ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಸಿಎಂ ಹುದ್ದೆ; ಕಾಲಾಯ ತಸ್ಮೈ ನಮಃ ಎಂದ ಸವದಿ

|
Google Oneindia Kannada News

ಬೆಂಗಳೂರು, ಜ. 28: ವಿಧಾನ ಪರಿಷತ್ ಚುನಾವಣೆಗೆ ದಿನಾಂಕವಂತೂ ಘೋಷಣೆ ಆಗಿದೆ. ನಾನೇನೂ ಸನ್ಯಾಸಿ ಅಲ್ಲ. ಕಾಲಾಯ ತಸ್ಮೈ ನಮಃ. ಆದರೆ ಪಕ್ಷದ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನಮ್ಮ ಪಕ್ಷದ ಮುಖಂಡರು ತೀರ್ಮಾನ ಮಾಡುತ್ತಾರೆ ಎಂದು ಡಿಸಿಎಂ ಲಕ್ಷ್ಣಣ ಸವದಿ ಹೇಳಿದ್ದಾರೆ. ವಿಕಾಸಸೌಧದಲ್ಲಿ ಡಿಸಿಎಂ ಸವದಿ ಮಾತನಾಡಿದ್ದಾರೆ. ಪರಿಷತ್‌ನ ಬೇರೆ ಸದಸ್ಯರು ಡಿಸಿಎಂ ಲಕ್ಷ್ಣಣ ಸವದಿ ಅವರಿಗಾಗಿ ತ್ಯಾಗ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ ನಾನು ಭವಿಷ್ಯ ಹೇಳಲು ಹೋಗಲ್ಲ ಎಂದು ಸವದಿ ಉತ್ತರಿಸಿದ್ದಾರೆ. ಏನಾಗುತ್ತದೆ ಎಂದು ನಿಮ್ಮಂತೆಯೇ ನನಗೂ ಕುತೂಹಲ ಇದೆ ಎಂದು ಒಗಟಾಗಿ ಲಕ್ಷ್ಮಣ ಸವದಿ ಮಾತನಾಡಿದ್ದಾರೆ.

ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೆ ಬಿಜೆಪಿ ಪಾಳೆಯದಲ್ಲಿ ಸಂಚಲನ ಶುರುವಾಗಿದೆ. ಫೆಬ್ರುವರಿ 26ರೊಳಗೆ ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯರಾಗಲೇಬೇಕಾದ ಅಗತ್ಯ ಡಿಸಿಎಂ ಲಕ್ಷ್ಣಣ ಸವದಿ ಅವರಿಗಿದೆ.

ವಿಧಾನ ಪರಿಷತ್ ಚುನಾವಣೆಗೆ ದಿನಾಂಕ, ಸಿಎಂಗೆ ಧರ್ಮಸಂಕಟ?

Deputy CM Laxmana Savadi is bjp candiadate for upcoming council election

ಆದರೆ ಹೈಕಮಾಂಡ್ ಏನೂ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದು ಇನ್ನೂ ನಿಗೂಢವಾಗಿದೆ. ಫೆಬ್ರವರಿ.17ರಂದು ಒಂದು ವಿಧಾನ ಪರಿಷತ್ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ಫೆಬ್ರವರಿ.06 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಲಿದೆ.

English summary
Deputy CM Laxmana Savadi is bjp candiadate for upcoming council election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X