ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ನೇಹಿತ ಲಾಲೂ ಜೈಲಿಗೆ ಹೋಗಿದ್ದಕ್ಕೆ ದೇವೇಗೌಡ ವಿಷಾದ

By Manjunatha
|
Google Oneindia Kannada News

ಬೆಂಗಳೂರು, ಡಿಸೆಂಬರ್ 23: ಮೇವು ಹಗರಣ ಪ್ರಕರಣದಲ್ಲಿ ಯಾವುದೇ ಕಾರ್ಪೊರೇಟ್ ಹೌಸ್‌ಗಳಿರಲಿಲ್ಲ ಹಾಗಾಗಿ ಲಾಲೂ ಪ್ರಸಾದ್ ಯಾದವ್ ಜೈಲಿಗೆ ಹೋಗಬೇಕಾಯಿತು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಹೇಳಿದರು.

ಮೇವು ತಿಂದ ಲಾಲೂ ಪ್ರಸಾದ್ ಯಾದವ್ ದೋಷಿಮೇವು ತಿಂದ ಲಾಲೂ ಪ್ರಸಾದ್ ಯಾದವ್ ದೋಷಿ

ತಮ್ಮ ಹಳೆಯ ಗೆಳೆಯ ಲಾಲೂ ಪ್ರಸಾದ್ ಯಾದವ್ ಜೈಲು ಪಾಲಾದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಇದ್ದಿದ್ದರೆ ಲಾಲೂ ಬಚಾವಾಗುತ್ತಿದ್ದರೇನೊ ಎಂದು ಮಾರ್ಮಿಕವಾಗಿ ನುಡಿದರು.

Devegowda talks about Lalu Prasad Yadav's Fooder scam verdict

ಪ್ರಾದೇಶಿಕ ಪಕ್ಷಗಳನ್ನು ರಾಷ್ಟ್ರೀಯ ಪಕ್ಷಗಳು ಅವಕಾಶಕ್ಕೆ ಮಾತ್ರ ಬಳಸಿಕೊಳ್ಳುವುದಕ್ಕೆ ಈ ಪ್ರಕರಣ ಉದಾಹರಣೆ ಎಂದ ದೇವೇಗೌಡರು ಲಾಲೂ ಪ್ರಸಾದ್ ಯಾದವ್ ಕಾಂಗ್ರೆಸ್ ಸರ್ಕಾರದಲ್ಲಿ 5 ವರ್ಷ ರೈಲ್ವೇ ಸಚಿವರಾಗಿದ್ದರು, ಆದರೆ ಈಗ ಜೈಲು ಪಾಲಾಗಿದ್ದಾರೆ ಎಂದರು.

ಲಾಲೂನ ಜೈಲಿಗೆ ಕರೆದೊಯ್ದ 900 ಕೋಟಿ ಮೇವು ಹಗರಣದ ಟೈಮ್ ಲೈನ್ಲಾಲೂನ ಜೈಲಿಗೆ ಕರೆದೊಯ್ದ 900 ಕೋಟಿ ಮೇವು ಹಗರಣದ ಟೈಮ್ ಲೈನ್

ಯಾರನ್ನೂ ನೇರ ಹೊಣೆಗಾರರನ್ನಾಗಿ ಮಾಡದೇ ಮಾತನಾಡಿದ ದೇವೇಗೌಡ ಅವರು ಯಾವ ರಾಷ್ಟ್ರೀಯ ಪಕ್ಷಗಳೂ ಸ್ವಚ್ಛವಾಗಿಲ್ಲ, ಎಲ್ಲ ರಾಷ್ಟ್ರೀಯ ಪಕ್ಷಗಳೂ ಪ್ರಾದೇಶಿಕ ಪಕ್ಷಗಳನ್ನು ಬಳಸಿಕೊಂಡು ಬಿಸಾಡಿವೆ ಎಂದರು.

English summary
JDS National President HD Devegowda said that if any corporate houses involved in Lalu's case then the verdict would different. He lambasted on national parties and said all national parties used and thrown regional parties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X