• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಸದ ಕ್ವಾರಿಯಾಗಿದ್ದ ಪ್ರದೇಶ ಈಗ ವಾಜಪೇಯಿ ಕ್ರೀಡಾಂಗಣ!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 14: ಮಾಡುವ ಮನಸ್ಸಿದ್ದರೆ ಕಸವನ್ನು ರಸವನ್ನಾಗಿಸಬಹುದು ಎಂಬುದಕ್ಕೆ ತಾಜಾ ಉದಾಹರಣೆ ಬೊಮ್ಮನಹಳ್ಳಿಯಲ್ಲಿ ಇಂದು ಉದ್ಘಾಟನೆಯಾದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ.

ಕಸದ ಕ್ವಾರಿಯಾಗಿದ್ದ ಈ ಪ್ರದೇಶವನ್ನು ಅತ್ಯುತ್ತಮ ಕಲಾವಿದನಂತೆ ಕಲ್ಲಿನ ಪಾರ್ಕ್ ಹಾಗೂ ಅಂತರಾಷ್ಟ್ರೀಯ ಗುಣಮಟ್ಟದ ಬಾಸ್ಕೆಟ್ ಬಾಲ್ ಮತ್ತು ಸ್ಕೇಟಿಂಗ್ ಟ್ರ್ಯಾಕ್ ಹೊಂದಿರುವ ಕ್ರೀಡಾಂಗಣವಾಗಿ ಪರಿವರ್ತಿಸುವಲ್ಲಿ ಬೊಮ್ಮನಹಳ್ಳಿ ಬಿಬಿಎಂಪಿ ಸದಸ್ಯ ರಾಮ್ ಮೊಹನ ರಾಜು ಅವರ ಶ್ರಮ ಅಪಾರ ಎಂದು ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಶ್ಲಾಘಿಸಿದರು.

ಬೆಂಗಳೂರು : ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪರಿಚಯಬೆಂಗಳೂರು : ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪರಿಚಯ

ನಗರದ ಬೊಮ್ಮನಹಳ್ಳಿ ವಾರ್ಡಿನಲ್ಲಿ ಕಸದ ಕ್ವಾರಿಯನ್ನು ಸ್ವಚ್ಚಗೊಳಿಸಿ ನಿರ್ಮಿಸಿರುವ ಅದ್ಭುತವಾದ ಕ್ರೀಡಾಂಗಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೊಮ್ಮನಹಳ್ಳಿಯಲ್ಲಿ ನೂರಾರು ಮರಗಳ ಸ್ಥಳಾಂತರ : ಅನಂತಕುಮಾರ್ಬೊಮ್ಮನಹಳ್ಳಿಯಲ್ಲಿ ನೂರಾರು ಮರಗಳ ಸ್ಥಳಾಂತರ : ಅನಂತಕುಮಾರ್

ಗಾಂಧಿ ಜಯಂತಿಯ ಸ್ವಚ್ಚತಾ ಹೀ ಅಭಿಯಾನದ ಅಂಗವಾಗಿ ಕಳೆದ ವರ್ಷ ಇದಕ್ಕೆ ಶಂಕುಸ್ಥಾಪನೆಯನ್ನು ಮಾಡಲಾಗಿತ್ತು. ತಮ್ಮ ವ್ಯಾಪ್ತಿಯ ಪ್ರದೇಶದ ಜನರಿಗೆ ಏನನ್ನಾದರೂ ಒಳ್ಳೆಯದನ್ನು ಮಾಡಲೇ ಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ ರಾಮ್ ಮೋಹನ ರಾಜು, ಈ ಪ್ರದೇಶದಲ್ಲಿ ಈಗಾಗಲೇ ಅತ್ಯುತ್ತಮ ಸ್ಟೋನ್ ಪಾರ್ಕ್‍ನ್ನು ನಿರ್ಮಿಸಿದ್ದಾರೆ.

ಬೆಂಗಳೂರಲ್ಲಿ ದೇಶದ ಮೊದಲ ಬಂಡೆ ಉದ್ಯಾನವನಬೆಂಗಳೂರಲ್ಲಿ ದೇಶದ ಮೊದಲ ಬಂಡೆ ಉದ್ಯಾನವನ

ಈಗ ಇನ್ನುಳಿದ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಿರುವುದು ಬಹಳ ಸಂತಸದ ವಿಷಯ ಎಂದರು. ಇಂತಹ ಜನಪ್ರತಿನಿಧಿಗಳ ಕಾರ್ಯ ಕೇವಲ ಬಿಜೆಪಿ ಪಕ್ಷಕ್ಕೆ ಅಷ್ಟೇ ಅಲ್ಲದೆ, ಜನಪ್ರತಿನಿಧಿಗಳಿಗೂ ಒಳ್ಳೆಯ ಹೆಸರನ್ನು ತಂದುಕೊಡುತ್ತದೆ ಎಂದರು.

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮಾತನಾಡಿ

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮಾತನಾಡಿ

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮಾತನಾಡಿ, ಬೊಮ್ಮನಹಳ್ಳಿ ವಾರ್ಡ್‍ನ ಕಾರ್ಪೊರೇಟರ್ ಮೋಹನ್ ರೆಡ್ಡಿ ಅವರ ಕನಸಿನ ಕೂಸು ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣ. ಇದು ಇದುವರೆಗೆ ಡಂಪಿಂಗ್‍ಯಾರ್ಡ್ ಆಗಿತ್ತು. ಸುತ್ತಮುತ್ತಲಿನ ಪ್ರದೇಶದ ಕಸವೆಲ್ಲಾ ಇಲ್ಲಿ ರಾಶಿ ಬೀಳುತ್ತಿತ್ತು. ಇದರಿಂದ ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿತ್ತು. ಇದನ್ನು ಗಮನಿಸಿದ ಬೊಮ್ಮನಹಳ್ಳಿ ವಾರ್ಡ್‍ನ ಕಾರ್ಪೊರೇಟರ್ ಮೋಹನ್ ರಾಜು ಅವರು ಈ ಜಾಗವನ್ನು ಸಾರ್ವಜನಿಕರ ಅನುಕೂಲಕ್ಕೆ ಬಳಸುವಂತೆ ಮಾಡುವ ನಿರ್ಧಾರಕ್ಕೆ ಬಂದರು. ಅದರ ಪರಿಣಾಮವೇ ಈ ಸುಸಜ್ಜಿತ ಕ್ರೀಡಾಂಗಣ ತಲೆ ಎತ್ತಲು ಸಾಧ್ಯವಾಯಿತು.

ಈ ಬಗ್ಗೆ ಮಾತನಾಡಿದ ಮೋಹನ್ ರಾಜು

ಈ ಬಗ್ಗೆ ಮಾತನಾಡಿದ ಮೋಹನ್ ರಾಜು

ಈ ಬಗ್ಗೆ ಮಾತನಾಡಿದ ಮೋಹನ್ ರಾಜು ಅವರು, ಡಂಪಿಂಗ್ ಯಾರ್ಡ್ ನಿಂದ ಜನಸಾಮಾನ್ಯರಿಗೆ ಆಗುತ್ತಿದ್ದ ತೊಂದರೆಯನ್ನು ತಪ್ಪಿಸಿದಂತಾಗಿದೆ. ಇಷ್ಟೇ ಅಲ್ಲ, ಹಗಲು ರಾತ್ರಿ ಇಲ್ಲಿ ಬಾಸ್ಕೆಟ್ ಬಾಲ್ ಆಡಲು ಮತ್ತು ಸ್ಕೇಟಿಂಗ್ ಅಭ್ಯಾಸ ಮಾಡಲು ನಮ್ಮ ಕ್ಷೇತ್ರದ ಉತ್ಸಾಹಿ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇದರ ಸದ್ಬಳಕೆ ಮಾಡಿಕೊಂಡು ನಮ್ಮ ಕ್ರೀಡಾಪಟುಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗುವಂತಾಗಬೇಕೆಂದು ಹಾರೈಸಿದರು.

ಈ ಕ್ರೀಡಾಂಗಣ ನಿರ್ಮಾಣಕ್ಕೆ ಕೇಂದ್ರ ಸಚಿವರಾದ ಅನಂತಕುಮಾರ್, ಆರ್.ಅಶೋಕ ಮತ್ತು ಬೊಮ್ಮನಹಳ್ಳಿ ಶಾಸಕರಾದ ಎಂ.ಸತೀಶ್ ರೆಡ್ಡಿ ಅವರು ಧನಸಹಾಯ ಮಾಡಿದ್ದಾರೆಂದೂ ಅವರು ತಿಳಿಸಿದರು.

ಕೇಂದ್ರ ಸರಕಾರದಿಂದ ಅಗತ್ಯ ಅನುದಾನ

ಕೇಂದ್ರ ಸರಕಾರದಿಂದ ಅಗತ್ಯ ಅನುದಾನ

ಕೇಂದ್ರ ಸಚಿವ ಅನಂತಕುಮಾರ್ ಅವರ ಸಹಾಯವನ್ನು ಇಲ್ಲಿ ವಿಶೇಷವಾಗಿ ಸ್ಮರಿಸಲೇಬೇಕು. ಏಕೆಂದರೆ ಈ ಯೋಜನೆ ಮನಸ್ಸಿನಲ್ಲಿ ಮೂಡಿದಾಗಿಂದಲೂ ಕೂಡಾ ಕೈ ಹಿಡಿದು ದಾರಿ ತೋರಿಸಿದ್ದಾರೆ. ಅಲ್ಲದೆ, ಕೇಂದ್ರ ಸರಕಾರದಿಂದ ಅಗತ್ಯ ಅನುದಾನವನ್ನೂ ಒದಗಿಸಿಕೊಟ್ಟಿದ್ದಾರ ಎಂದರು.

ಬೊಮ್ಮನಹಳ್ಳಿ ವಾರ್ಡಿನ ದೇವರಚಿಕ್ಕನಹಳ್ಳಿಯಲ್ಲಿ ಬಾಸ್ಕೆಟ್‍ಬಾಲ್ ಕೋರ್ಟ್ ಮತ್ತು ಸ್ಕೇಟಿಂಗ್ ಟ್ರ್ಯಾಕ್ ಅನ್ನು ಒಳಗೊಂಡ ಸುಸಜ್ಜಿತವಾದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣವನ್ನು ಲೋಕಾರ್ಪಣೆ ಮಾಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಬೊಮ್ಮನಹಳ್ಳಿಯ ಜನಪ್ರಿಯ ಶಾಸಕರಾದ ಎಂ.ಸತೀಶ್ ರೆಡ್ಡಿ ವಹಿಸಿದ್ದರು ಮತ್ತು ಬಿಬಿಎಂಪಿಯಲ್ಲಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರು ಮುಖ್ಯಅತಿಥಿಗಳಾಗಿ ಆಗಮಿಸಿದ್ದರು.

ಕಸವನ್ನು ರಸವನ್ನಾಗಿಸಬಹುದು

ಕಸವನ್ನು ರಸವನ್ನಾಗಿಸಬಹುದು

ಬೊಮ್ಮನಹಳ್ಳಿ ಬಿಬಿಎಂಪಿ ಸದಸ್ಯ ರಾಮ್ ಮೊಹನ ರಾಜು ಅವರ ಶ್ರಮ ಅಪಾರ ಇಲ್ಲಿ ಎದ್ದು ಕಾಣುತ್ತದೆ. ಈ ಮುಂದೆ ಕಸದ ರಾಶಿಯನ್ನು ಬಂದೆ ಉದ್ಯಾನವನ್ನಾಗಿಸಿದ್ದರು.

ಕಸದ ಸಮಸ್ಯೆಗೊಂದು ಪರಿಹಾರ ಕಂಡುಹಿಡಿಯಬೇಕೆಂದು ಯೋಚಿಸುತ್ತಿದ್ದ ಮೋಹನ್ ರಾಜು ಸಿ.ಆರ್. ಅವರಿಗೆ ಹತ್ತಾರು ಯೋಜನೆಗಳು ನೆನಪಾದವು. ಆ ಯೋಜನೆಗಳ ಪೈಕಿ ಈ ಬಂಡೆ ಉದ್ಯಾನವನವೂ ಒಂದಾಗಿತ್ತು. ಆದರೆ, ಇದಕ್ಕೆ ಪೂರಕವಾಗಿ ಕೆಲಸ ಮಾಡಬಲ್ಲಂತಹವರನ್ನು ಹುಡುಕುವುದು ಹೇಗೆ ಎಂಬುದನ್ನೂ ಚಿಂತಿಸಿದರು. ಮಾಡಿದರೆ ದೇಶದಲ್ಲೇ ಅಪರೂಪವಾದ ಮತ್ತು ಮೊದಲು ಎನ್ನುವಂತಹ ಯೋಜನೆಯನ್ನು ಮಾಡಬೇಕೆಂದು ಗಂಭೀರ ಆಲೋಚನೆ ಮಾಡಿದರು. ಆಗಲೇ, ಈ ಬಂಡೆ ಉದ್ಯಾನವನದ ಪರಿಕಲ್ಪನೆ ಅವರ ತಲೆಗೆ ಹೋಗಿ ಬಂಡೆ ಉದ್ಯಾನವನ ನಿರ್ಮಿಸುವ ಯೋಜನೆಯನ್ನು ಅಂತಿಮಗೊಳಿಸಿದರು.

English summary
A quarry pit where garbage used to be dumped has now been turned into a playground at Devarachikkanahalli near Arakere RTO office in Bommanahalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X