ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿ ಸಮಸ್ಯೆ ಪರಿಹರಿಸಲು ದೇವೇಗೌಡ ಮನವಿ

|
Google Oneindia Kannada News

ಮಂಗಳೂರು, ಏಪ್ರಿಲ್ 01: ಕರಾವಳಿ ಸಮಸ್ಯೆ ಪರಿಹರಿಸಲು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮನವಿ ಮಾಡಿದ್ದಾರೆ. ಕೇರಳ ಗಡಿ ದಿಗ್ಭಂದನ ಹಿನ್ನೆಲೆ ಸಾಕಷ್ಟು ದಾರುಣ ಘಟನೆಗಳು ನಡೆಯುತ್ತಿವೆ ಎಂದು ಆ ಬಗ್ಗೆ ದೇವೇಗೌಡರು ಪತ್ರ ಬರೆದಿದ್ದಾರೆ.

ಕರ್ನಾಟಕ‌ದ ಕೇರಳ ಗಡಿ ದಿಗ್ಬಂಧನ ಹಿನ್ನೆಲೆ ಸಾಕಷ್ಟು ದಾರುಣ ಘಟನೆಗಳು ನಡೆಯುತ್ತಿವೆ. ಕಾಸರಗೋಡು ಮತ್ತು ಮಂಗಳೂರು ನಡುವಣ ಆಂಬುಲೆನ್ಸ್ ನಿರ್ಬಂಧದಿಂದ ಓರ್ವ ಮಹಿಳೆ ಇದರಿಂದ ಮೃತಪಟ್ಟಿದ್ದಾಳೆ. ಗರ್ಭಿಣಿ ಮಹಿಳೆಗೆ ಚೆಕ್‌ಪೋಸ್ಟ್‌ನಲ್ಲಿ ಹೆರಿಗೆಯಾಗಿತ್ತು.

ಕೊರೊನಾ ಇಲ್ಲವೆಂದು ವೈದ್ಯರು ಹೇಳಿದರೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಕೊರೊನಾ ಇಲ್ಲವೆಂದು ವೈದ್ಯರು ಹೇಳಿದರೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಕ್ಯಾನ್ಸರ್, ಹೃದಯ ಹಾಗೂ ಮೂತ್ರಪಿಂಡ ತುರ್ತು ಚಿಕಿತ್ಸೆ ಮತ್ತು ಉನ್ನತ ಚಿಕಿತ್ಸೆಗೆ ಕಾಸರಗೋಡಿನ ಬಹುತೇಕರು ಮಂಗಳೂರನ್ನೇ ಅವಲಂಬಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆಂಬುಲೆನ್ಸ್ ಗಳನ್ನು ನಿಲ್ಲಿಸುವುದು ಅಮಾನವೀಯ. ಹೀಗಾಗಿ ಆಂಬುಲೆನ್ಸ್ ಗಳ ಓಡಾಟಕ್ಕೆ ಬಿಡಬೇಕು. ಇದಕ್ಕಾಗಿ ವಿಶೇಷ ಅಧಿಕಾರಿಯನ್ನು ನೇಮಿಸಬೇಕು.

Deve gowda Wrote A Letter To Solve Karavali Problem

ಕರಾವಳಿಯಲ್ಲಿ ಮೀನು ಜನರ ನಿತ್ಯದ ಆಹಾರ. ಹೀಗಾಗಿ ಮೀನುಗಾರಿಕೆ ಮೇಲಿನ ನಿಷೇಧ ಹಿಂಪಡೆಯಬೇಕು. ಸಾಮಾಜಿಕ ಅಂತರದೊಂದಿಗೆ ಮೀನು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಈ ಕುರಿತು ವಿಧಾನ ಪರಿಷತ್ ಸದಸ್ಯ ಸಮಸ್ಯೆ ಗಮನಕ್ಕೆ ತಂದಿದ್ದಾರೆ ಹಾಗೂ ಕೇರಳ ಸರ್ಕಾರಕ್ಕೂ ಪತ್ರ ಬರೆದಿದ್ದೇನೆ ಪತ್ರದ ಮೂಲಕ ಕರಾವಳಿ ಸಮಸ್ಯೆ ಪರಿಹರಿಸಲು ದೇವೇಗೌಡರು ಮನವಿ ಮಾಡಿದ್ದಾರೆ.

English summary
Ex prime minister Devegowda wrote a latter to solve karavli problem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X