ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಸಿ ಗಣಪತಿ ಭಟ್ಟರಿಗೆ ಗೌರವ ಡಾಕ್ಟರೇಟ್‌

By ಗೋಪಾಲಕೃಷ್ಣ ಹೆಗಡೆ, ಉಪನ್ಯಾಸಕರು, ದಾಂಡೇಲಿ
|
Google Oneindia Kannada News

 Devaru Bhat
ಬೆಂಗಳೂರು, ಜು.3: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ದೇವರು ಗಣಪತಿ ಭಟ್ಟ ಇವರ ಸಮಾಜ ಸೇವೆಯನ್ನು ಗುರುತಿಸಿ ಕೊಲಂಬೋ ಔಷಧ ಪೂರಕ ಮುಕ್ತ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪದವಿಯನ್ನು ನೀಡಿ ಗೌರವಿಸಿದೆ.

ಗ್ರಾಮೀಣ ಭಾಗದಲ್ಲಿ ವಾಸಿಸುವ ಬಡವರ ಜೀವನವನ್ನು ಹಸನುಗೊಳಿಸುವಲ್ಲಿ ದೇವರು ಗಣಪತಿ ಭಟ್ಟ ಅವರು ಪಟ್ಟ ಶ್ರಮವನ್ನು ಗುರುತಿಸಿ ಮುಕ್ತ ವಿಶ್ವವಿದ್ಯಾಲಯ ಮಲೇಶಿಯಾದ ಕೌಲಾಲಂಪುರದ ಇಸ್ಥಾನಾ ಹೊಟೇಲಿನಲ್ಲಿ ಮೇ.4ರಂದು ಜರುಗಿದ ಸಮಾರಂಭದಲ್ಲಿ ಗಣಪತಿ ಭಟ್ಟ ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು.

ದೇವರು ಗಣಪತಿ ಭಟ್ಟ ಕಿರು ಪರಿಚಯ:
ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ರಾಜಕೀಯ ಹಾಗೂ ಪ್ರಚಾರದ ಹಿನ್ನೆಲೆಯಲ್ಲಿ ಹಲವರು ಮಾಧ್ಯಮಗಳಲ್ಲಿ ಪ್ರಚಾರದ ಮೂಲಕ ಹಾಗೂ ವೇದಿಕೆಯ ಭರ್ಜರಿ ಭಾಷಣಗಳ ಮೂಲಕ ತಮ್ಮ ಹೆಸರು ಮತ್ತು ಪ್ರಸಿದ್ಧಿಯನ್ನು ವೃದ್ಧಿಸಿಕೊಳ್ಳುತ್ತಾರೆ. ಆದರೆ ಶ್ರೀ ದೇವರು ಭಟ್ಟರು ಇದಕ್ಕೆ ಅಪವಾದ ವೆಂಬಂತೆ 'ವನಸುಮದಂತೆ' ತನ್ನಷ್ಟಕ್ಕೆ ತಾನು ಜನರ ಅಭಿವೃದ್ಧಿಗಾಗಿ ಸಹಾಯ ಮಾಡುತ್ತಾ, ತಮ್ಮ ಪ್ರಾಂಜಲ ಹಾಗೂ ಪ್ರಾಮಾಣಿಕ ಸೇವೆಯನ್ನು ತಳಮಟ್ಟದಿಂದ ಮಾಡುತ್ತಾ ವಿಕಸನಗೊಂಡಿದ್ದಾರೆ. ಬಡವರ ಸೇವೆಗಾಗಿ ತಮ್ಮೆಲ್ಲ ಐಷಾರಾಮೀ ಕಾರ್ಪೋರೇಟ ಹುದ್ದೆಯನ್ನು ತ್ಯಾಗಮಾಡಿ ಶಿರಸಿಗೆ ಬಂದು ಸಮಾಜ ಸೇವೆ ಮಾಡುತ್ತಿದ್ದಾರೆ.

ದೇವರು ಭಟ್ಟರು ಶಿರಸಿ ತಾಲೂಕಿನ ಬರೂರ ಗ್ರಾಮದ ನರಸಿಂಹ ದೇವಾಲಯದ ಅರ್ಚಕ ಕುಟುಂಬದಲ್ಲಿ 1953 ರ ಅಗಸ್ಟ 20 ರಂದು ಕೀರ್ತಿಶೇಷ ಗಣಪತಿ ಭಟ್ಟ ಮತ್ತು ಸೀತಾ ದಂಪತಿಗಳ ಮಗನಾಗಿ ಜನಿಸಿದರು. ಬರೂರಿನಲ್ಲಿಯೇ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿದರು. ನಂತರ ದೊಡ್ಡಪ್ಪ ಕಡತೋಕಾ ಭಟ್ರಮನೆ ರಾಮಭಟ್ಟರ ಗರಡಿಯಲ್ಲಿ ಪಳಗುತ್ತಾ ಪದವಿ ಪೂರ್ವ ಶಿಕ್ಷಣವನ್ನು ಜನತಾ ವಿದ್ಯಾಲಯ ಕಡತೋಕಾದಲ್ಲಿ ಮುಗಿಸಿದರು. ನಂತರ ಶಿರಸಿಯ ಎಂ.ಇ.ಎಸ್. ವಿದ್ಯಾಲಯದಲ್ಲಿ ಪದವಿ ಓದನ್ನು ಮುಂದುವರಿಸಿದರು. ಓದುವಾಗಲೇ ತಮ್ಮ ಕೌಟುಂಬಿಕ ನೆರವಿಗಾಗಿ ಬರೂರ ಸೊಸೈಟಿಯಲ್ಲಿ ಗುಮಾಸ್ತನಾಗಿ ಸೇವೆ ಸಲ್ಲಿಸಿದರು. ಹಾಗೂ ರಜಾ ಕಾಲದಲ್ಲಿ ಬಟ್ಟೆ ಅಂಗಡಿ / ಹೊಟೆಲುಗಳಲ್ಲಿ ಲೆಕ್ಕ ಬರೆಯುವ ಕೆಲಸವನ್ನು ಮಾಡುತ್ತಿದ್ದರು. ವಾಣಿಜ್ಯ ವಿಷಯದಲ್ಲಿ ಪದವಿ ಪಡೆದು ಬಳ್ಳಾರಿಯ ಒಂದು ಖಾಸಗಿ ಅದಿರು ಕಂಪನಿಯಲ್ಲಿ ಸಹಾಯಕರಾಗಿ ಸೇವೆ ಪ್ರಾರಂಭಿಸಿ ತಮ್ಮ ಕಾರ್ಯಕ್ಷಮತೆಯಿಂದ ಕಂಪನಿಯ ಪ್ರಬಂಧಕರಾಗಿ, ನಿರ್ದೇಶಕರಾಗಿ ಮುಖ್ಯ ಕಾರ್ಯನಿರ್ವಾಹಕರಾಗಿ ಬೆಳೆದರು.

ತಮ್ಮ ಸಂಘಟನೆಯಲ್ಲಿ ಕೆಲಸ ಮಾಡುವ 300 ಕ್ಕೂ ಹೆಚ್ಚು ಕಾರ್ಮಿಕರ ಕಾರ್ಯದಕ್ಷತೆ, ಉತ್ಪಾದನಾ ಶಕ್ತಿ ಹಾಗೂ ಆತ್ಮ ವಿಶ್ವಾಸ ಹೆಚ್ಚಿಸಲು ಎಲ್ಲ ಉದ್ಯೋಗಿಗಳಿಗೆ ಸಮೂಹ ವಿಮೆ, ವೈದ್ಯಕೀಯ ಸೌಲಭ್ಯ, ಆಸ್ಪತ್ರೆಗೆ ದಾಖಲಿಸುವಿಕೆ, ಹಾಗೂ ಪ್ರೊವಿಡೆಂಟ ಫಂಡ್‌ ಸೌಲಭ್ಯವನ್ನು ಒದಗಿಸಿದರು.

ಎಷ್ಟೋ ಅಡೆತಡೆಗಳ ಮಧ್ಯೆಯೂ ಧೃತಿಗೆಡದೇ ತಮ್ಮ ಕಂಪನಿಯ ಸ್ಥಿರತೆ, ಸಾಮಾಜಿಕ ಜವಾಬ್ದಾರಿ ಹಾಗೂ ಆರ್ಥಿಕ ಭದ್ರತೆ ಹಾಗೂ ಕಂಪನಿಯ ವಾರ್ಷಿಕ ಆದಾಯ ಮಟ್ಟವನ್ನು ಹೆಚ್ಚಿಸುವಲ್ಲಿ ಭಟ್ಟರು ಹಲವು ಕಾರ್ಯಕ್ರಮ ಜಾರಿಗೊಳಿಸುವಲ್ಲಿ ಧೈರ್ಯ ಮತ್ತು ದೂರದರ್ಶಿತ್ವವನ್ನು ತೋರಿಸಿದರು. ಕಂಪನಿಯಲ್ಲಿ ಕಾರ್ಯನಿರ್ವಹಿಸುವಾಗ ಅಲ್ಲಿಯ ಉದ್ಯೋಗಿಗಳಿಗೆ ಅವರ ಕಷ್ಟ ಕಾಲದಲ್ಲಿ ಜಾತಿ-ಮತ-ವಯಸ್ಸಿನ ಭೇದ ನೋಡದೇ ಎಲ್ಲರಿಗೂ, ಎಲ್ಲಾ ಕಾಲದಲ್ಲಿಯೂ ವೈಯ್ಯಕ್ತಿಕವಾಗಿಕೂಡ ಸಹಾಯ ಹಸ್ತ ನೀಡಿದವರು.

ದೇವರು ಭಟ್ಟರು ಸ್ವಯಂ ಪ್ರೇರಿತ ಸಮುದಾಯ ಮತ್ತು ಸಮಾಜ ಸೇವೆಯಲ್ಲಿ ಬಲವಾದ ನಂಬಿಕೆಯನ್ನಿಟ್ಟವರು ಹಾಗೂ ಈ ನಿಟ್ಟಿನಲ್ಲಿ ಜನರಿಗೆ ಅವರೊಂದು ಆದರ್ಶ. ತಮ್ಮ ಇಡೀ ಜೀವನವನ್ನು ಸಮಾಜದ ಬಡ ಮತ್ತು ಕೆಳವರ್ಗದ ಜನಸೇವೆಗೆ ಮುಡಿಪಾಗಿಟ್ಟು ಜನರಲ್ಲಿ ದುರಾಸೆ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಪ್ರಜ್ಞೆಯನ್ನು ಜಾಗೃತಗೊಳಿಸಿದ್ದಾರೆ.

ಕಡತೋಕಾದ ಗೀತಾರನ್ನು ವಿವಾಹವಾದ ಬಳಿಕ ಗಣಪತಿ ಭಟ್ಟ ಚೈತ್ರಕಾಲದ ದಾಂಪತ್ಯದಲ್ಲಿ ಚೈತ್ರಾಳನ್ನು ಮಗಳನ್ನು ಪಡೆದು ಸದ್ಯ ಮಗಳು ಮದುವೆಯಾಗಿ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗದಲ್ಲಿದ್ದಾರೆ.

English summary
The Open University for Complimentary Medicines (Medicina Alternativa, ALMA ATA 1962), Colombo, Sri Lanka has awarded Devaru Bhat with a prestigious degree of “Honorary Doctorate (Social Worker)” on May 04, 2014 during the proceedings of World Congress of Integrated Medicines held at Istana Hotel, Kuala Lampur, Malaysia. This goes to show that a very simple human being who has worked hard and helped poor people in small rural villages with no political affiliation or connection also has a chance to get recognition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X