸೇಂಟ್ ಮೇರಿ ಫೀಸ್ಟ್' ಅನ್ನು ಈ ಚರ್ಚ್ ನಲ್ಲಿ 10 ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಸೆಪ್ಟೆಂಬರ್ ನಲ್ಲಿ ಸೇಂಟ್ ಮೇರಿ ಫೀಸ್ಟ್ ನಡೆಯಲಿದ್ದು, ಸುಮಾರು 5 ಲಕ್ಷ ಜನ ಸೇರುತ್ತಾರೆ.


ಈ ಚರ್ಚ್ ನಲ್ಲಿ ಪ್ರತಿದಿನ ಇಂಗ್ಲೀಷ್, ಕನ್ನಡ ಮತ್ತು ತಮಿಳಿನಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.{ಚಿತ್ರಕೃಪೆ: ಎ.ಎನ್.ಐ}

ದೇವಸ್ಥಾನ, ಮಸೀದಿಗಳಲ್ಲಿ ಮಾಸ್ಕ್ ತೊಟ್ಟ ಭಕ್ತರಿಂದ ಪ್ರಾರ್ಥನೆ ಶುರು!ದೇವಸ್ಥಾನ, ಮಸೀದಿಗಳಲ್ಲಿ ಮಾಸ್ಕ್ ತೊಟ್ಟ ಭಕ್ತರಿಂದ ಪ್ರಾರ್ಥನೆ ಶುರು!

ಕರ್ನಾಟಕದಲ್ಲಿ ಕೊರೊನಾ ವೈರಸ್

ಕರ್ನಾಟಕದಲ್ಲಿ ಕೊರೊನಾ ವೈರಸ್

ಕರ್ನಾಟಕದಲ್ಲಿ ಈವರೆಗೂ 5452 ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈವರೆಗೂ 2132 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದರೆ, 61 ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ಸದ್ಯ ಸಕ್ರಿಯ ಸೋಂಕಿತರ ಸಂಖ್ಯೆ 3257ಗೆ ಏರಿಕೆಯಾಗಿದೆ.

English summary
Devotees visit St Mary's Church in Shivajinagar to offer prayers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X