ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಲಸಿಕೆ ಪಡೆಯಲು ಒಟಿಪಿ ಬರದಿದ್ದರೇ ಕೈಯಲ್ಲೇ ನಮೂದಿಸಬಹುದು

|
Google Oneindia Kannada News

ಬೆಂಗಳೂರು,ಜನವರಿ 18: ಕೊರೊನಾ ಲಸಿಕೆ ಪಡೆಯಲು ಒಂದೊಮ್ಮೆ ಒಟಿಪಿ ಜನರೇಟ್ ಆಗದಿದ್ದರೇ, ಕೈಯಲ್ಲಿಯೇ ನಮೂದಿಸಬಹುದು ಎಂದು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಲಸಿಕೆ ಪಡೆಯುವ ಫಲಾನುಭವಿಗಳಿಗೆ ಒಟಿಪಿ ಬರಲು ನೆಟ್‌ವರ್ಕ್ ಸಮಸ್ಯೆ ಆಗದಂತೆ ಇಂಟರ್‌ನೆಟ್‌ ಸಂಪರ್ಕದ ವ್ಯವಸ್ಥೆ ಮಾಡಲಾಗಿದೆ. ಒಂದು ವೇಳೆ ನೆಟ್‌ವರ್ಕ್ ಸಮಸ್ಯೆಯಾದರೆ ಫಲಾನುಭವಿಗಳ ಮಾಹಿತಿಯನ್ನು ಕೈಯ್ಯಲ್ಲಿ ಬರೆದು ನಂತರ ಕೋವಿನ್‌ ಪೋರ್ಟಲ್‌ನಲ್ಲಿ ದಾಖಲಿಸಿಕೊಳ್ಳ ಬಹುದಾಗಿದೆ ಎಂದು ಹೇಳಿದ್ದಾರೆ.

ಬೇಡಪ್ಪಾ ಬೇಡ ಲಸಿಕೆ: ಕೊವ್ಯಾಕ್ಸಿನ್ ಬಗ್ಗೆ ಜನರಲ್ಲಿ ಭಯವೇಕೆ?ಬೇಡಪ್ಪಾ ಬೇಡ ಲಸಿಕೆ: ಕೊವ್ಯಾಕ್ಸಿನ್ ಬಗ್ಗೆ ಜನರಲ್ಲಿ ಭಯವೇಕೆ?

ಲಸಿಕೆ ಪಡೆಯುವ ಫಲಾನುಭವಿಗಳು ಕೋವಿನ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ನೋಂದಣಿ ಆದ ಬಳಿಕ ಲಸಿಕೆ ನೀಡುವ ದಿನ ಖಾತರಿಪಡಿಸಲಾಗುವುದು.

Details Can Be Entered Manually If OTP Not Generated For Vaccine: BBMP Commissioner

ಶನಿವಾರ ಆರು ಕೇಂದ್ರಗಳಲ್ಲಿ ಕೇವಲ 475 ಜನರಿಗೆ ಮಾತ್ರ ಮೆಸೇಜ್ ಬಂದಿದ್ದು, ಈ ಪೈಕಿ 375 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಅವರು ಹೇಳಿದರು. ಘೋಷಿಸಿದ 1.82 ಲಕ್ಷ ಲಸಿಕೆಗಳಲ್ಲಿ 1,05,000 ಲಸಿಕೆಗಳು ಬಂದಿವೆ ಮತ್ತು ಅವುಗಳನ್ನು ದಾಸಪ್ಪ ಆಸ್ಪತ್ರೆಯಲ್ಲಿ ಸಂಗ್ರಹಿಸಲಾಗಿದೆ. ಒಂದು ದಿನ ಮೊದಲು ಅವುಗಳನ್ನು ಕೋಲ್ಡ್ ಸ್ಟೋರೇಜ್ ಪೆಟ್ಟಿಗೆಗಳೊಂದಿಗೆ ವಿಶೇಷ ವಾಹನಗಳಲ್ಲಿ ನಿಗದಿ ಪಡಿಸಿದ ಸ್ಥಳಗಳಿಗೆ ಕಳುಹಿಸಲಾಗುತ್ತದೆ ಎಂದು ಹೇಳಿದ್ದಾರೆ.

ಗುರುತಿನ ಚೀಟಿ ಪರಿಶೀಲಿಸಿ ಆಫ್‌ಲೈನ್‌ ಮೂಲಕ ದಾಖಲು ಮಾಡಿಕೊಂಡು ಲಸಿಕೆ ನೀಡಲಾಗುವುದು. ಬಳಿಕ ಆನ್‌ಲೈನ್‌ನಲ್ಲಿ ದಾಖಲು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಮಣಿಪಾಲ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಅಭಿಯಾನ ಪರಿಶೀಲಿಸಿ ಮಾತನಾಡಿದ ಅವರು, ಎಲೆಕ್ಟ್ರಾನಿಕ್ ಸಂವಹನದ ಮೂಲಕ ಜನರನ್ನು ಸಂಪರ್ಕ ಮಾಡದ ಕಾರಣ ಜನರನ್ನು ಬಿಟ್ಟುಬಿಡಬಾರದು, ಲಸಿಕೆ ನೀಡುವಾಗ ಪಡೆದುಕೊಳ್ಳುವವರ ಸಂಪೂರ್ಣ ಮಾಹಿತಿಯನ್ನು ಕೈಯ್ಯಲ್ಲಿ ಬರೆದು ಕೊಳ್ಳಬೇಕು ಎಂದು ವಿವರಿಸಿದ್ದಾರೆ.

ಅಲ್ಲದೆ, ಒಂಬತ್ತು ವೈದ್ಯಕೀಯ ಕಾಲೇಜುಗಳಲ್ಲಿ 28,000 ಲಸಿಕೆ ನೀಡಲಾಗುವುದು. ಆರೋಗ್ಯ ಅಧಿಕಾರಿಗಳಿಗೆ ಟಾರ್ಗೆಟ್ ನೀಡಲಾಗಿದ್ದು, ಅದನ್ನು ಸಾಧ್ಯವಾದಷ್ಟು ಜನರಿಗೆ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.

Recommended Video

ಬೆಂಗಳೂರು: ಸಿಲಿಕಾನ್‌‌ ಸಿಟಿಯ ಈ ಆಸ್ಪತ್ರೆಗಳಲ್ಲಿ ಇಂದಿನಿಂದ ಕೊರೊನಾ ವ್ಯಾಕ್ಸಿನೇಶನ್‌ ಆರಂಭ | Oneindia Kannada

English summary
Bruhat Bengaluru Mahanagara Palike (BBMP) Commissioner N Manjunatha Prasad on Sunday said that even if people do not receive the generated OTP before their vaccination, details can be entered manually.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X