ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಯುಭಾರ ಕುಸಿತ: ರಾಜ್ಯದಲ್ಲಿ ಎರಡು ದಿನ ಮಳೆ ಸಾಧ್ಯತೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 08: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಕಡೆ ಇಂದು ಸಂಜೆ ಅಲ್ಪ ಮಳೆಯಾಗಿದೆ, ಇದೇ ಮಳೆ ಇನ್ನೂ ಎರಡು-ಮೂರು ದಿನಗಳ ಕಾಲ ಮುಂದುವರೆಯಲಿದೆ ಎನ್ನುತ್ತಿದೆ ಹವಾಮಾನ ಇಲಾಖೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಇದರ ಪರಿಣಾಮವಾಗಿ ರಾಜ್ಯದಲ್ಲಿ ಎರಡು-ಮೂರು ದಿನ ತುಂತುರು ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

'ಕಾದಿದ್ದ' ಬೆಂಗಳೂರು ಮಣ್ಣಿಗೆ ಮಳೆಯ ಮೊದಲ ಮುತ್ತು'ಕಾದಿದ್ದ' ಬೆಂಗಳೂರು ಮಣ್ಣಿಗೆ ಮಳೆಯ ಮೊದಲ ಮುತ್ತು

ಬಿಸಿನಿಂದ ಬೆಂದಿದ್ದ ರಾಜ್ಯಕ್ಕೆ ಇದು ಸಿಹಿ ಸುದ್ದಿಯಾಗಿದ್ದು, ಎರಡು-ಮೂರು ದಿನಗಳ ಕಾಲ ವಾತಾವರಣ ತಂಪಾಗಿರಲಿದೆ, ಸತತ ಬಿಸಿಲಿನಿಂದ ಬೆಂದಿದ್ದ ಜನಕ್ಕೆ ತಂಪಿನ ಅನುಭವ ಆಗಲಿದೆ.

Depression in sea, likely to rain in Karnataka

ಇಂದು ಬೆಂಗಳೂರಿನ ಹಲವೆಡೆ ಮಳೆಯಾಗಿದ್ದು, ಯುಗಾದಿ ವರ್ಷಾರಂಭದ ಮೊದಲ ಮಳೆ ನಗರ ವಾಸಿಗಳಲ್ಲಿ ಉಲ್ಲಾಸ ತಂದಿದೆ.

ಬಿಸಿಲ ಜಿಲ್ಲೆ ಬಾಗಲಕೋಟೆಗೆ ತಂಪೆರದ ಮಳೆ, ಕೆಲವೆಡೆ ಅಲ್ಪ ಹಾನಿಬಿಸಿಲ ಜಿಲ್ಲೆ ಬಾಗಲಕೋಟೆಗೆ ತಂಪೆರದ ಮಳೆ, ಕೆಲವೆಡೆ ಅಲ್ಪ ಹಾನಿ

ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು, ಆಂಧ್ರಪ್ರದೇಶ, ಕೇರಳಗಳಲ್ಲೂ ಅಲ್ಲಲ್ಲಿ ಅಲ್ಪ ಪ್ರಮಾಣದ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

English summary
Karnataka may see rain for two days as depression happening in the bay of Bengal sea. Today there was rain in Bengaluru and other parts of south Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X