ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜುಲೈ ತಿಂಗಳಿನಲ್ಲಿ ಹೆಚ್ಚಿನ ಸಾವು, ಆದರೂ ಸರ್ಕಾರ ನಿರಾಕರಿಸಿದ್ದೇಕೆ?

|
Google Oneindia Kannada News

ಬೆಂಗಳೂರು, ಆ. 8: ಕೊರೊನಾ ವೈರಸ್ ಸಂಕಷ್ಟದ ಮಧ್ಯೆ ಬೆಂಗಳೂರಿನ ಜನರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ. ಕಳೆದ ಜುಲೈ ತಿಂಗಳಿನಲ್ಲಿ ಏಕಾಏಕಿ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಕಳೆದ ಜುಲೈ ತಿಂಗಳಿನಲ್ಲಿ ಹೆಚ್ಚಿನ ಸಾವುಗಳು ಬೆಂಗಳೂರಿನಲ್ಲಿ ಸಂಭವಿಸಿವೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ.

Recommended Video

Kerala Rains : ವರುಣನ ಅಬ್ಬರಕೆ ಬೆಚ್ಚಿಬಿದ್ದ ದೇವರ ನಾಡು | Oneindia Kannada

ಬಿಬಿಎಂಪಿಯ ಜನನ ಮತ್ತು ಮರಣ ನೋಂದಣಾಧಿಕಾರಿ ಕಚೇರಿ ದಾಖಲೆಗಳ ಮಾಹಿತಿಯಂತೆ ಕಳೆದ ಜುಲೈ ತಿಂಗಳಿನಲ್ಲಿ ವಿವಿಧ ಕಾರಣಗಳಿಂದ 6,477 ಜನರು ಮೃತಪಟ್ಟಿದ್ದಾರೆ. ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಸಂಭವಿಸಿದ್ದ ಮರಣಗಳಿಗೆ ಹೋಲಿಕೆ ಮಾಡಿದರೆ ಪ್ರತಿಶತಃ 22.7 ರಷ್ಟು ಈ ವರ್ಷದ ಜುಲೈ ತಿಂಗಳಿನಲ್ಲಿ ಹೆಚ್ಚು ಮರಣಗಳು ಬೆಂಗಳೂರಿನಲ್ಲಿ ಸಂಭವಿಸಿವೆ ಎಂಬ ಮಾಹಿತಿಯಿದೆ. ಇದೆಲ್ಲಾ ಕೊರೊನಾ ವೈರಸ್ ಪರಿಣಾಮ ಎಂಬ ಚರ್ಚೆ ನಡೆದಿದೆ.

ಆದರೆ ಇದಕ್ಕೆ ಕೊರೊನಾ ವೈರಸ್ ಕಾರಣವಲ್ಲ ಎಂದು ರಾಜ್ಯ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಅಧಿಕೃತ ಮಾಹಿತಿ ಕೊಟ್ಟಿದೆ. ಜುಲೈ ತಿಂಗಳಿನಲ್ಲಿ ಹೆಚ್ಚಿನ ಮರಣಗಳು ವರದಿಯಾಗಿದ್ದರೂ ಕೊರೊನಾ ವೈರಸ್ ಕಾರಣವಲ್ಲ ಎಂದು ಸಾಂಖ್ಯಿಕ ಇಲಾಖೆಯ ಅಧಿಕೃತ ಮಾಹಿತಿ ಹೇಳುತ್ತಿದೆ. ಹಾಗಾದ್ರೆ ನಿಜವಾಗಿಯೂ ಆಗಿದ್ದೇನು? ಮುಂದಿದೆ ಮಾಹಿತಿ.

ಕೊರೊನಾ ಭಯ

ಕೊರೊನಾ ಭಯ

ಕಳೆದ ಆರು ತಿಂಗಳುಗಳಲ್ಲಿ ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿಗೆ 1,64,924 ಜನರು ತುತ್ತಾಗಿದ್ದು, ಸೋಂಕಿನಿಂದ 2,998 ಮೃತಪಟ್ಟಿದ್ದಾರೆ. ಇದಕ್ಕೆ ಬೆಂಗಳೂರಿನ ಸ್ಥಿತಿಯೂ ಹೊರತಾಗಿಲ್ಲ. ಬೆಂಗಳೂರಿನಲ್ಲಿ ಈವರೆಗೆ 69,572 ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, 1200 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಕಳೆದ ಜುಲೈ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಏಕಾಏಕಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ಕೋವಿಡ್-19 ಕಾರಣವೆಂದೂ, ಕೊರೊನಾ ವೈರಸ್ ಶಂಕಿತರು ಮೃತಪಟ್ಟಾಗ ಸರ್ಕಾರದ ಗಮನಕ್ಕೆ ತರದೇ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗಿತ್ತು. ಹೀಗಾಗಿ ಬೆಂಗಳೂರಿನಲ್ಲಿ ಮತ್ತೆ ಕೊರೊನಾ ವೈರಸ್ ಬಗ್ಗೆ ಆತಂಕ ಶುರುವಾಗಿತ್ತು. ಆದರೆ ಆ ಸುದ್ದಿಯನ್ನು ಸರ್ಕಾರ ತಳ್ಳಿಹಾಕಿದ್ದು, ಒಟ್ಟಾರೆ ಮರಣ ಪ್ರಮಾಣದ ಬಗ್ಗೆ ದಾಖಲೆ ಬಿಡುಗಡೆ ಮಾಡಿದೆ.

ಕಳೆದ ಜುಲೈ ತಿಂಗಳ ಹೋಲಿಕೆ

ಕಳೆದ ಜುಲೈ ತಿಂಗಳ ಹೋಲಿಕೆ

ಕೊರೊನಾ ವೈರಸ್, ಸಹಜ, ಅನಾರೋಗ್ಯ, ಅಪಘಾತ, ಆತ್ಮಹತ್ಯೆ ಸೇರಿದಂತೆ ಇನ್ನಿತರ ಕಾರಣಗಳಿಂದ ಬೆಂಗಳೂರಿನಲ್ಲಿ ಈ ವರ್ಷದ ಜುಲೈ ತಿಂಗಳಿನಲ್ಲಿ ಆಗಿರುವ ಸಾವಿನ ಸಂಖ್ಯೆ, ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಆಗಿದ್ದ ಸಾವುಗಳ ಸಂಖ್ಯೆಗಿಂತ ಹೆಚ್ಚಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ 2019ರ ಜುಲೈ ತಿಂಗಳಿನಲ್ಲಿ ವಿವಿಧ ಕಾರಣಗಳಿಂದ 5,228 ಜನರು ಮೃತಪಟ್ಟಿದ್ದರು. ಅದೇ ಈ ಜುಲೈನಲ್ಲಿ 6,477 ಜನರ ಮರಣ ಪ್ರಕರಣಗಳು ನೋಂದಣಿಯಾಗಿವೆ. ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಕೆ ಮಾಡಿದರೆ, ಈ ವರ್ಷ ಜುಲೈನಲ್ಲಿ ಮೃತರ ನೋಂದಣಿ ಸಂಖ್ಯೆ ಹೆಚ್ಚಾಗಿದೆ. ಆದರೆ ಸಾವಿನ ಸಂಖ್ಯೆ ಹೆಚ್ಚಾಗಿಲ್ಲ ಎಂದು ರಾಜ್ಯ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ನಿರ್ದೇಶಕರು ಮಾಹಿತಿ ಕೊಟ್ಟಿದ್ದಾರೆ.

ನೋಂದಣಿ ವಿಳಂಬ

ನೋಂದಣಿ ವಿಳಂಬ

ಜನನ ಮರಣ ನೋಂದಣಿ ಕಾನೂನಿನಂತೆ ಜನನ ಮತ್ತು ಮರಣ ಸಂಭವಿಸಿದ 21 ದಿನಗಳೊಳಗೆ ನೋಂದಣಿ ಮಾಡಿಸಲು ಅವಕಾಶವಿದೆ. ಈ ನಿಗದಿತ ಅವಧಿಯೊಳಗೆ ನೋಂದಣಿ ಮಾಡಿಸಲು ಆಗದಿದ್ದರೆ, ತಡವಾಗಿ ನೋಂದಣಿ ಮಾಡಿಸಲೂ ನಿಯಮಾನುಸಾರ ಅವಕಾಶವಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಜುಲೈ ತಿಂಗಳಿನಲ್ಲಿ ಮರಣ ಪ್ರಮಾಣ ಹೆಚ್ಚಾದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಲಾಕ್‌ಡೌನ್, ಕರ್ಫ್ಯೂ ಜೊತೆಗೆ ಸಾರಿಗೆ ಸೌಲಭ್ಯ ಆಗ ಇಲ್ಲದ್ದರಿಂದ ಮಾರ್ಚ್‌, ಏಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ ಸಂಭವಿಸಿದ್ದ ಸಾವುಗಳು ನಿಗದಿತ ಅವಧಿಯೊಳಗೆ ನೋಂದಣಿ ಆಗಿಲ್ಲ. ಜುಲೈ 2020ರಲ್ಲಿ ಸಂಭವಿಸಿರುವ ಮರಣಗಳೊಂದಿಗೆ, ಹಿಂದೆ ಸಂಭವಿಸಿದ್ದ ಸಾವು ನೋಂದಣಿ ಆಗಿವೆ. ಹೀಗಾಗಿ ಜುಲೈ ತಿಂಗಳಿನಲ್ಲಿ ಹೆಚ್ಚಿನ ಸಂಖ್ಯೆ ಕಂಡು ಬಂದಿದೆ.

ಆದರೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇಕಡಾ 4ರಷ್ಟು ಕಡಿಮೆ ಜನರು ಮರಣಹೊಂದಿದ್ದಾರೆ ಎಂದು ರಾಜ್ಯ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಅಧಿಕೃತ ಮಾಹಿತಿ ಕೊಟ್ಟಿದೆ.

ಕಡಿಮೆ ಮರಣ

ಕಡಿಮೆ ಮರಣ

ಬೆಂಗಳೂರಿನಲ್ಲಿ ಜನವರಿ 2019 ರಿಂದ ಜುಲೈ 2019ರವರೆಗೆ ಹಾಗೂ ಜನವರಿ 2020 ರಿಂದ ಜುಲೈ 2020 ರವರೆಗೆ ನೋಂದಣಿಯಾಗಿರುವ ಮರಣಗಳ ವಿವರವನ್ನು ರಾಜ್ಯ ಸಾಂಖ್ಯಿಕ ಇಲಾಖೆ ಒದಗಿಸಿದೆ. ಆ ಪ್ರಕಾರ ಕೊರೊನಾ ವೈರಸ್ ಸಂಕಷ್ಟದ ಹೊರತಾಗಿಯೂ ಶೇಕಡಾ 4 ರಷ್ಟು ಮರಣ ಪ್ರಮಾಣ ಕಡಿಮೆಯಾಗಿದೆ.

ಜನವರಿ ಜನೆವರಿ 2019 ರಿಂದ ಜುಲೈ 2019ರವರೆಗೆ ನೋಂದಣಿಯಾದ ಒಟ್ಟು ಮರಣಗಳ ಸಂಖ್ಯೆ 37,004 ಹಾಗೇ ಜನವರಿ 2020 ರಿಂದ ಜುಲೈ 2020 ರವರೆಗೆ ನೋಂದಣಿಯಾಗಿರುವ ಮರಣಗಳ ಸಂಖ್ಯೆ 35,307. ಹೀಗಾಗಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದ್ರೆ ಒಟ್ಟು 1,697 ಕಡಿಮೆ ಜನರು ಸಾವನ್ನಪ್ಪಿದ್ದಾರೆ. ಶೇಕಡಾವಾರು ಶೇಕಡಾ 4.6 ರಷ್ಟು ಕಡಿಮೆಯಿದೆ.

ಹೀಗಾಗಿ ಒಟ್ಟಾರೆ ಮರಣ ಪ್ರಮಾಣದಲ್ಲಿ ಯಾವುದೇ ಹೆಚ್ಚಿನ ವ್ಯತ್ಯಾಸವಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಕೊರೊನಾ ವೈರಸ್‌ ಹೊರತಾಗಿಯೂ ಮರಣದ ಸಂಖ್ಯೆ ಕಡಿಮೆಯಿದೆ. ಹೀಗಾಗಿ ಬೆಂಗಳೂರಿನ ಜನರಿಗೆ ಕೊರೊನಾ ವೈರಸ್ ಅಷ್ಟಾಗಿ ಕಾಡಿಲ್ಲ ಎಂಬುದು ಅಧಿಕೃತ ದಾಖಲೆಯಿಂದಲೇ ಕಂಡು ಬಂದಿದೆ.

English summary
The number of deaths registered in Bengaluru from January 2019 to July 2019 and from January 2020 to July 2020 is provided by the State Statistical Department. Thus, despite the coronavirus affliction, the mortality rate decreased by 4 percent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X