ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವನಹಳ್ಳಿ ಕ್ಷೇತ್ರ: ವಿವಿಧ ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 24: ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸೋಮವಾರ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾಗಿ ಎಲ್.ಎನ್.ನಾರಾಯಣಸ್ವಾಮಿ ಮತ್ತು ಬಿ.ರಾಮಚಂದ್ರ ನಾಮಪತ್ರ ಸಲ್ಲಿಸಿದ್ದಾರೆ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ವೆಂಕಟಸ್ವಾಮಿ 03 ನಾಮಪತ್ರಗಳನ್ನು, ಎಂ.ಇ.ಪಿ ಪಾರ್ಟಿಯಿಂದ ಕೆ.ರಾಮಚಂದ್ರಪ್ಪ ನಾಮಪತ್ರ ಸಲ್ಲಿಸಿದ್ದಾರೆ.

2264 ಅಭ್ಯರ್ಥಿಗಳು ಕಣದಲ್ಲಿ, ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ2264 ಅಭ್ಯರ್ಥಿಗಳು ಕಣದಲ್ಲಿ, ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಜೊ.ನ ಮಲ್ಲಿಕಾರ್ಜುನ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಜೆ.ನರಸಿಂಹಸ್ವಾಮಿ ಮೂರು ನಾಮಪತ್ರಗಳನ್ನು ಹಾಗೂ ಜನತಾದಳ ಸಂಯುಕ್ತ ಪಕ್ಷದಿಂದ ಎಸ್. ಪುರುಷೋತ್ತಮ್ , ಜನತಾದಳ (ಜಾತ್ಯತೀತ) ಪಕ್ಷದಿಂದ ಬಿ. ಮುನೇಗೌಡ, ಕರ್ನಾಟಕ ರಾಜ್ಯ ಜನತಾದಳ(ಮೌಲ್ಯಧಾರಿತ) ಪಕ್ಷದಿಂದ ಡಾ.ಕೆ.ಎನ್ ವೆಂಕಟೇಶ್ ನಾಮಪತ್ರ ಸಲ್ಲಿಸಿದ್ದಾರೆ.

Devanahalli: Congress candidate Venkataswamy files nomination

ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯಥಿಯಾಗಿ ಡಿ.ಸಿ.ಎನ್.ನಾಗರಾಜು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎನ್.ನಾಗರಾಜು (ಎಂ.ಟಿ.ಬಿ) ಮೂರು ನಾಮಪತ್ರಗಳನ್ನು ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ರಾಜೇಶ್ ಟಿ.ಕೆ ಮತ್ತು ರವೀಶ.ಟಿ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

English summary
Including congress candidate Venkataswamy and many have filed nomination in Devanahalli assembly constituency on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X