• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅವರದ್ದೇ ಸರ್ಕಾರವಿದ್ದರೂ ಬಿಜೆಪಿ ನಾಯಕರ ರಾಜಕೀಯ ಚೆಲ್ಲಾಟ: ದೇವೇಗೌಡ

|

ಬೆಂಗಳೂರು, ಆಗಸ್ಟ್ 13: ಅಧಿಕಾರಿಗಳು ಒಂದು ಜವಾಬ್ದಾರಿಯಿಂದ ಕಾರ್ಯ ನಿರ್ವಹಣೆ ಮಾಡುವ ಸಂದರ್ಭದಲ್ಲಿ ರಾಜಕೀಯ ಚೆಲ್ಲಾಟವಾಡಬಾರದು ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹೇಳಿದರು.

   ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲೇ ಮುಳುಗಿಹೋಗಿದೆ | Oneindia Kannada

   ಪುಲಕೇಶಿನಗರದಲ್ಲಿ ನಡೆದ ಘಟನೆ ಕುರಿತು ಮಾತನಾಡಿರುವ ಅವರು ಸಿಎಂ ಯಡಿಯೂರಪ್ಪ ಅವರು ಒಂದು ಹೇಳಿಕೆ ಕೊಟ್ಟ ಮೇಲೆ ಮುಗೀತು, ಕಾಂಗ್ರೆಸ್‌ನಲ್ಲಿ ಅಧ್ಯಕ್ಷರು ಮಾತನಾಡಿದ ಮೇಲೆ ಮುಗಿಯುತು ಬಿಜೆಪಿಯ ಏಳೆಂಟು ನಾಯಕರು ಏಳೆಂಟು ರೀತಿಯಲ್ಲಿ ಮಾತನಾಡುವ ಅಗತ್ಯವಿಲ್ಲ ಎಂದರು.

   ಕಾರ್ಮಿಕ ಕಾಯಿದೆ ತಿದ್ದುಪಡಿ ವಿರೋಧಿ ಹೋರಾಟಕ್ಕೆ ದೇವೇಗೌಡ ಸಿದ್ಧತೆ

   ಎಲ್ಲರೂ ಮನಸಿಗೆ ಬಂದ ಹಾಗೆ ಮಾತಾಡುತ್ತಾರೆ, ಮನಸಿಗೆ ಬಂದ ಹಾಗೆ ಎಲ್ಲಾ ಮಾತಾಡುವುದಕ್ಕೆ ಹೋಗಬಾರದು, ಈಗಾಗಲೇ ಮೂರು ಕಾಯ್ದೆಗಳನ್ನು ರಾಜ್ಯ ಸರ್ಕಾರ ಹೊರ ತಂದಿದೆ.

   ಆ ಕಾಯ್ದೆಗಳನ್ನು ನಮ್ಮ ಪಕ್ಷ ಉಗ್ರವಾಗಿ ವಿರೋಧ ಮಾಡುತ್ತದೆ, ಈ ಕಾಯ್ದೆ ವಿರುದ್ದ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ, ನಾವು ನಾಳೆ ಹಾಸನದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ, ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರುವುದಿಲ್ಲ.

   ಹೆಚ್ ಕೆ ಕುಮಾರಸ್ವಾಮಿ , ರೇವಣ್ಣ ಸೇರಿದಂತೆ ಹಲವು ನಾಯಕರು ಭಾಗಿಯಾಗ್ತಾರೆ, ಇದು ಸಂಕೇತಿಕ ಪ್ರತಿಭಟನೆ ,ಧಿಕ್ಕಾರ,ಘೋಷಣೆ ಕೂಗಿ ಪ್ರತಿಭಟನೆ ಮಾಡಲ್ಲ,ಆದರೆ ಡಿಸಿ ಅವರಿಗೆ ಪ್ರತಿಭಟನೆಯ ಮನವಿ ಪತ್ರ ಕೊಡುತ್ತೇವೆ ಎಂದು ವಿವರಿಸಿದರು.

    ಭೂ ಸುಧಾರಣಾ ಕಾಯ್ದೆ ತಿದ್ದುಪಡಿ

   ಭೂ ಸುಧಾರಣಾ ಕಾಯ್ದೆ ತಿದ್ದುಪಡಿ

   ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿಚಾರ, ರಾಜ್ಯಾದ್ಯಂತ ನಾಳೆಯಿಂದ ನಮ್ಮ ಎಲ್ಲಾ ಶಾಸಕರು ಹಾಸನದಲ್ಲಿ ಸಂಕೇತಿಕ ಪ್ರತಿಭಟನೆ ಮಾಡುತ್ತೇವೆ, ಕೊರೊನಾ ಇರುವ ಕಾರಣ ಸರ್ಕಾರದ ನಿಯಮಾವಳಿಯಂತೆ ಪ್ರತಿಭಟನೆ ಮಾಡುತ್ತೇವೆ, ಆ ಪ್ರತಿಭಟನೆಯಲ್ಲಿ ನಾವೆಲ್ಲ ಇರುತ್ತೇವೆ, 200 ಜನರು ಸೇರಿ ಪ್ರತಿಭಟನೆ ಮಾಡುತ್ತೇವೆ. ಸಾಮಾಜಿಕ ಅಂತರದಲ್ಲಿ ಒಂದು ಕಡೆ ಕೂತು ಪ್ರತಿಭಟನೆ ಮಾಡುತ್ತೇವೆ, ಅವರಿಗೆ ಆಗಿರುವ ನೋವು, ಅನಾಹುತಕ್ಕೆ ಪರಿಹಾರ ಸರ್ಕಾರ ಕೊಡಿಸಬೇಕು ಎಂದರು

    ಮೊದಲ ಬಾರಿಗೆ ಒಬ್ಬ ಶಾಸಕರ ಮೇಲೆ ಹಲ್ಲೆ ನಡೆದಿದೆ

   ಮೊದಲ ಬಾರಿಗೆ ಒಬ್ಬ ಶಾಸಕರ ಮೇಲೆ ಹಲ್ಲೆ ನಡೆದಿದೆ

   ಮೊದಲ ಬಾರಿಗೆ ಒಬ್ಬ ಶಾಸಕರ ಮೇಲೆ ಹಲ್ಲೆ ನಡೆದಿದೆ. ಪಾಪ ಅವರು ಯಾರಿಗೆ ಅನ್ಯಾಯ ಮಾಡಿದ್ದರು. ನಮ್ಮ ಪಕ್ಷದಲ್ಲಿ ಇದ್ದರು, ಹೋದರು ಅದು ಬೇರೆ ವಿಚಾರ ಅವರಿಗೆ ಆಗಿರುವ ಅನ್ಯಾಯವನ್ನು ಸರ್ಕಾರ ಬರಿಸಿಕೊಡಬೇಕು ಎಂದು ಒತ್ತಾಯಿಸಿದರು.

    ಕೊಡಗಿಗೆ ನಿಖಿಲ್ ಹೋಗಿದ್ದಾರೆ

   ಕೊಡಗಿಗೆ ನಿಖಿಲ್ ಹೋಗಿದ್ದಾರೆ

   ಕೊಡಗಿನಲ್ಲಿ ಪ್ರವಾಹ ಸಂಭವಿಸಿದ್ದು, ನಿಖಿಲ್ ಕುಮಾರಸ್ವಾಮಿ ಅಲ್ಲಿಗೆ ತೆರಳಿದ್ದಾರೆ.ಮಹಾರಾಷ್ಟ್ರದಿಂದ ನೀರು ಹೆಚ್ಚು ಬರುತ್ತಿದೆ ಮಲಪ್ರಭಾ, ಕೃಷ್ಣಾ , ವರದಾ ನದಿ ಯಿಂದ ನೀರು ಹೇಚ್ಚಾಗಿದೆ. ಭೀಮಾ, ದೂದ್ ನಿಂದ ಕೂಡ ನೀರು ಹೆಚ್ಚಾಗಿದೆ.ಪ್ರಾಣಿಗಳು, ಮನುಷ್ಯರು ಕೊಟ್ಟಿಕೊಂಡಿ ಹೋಗಿವೆ ಬೆಳೆ ನಾಶ ಆಗಿದೆ , ಪ್ರಧಾನಿ ಅವರು ರಾಜ್ಯದ ಸಚಿವರ ಜೊತೆಗೆ ವೀಡಿಯೋ ಸಂವಾದ ನಡೆಸಿದ್ದಾರೆ. ಇದರಿಂದ ನನಗೆ ತೃಪ್ತಿ ಇಲ್ಲ ಪ್ರತಿ ತಾಲ್ಲೂಕಿಗೆ ಹೋಗಿ ಅಧಿಕಾರಿಗಳು ವರದಿ ಕೊಡಬೇಕು ಎಂದರು.

    ಕೇಂದ್ರದ ತಂಡಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕು

   ಕೇಂದ್ರದ ತಂಡಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಬೇಕು

   ಈ ರೀತಿಯಲ್ಲಿ ರಾಷ್ಟ್ರೀಯ ವಿಪತ್ತು ಸಂಭವಿಸಿದಾಗ ಕೇಂದ್ರದ ತಂಡಗಳು ಬರಬೇಕು ,ಕೃಷ್ಣಾ, ಕಾವೇರಿ, ನೇತ್ರಾವತಿ ಬೇಸಿನ್ ಗೆ ತಂಡಗಳು ಬರಬೇಕು, ಹಿಂದೆ ಕೊಡುತ್ತೇವೆ ಅಂದಿದ್ದು ಕೊಟ್ಟಿಲ್ಲ, ಕೇಂದ್ರ ನಿರ್ಲಕ್ಷ್ಯ ಮಾಡಿದೆ. ನಾನು ರಾಜ್ಯ ಸಭೆಯಲ್ಲಿ ಇದರ ಬಗ್ಗೆ ಮಾತಾಡುತ್ತೇನೆ, ರಾಜ್ಯ ಘಟಕ ಅಧ್ಯಕ್ಷ ಜೊತೆಗೆ ಮಾಹಿತಿ ಕಲೆ ಹಾಕುತ್ತಿದ್ದೇನೆ , ನಮ್ಮ ಎಲ್ಲಾ ಶಾಸಕರ ಜೊತೆಗೆ ಮಾಹಿತಿ ಕಲೆ ಹಾಕುತ್ತಿದ್ದೇನೆ ಎಲ್ಲಾ ಕಡೆ ನಮ್ಮ ಶಾಸಕರು, ನಾಯಕರು ಕೆಲಸ ಮಾಡುತ್ತಿದ್ದಾರೆ ಎಂದು ದೇವೇಗೌಡರು ಹೇಳಿದರು.

   English summary
   Former Prime Minister HD Deve Gowda slams BJP leaders over communal comments.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X