ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವೇಗೌಡ-ಜಮೀರ್ ಅಹ್ಮದ್ ಭೇಟಿ: ಬೆಂಗಳೂರು ಉತ್ತರ ಕ್ಷೇತ್ರದ ಚರ್ಚೆ

|
Google Oneindia Kannada News

Recommended Video

lok sabha elections 2019: ದೇವೇಗೌಡ-ಜಮೀರ್ ಅಹ್ಮದ್ ಭೇಟಿ

ಬೆಂಗಳೂರು, ಮಾರ್ಚ್‌ 20: ಇಂದು ಬೆಳಿಗ್ಗೆ ಹಳೆ ದ್ವೇಷಿಗಳಾದ ಜಮೀರ್ ಅಹ್ಮದ್ ಹಾಗೂ ದೇವೇಗೌಡ ಅವರು ಹಠಾತ್ ಭೇಟಿ ಮಾಡಿ ಚುನಾವಣೆ ಕುರಿತು ಮಾತನ್ನಾಡಿದ್ದಾರೆ.

ಜಮೀರ್ ಅಹ್ಮದ್ ಅವರು ಇಂದು ಬೆಳಿಗ್ಗೆ ದೇವೇಗೌಡ ಅವರ ಪದ್ಮನಾಭನಗರ ನಿವಾಸಕ್ಕೆ ಭೇಟಿ ಕೊಟ್ಟು ಬಹು ಸಮಯ ಚರ್ಚೆ ಮಾಡಿದರು.

ದೇವೇಗೌಡರಿಗೆ ಗಂಗೆ ಶಾಪ ಇದೆ, ತುಮಕೂರಲ್ಲಿ ಸ್ಪರ್ಧಿಸಿದರೆ ಸೋಲು ಖಚಿತ: ಸುರೇಶ್ ಗೌಡ ದೇವೇಗೌಡರಿಗೆ ಗಂಗೆ ಶಾಪ ಇದೆ, ತುಮಕೂರಲ್ಲಿ ಸ್ಪರ್ಧಿಸಿದರೆ ಸೋಲು ಖಚಿತ: ಸುರೇಶ್ ಗೌಡ

ದೇವೇಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ಈ ಇಬ್ಬರು ನಾಯಕರು ಚರ್ಚೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಮೈತ್ರಿಯು ಗೆಲ್ಲುವ ಸಾಧ್ಯತೆಗಳ ಬಗ್ಗೆ ಇಬ್ಬರೂ ಸುಧೀರ್ಘ ಚರ್ಚೆ ನಡೆಸಿದ್ದಾರೆ.

Deve Gowda and Zameer Ahmed met today discussed about elections

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಜಮೀರ್ ಅಹ್ಮದ್ 'ದೇವೇಗೌಡ ಅವರು, ಜೆಡಿಎಸ್‌ಗೆ ನೀಡಲಾಗಿರುವ ಎಂಟು ಕ್ಷೇತ್ರದಲ್ಲಿ ಯಾವ ಕ್ಷೇತ್ರದಿಂದಲಾದರೂ ಸ್ಪರ್ಧಿಸಲು ಸ್ವತಂತ್ರ್ಯರು' ಎಂದು ಹೇಳಿದ್ದಾರೆ.

ತುಮಕೂರು ವಾಪಸ್ ಕೊಡಿ: ದೇವೇಗೌಡರಿಗೆ ಪರಮೇಶ್ವರ್ ಮನವಿತುಮಕೂರು ವಾಪಸ್ ಕೊಡಿ: ದೇವೇಗೌಡರಿಗೆ ಪರಮೇಶ್ವರ್ ಮನವಿ

ದೇವೇಗೌಡ ಅವರನ್ನು ಬೆಂಗಳೂರು ಉತ್ತರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ದೇವೆ, ಅವರು ಬೆಂಗಳೂರು ಉತ್ತರದಿಂದ ಚುನಾವಣೆಗೆ ನಿಂತರೆ ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದು ಜಮೀರ್ ಅವರು ಹೇಳಿದ್ದಾರೆ.

ಡ್ಯಾನಿಶ್ ಆಲಿ ರಾಜೀನಾಮೆ ಹಿಂದಿನ ಪಕ್ಕಾ 'ಪ್ಲ್ಯಾನ್ಡ್' ರಾಜಕೀಯವೇ ಬೇರೆ ಡ್ಯಾನಿಶ್ ಆಲಿ ರಾಜೀನಾಮೆ ಹಿಂದಿನ ಪಕ್ಕಾ 'ಪ್ಲ್ಯಾನ್ಡ್' ರಾಜಕೀಯವೇ ಬೇರೆ

ಜೆಡಿಎಸ್ ವಿರುದ್ಧ ಅಡ್ಡಮತದಾನ ಮಾಡಿ ಪಕ್ಷ ತ್ಯಜಿಸಿ ಕಾಂಗ್ರೆಸ್‌ ಸೇರಿದ್ದ ಜಮೀರ್ ಅವರ ವಿರುದ್ಧ ವಿಧಾನಸಭೆ ಚುನಾವಣೆ ಸಮಯದಲ್ಲಿ ದೇವೇಗೌಡ ಅವರು ಪುಂಖಾನುಪುಂಖವಾಗಿ ವಾಗ್ದಾಳಿ ನಡೆಸಿದ್ದರು. ಜಮೀರ್ ಅವರು ಸಹ ದೇವೇಗೌಡ ಅವರ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. ಆದರೆ ರಾಜಕೀಯದ ಅನಿವಾರ್ಯತೆಯಿಂದಾಗಿ ಈಗ ಮತ್ತೆ ಇವರಿಬ್ಬರೂ ಒಂದಾಗಿದ್ದಾರೆ.

English summary
JDS leader Deve Gowda and congress minister Zameer Ahmed met today and discussed about Bengaluru north constituency and candidature of Deve Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X