• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡೆಂಗ್ಯೂ, ವೈರಲ್ ಜ್ವರವೇ? ರಕ್ತ ಬೇಕೆ?

By Mahesh
|

ಬೆಂಗಳೂರು, ಸೆ. 26: ಡೆಂಗ್ಯೂ, ವೈರಲ್ ಫೀವರ್ ಗಳಿಂದ ಬಳಲುತ್ತಿರುವ ರೋಗಿಗಳಿಗೆ ರಕ್ತದ ಅಗತ್ಯ ಹೆಚ್ಚಾಗಿರುತ್ತದೆ. ಸಮಯಕ್ಕೆ ಸರಿಯಾದ ರಕ್ತ ಒದಗಿಸಲು ಸಾಧ್ಯವಾಗುವುದಿಲ್ಲ ಎಂಬ ಕೊರಗನ್ನು ನೀಗಿಸಲು ಮೊಬೈಲ್ ಅಪ್ಲಿಕೇಷನ್ ಇಲ್ಲಿದೆ.

ಡೆಂಗ್ಯೂ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳಿವು...

ಅನೇಕ ಬ್ಲಡ್ ಬ್ಯಾಂಕ್ ಗಳಿದ್ದೂ, ಸ್ನೇಹಿತ ಹಾಗೂ ಸಂಬಂಧಿಕರ ನೆಟ್‌ವರ್ಕ್ ಇದ್ದರೂ ರಕ್ತವನ್ನು ಹೊಂದಿಸಲಾಗದ ಘಟನೆಗಳಿವೆ. ಇಂಥ ಪರಿಸ್ಥಿತಿಗಳಿಂದ ಹೊರಬರಲು ಅವಿರತ ಸಂಸ್ಥೆ ಸರಳವಾದ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ಹೊರ ತಂದಿದ್ದು, ಜನಪ್ರಿಯತೆ ಗಳಿಸುತ್ತಿದೆ.

ನಮ್ಮ ಕುಟುಂಬದವರೊ, ಸಂಬಂಧಿಕರೊ, ಸ್ನೇಹಿತರೊ ಅಥವಾ ನೆರೆಹೊರೆಯವರೊ ಅನಾರೋಗ್ಯ ಕಾರಣದಿಂದ ಬಳಲುತಿದ್ದಾಗ ಅವಶ್ಯಕ ರಕ್ತ ಲಭ್ಯವಿಲ್ಲದೆ ಪರಿದಾಡಿದ, ತೊಂದರೆಗೊಳಗಾದ ಸಾಕಷ್ಟು ಉದಾಹರಣೆಗಳು ಕಣ್ಣ ಮುಂದಿರುತ್ತದೆ. ರಕ್ತ ಹೊಂದಿಸಿದರೂ ಹಿಮೋಗ್ಲೋಬಿನ್, ಪೇಟ್ಲೆಟ್ಸ್, ಅದು ಇದು ಎಂದು ವಿಂಗಡಿಸಿ ಅಳೆದು ತೂಗಿ ರಕ್ತ ನೀಡಬೇಕಾಗುತ್ತದೆ.

ಡೆಂಗ್ಯೂ ತಡೆಗೆ ಯಾವ ಮುಂಜಾಗ್ರತಾ ಕ್ರಮ ಬೇಕು?

ಡೆಂಗ್ಯೂ ಬಗ್ಗೆ ಖಂಡಿತಾ ಭಯ ಬೇಡ, ಆದರೆ ಎಚ್ಚರ ಇರಲಿ,ಸಾಮೂಹಿಕ ಜವಾಬ್ದಾರಿ ಮತ್ತು ಸಮುದಾಯದ ಆಸಕ್ತಿ , ಸ್ಥಳೀಯ ಮತ್ತು ನಗರಾಡಳಿತ ಹಾಗೂ ಆರೋಗ್ಯ ಇಲಾಖೆಯ ಜವಾಬ್ದಾರಿ ನಿರ್ವಹಣೆಯಿಂದ ಮಾತ್ರ ರೋಗ ತಡೆ ಸಾಧ್ಯ. ಅದಕ್ಕೆ ಎಲ್ಲರೂ ಒಟ್ಟಾಗಿ ಕೈ ಜೋಡಿಸಿದರೆ ಈ ಮಹಾಮಾರಿಯನ್ನು ತಡೆಯಬಹುದು.

ರಕ್ತದಾನ ಮಾಡಿದರೆ ದೇಹದ ತೂಕ ಕಡಿಮೆಯಾಗುತ್ತದೆ, ಅಥವಾ ಅಶಕ್ತತೆ ಕಾಡುತ್ತದೆ... ಇತ್ಯಾದಿ, ಇತ್ಯಾದಿ. ಆದರೆ ಇದ್ಯಾವುದೂ ಸತ್ಯವಲ್ಲ. ರಕ್ತ ನಮ್ಮ ದೇಹದ ಒಟ್ಟು ತೂಕದ ಶೇ.7 ಪ್ರತಿಶತ ಮಾತ್ರ ಇರುತ್ತದೆ.

ಡೆಂಗ್ಯೂ ಸೊಳ್ಳೆಯನ್ನು ನಿರ್ನಾಮ ಮಾಡುವ ಗಪ್ಪಿ ಮೀನು!

ಅವಿರತದ ಪ್ರಮುಖ ಕಾರ್ಯಕ್ಷೇತ್ರಗಳಲ್ಲಿ "ಆರೋಗ್ಯ"ವು ಕೂಡ ಒಂದು. ಪ್ರತಿ ವರ್ಷ, ಅವಿರತವು ಹಳ್ಳಿಯ ಶಾಲಾ ಮಕ್ಕಳಿಗೆ ಆರೋಗ್ಯ ಶಿಬಿರವನ್ನು ಏರ್ಪಡಿಸುತ್ತ ಬಂದಿದೆ. ಈ ಅಪ್ಲಿಕೇಷನ್ ನಲ್ಲಿ ವಿವಿಧ ಗುಂಪಿಗೆ ಸೇರಿದ ರಕ್ತದಾನಿಗಳ ಡಾಟಾಬೇಸ್ ಇರುತ್ತದೆ. ಈ ಅಪ್ಲಿಕೇಷನ್ ಗೆ ಈಗ ಹೆಚ್ಚಿನ ಉಪಯೋಗ ಕಂಡು ಬಂದಿದೆ ಎಂದು ಅವಿರತ ಸಂಸ್ಥೆ ಅಧ್ಯಕ್ಷ ಕೆ.ಟಿ ಸತೀಶ್ ಗೌಡ ಅವರು ಒನ್ಇಂಡಿಯಾಕ್ಕೆ ತಿಳಿಸಿದರು. ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಿ

English summary
As various fevers like dengue, chikungunya and laryngitis are going around, hospitals are filled with patients demand for blood donors has increased. Here is mobile phone application by Aviratha Trust which has donors list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X